Seema Haider: ಪಾಕ್ ನ ಸೀಮಾ ಹೈದರ್ (Seema Haider) ಮತ್ತು ಭಾರತದ ಸಚಿನ್ ಮೀನಾ (Sachin Meena) ಪ್ರೇಮಕಥೆ ಹಿಂದೊಮ್ಮೆ ಇಡೀ ದೇಶದಲ್ಲೇ ಒಂದು ದೊಡ್ಡ ಸಂಚಲನವನ್ನು ಸೃಷ್ಟಿಸಿತ್ತು. ಗಡಿದಾಟಿ ಬಂದಿದ್ದ ಇವರ ಪ್ರೇಮ ಕಥೆ ಎಲ್ಲೆಲ್ಲೂ ಸುದ್ದಿಯಾಗಿತ್ತು. ಅನಂತರ ಜನರು ಇವರನ್ನು ಮರೆತೇ ಬಿಟ್ಟರು ಎನ್ನುವಾಗಲೇ ಈಗ ಕಳೆದ ಕೆಲವು ದಿನಗಳಿಂದ ಮತ್ತೊಮ್ಮೆ ಇವರು ಮುನ್ನೆಲೆಗೆ ಬಂದಿದ್ದಾರೆ. ಸ್ವಲ್ಪ ಸಮಯದ ಹಿಂದೆ ಸೀಮಾ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದ ಆಕೆಯ ಮಾಜಿ ಪತಿ ಗುಲಾಮ್ ಹೈದರ್ (Ghulam Haider) ಈಗ ಮತ್ತೊಮ್ಮೆ ಸ್ಫೋಟಕ ಸುದ್ದಿಯೊಂದನ್ನು ರಿವೀಲ್ ಮಾಡಿದ್ದಾನೆ.
ಈ ವಿಚಾರವಾಗಿ ಗುಲಾಮ್ ಹೈದರ್ ನ ಪರ ಲಾಯರ್ ಮೊಮಿಮ್ ಮಲಿಕ್ ಒಂದಷ್ಟು ವಿಚಾರಗಳನ್ನು ತಿಳಿಸಿದ್ದು, ಸೀಮಾ ಹೈದರ್ ಹಾಗೂ ಆಕೆಯ ಕುಟುಂಬಸ್ಥರು ಪಾಕಿಸ್ತಾನ ಸೇನೆಯೊಂದಿಗೆ ನಿರಂತರವಾಗಿ ಸಂಪರ್ಕವನ್ನು ಹೊಂದಿದ್ದರು. ಅಲ್ಲದೇ ಅವರು ಪಾಕಿಸ್ತಾನಕ್ಕೆ ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಈ ವಿಚಾರವಾಗಿ ನಾವು ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡುತೇವೆ ಮತ್ತು ಸೂಕ್ತವಾದ ಸಾಕ್ಷ್ಯಗಳು ನಮ್ಮಲ್ಲಿವೆ ಎಂದಿದ್ದಾರೆ.
ಸೀಮಾ ತನ್ನಲ್ಲಿದ್ದ ಪೋನನ್ನು ತಾನೇ ರಿಪೇರಿ ಮಾಡಿಕೊಳ್ಳುತ್ತಿದ್ದಳು. ಟಿಕ್ ಟಾಕ್ ಬ್ಯಾನ್ ಆದ ಮೇಲೂ ಆಕೆ ಅದನ್ನ ಬಳಕೆ ಮಾಡ್ತಾ ಇದ್ದಳು. ಅವಳಿಗೆ ಪಬ್ಜಿ ಬಗ್ಗೆ ಯಾವುದೇ ಜ್ಞಾನ ಇರ್ಲಿಲ್ಲ. ಆದ್ರೆ ಆಕೆಗೆ ಕಂಪ್ಯೂಟರ್ ನಲ್ಲಿ ವಿಶೇಷ ಪರಿಣಿತಿ ಇದೆ. ಜೈಲು ಶಿಕ್ಷೆ ಆಗುತ್ತೆ ಅನ್ನೋ ಭಯದಿಂದ ಅವಳು ಮಕ್ಕಳ ಸಮೇತ ಭಾರತಕ್ಕೆ ಓಡಿ ಹೋಗಿದ್ದಾಳೆ. ನಂತರ ಅವಳು ಭಾರತದ ಗಡಿಯಲ್ಲಿ ಸಿಕ್ಕಿ ಬಿದ್ದ ಸಂದರ್ಭದಲ್ಲಿ ತನ್ನ ಮಗಳಿಹೆ ಬೇಕಂತಲೇ ವಾಂತಿ ಮಾಡಿಸಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾಳೆ.
ಸೀಮಾ ತನ್ನ ಗಂಡನನ್ನು ಬಿಡೋ ಮೊದಲೇ ಎರಡು ಸಲ ಭಾರತಕ್ಕೆ ಭೇಟಿಯನ್ನು ಕೊಟ್ಟಿದ್ಲು. ನಮ್ಮ ಬಳಿ ಅದಕ್ಕೆ ಸಂಬಂಧಿಸಿದಂತಹ ಸಾಕ್ಷ್ಯಗಳು ಮಾತ್ರವೇ ಅಲ್ಲದೇ ಆಡಿಯೋ ಸಹಾ ಇದ್ದು, ಅದನ್ನು ನಾವು ಕೋರ್ಟ್ ನಲ್ಲಿ ಹಾಜರು ಪಡಿಸುತ್ತೇವೆ ಎಂಬುದಾಗಿ ಸೀಮಾಳ ಮಾಜಿ ಪತಿ ಗುಲಾಮ್ ಹೈದರ್ ಪರ ವಕೀಲ ಮಾಹಿತಿಯನ್ನು ಶೇರ್ ಮಾಡಿದ್ದಾರೆ.