Government Schemes: ಈ ಯೋಜನೆ ಮೂಲಕ ಮಗಳ ಭವಿಷ್ಯ ಸುರಕ್ಷಿತವಾಗಿರಿಸಿ; ಮದುವೆ ವೇಳೆಗೆ ಹಣ ಪಡೆಯಿರಿ

Written by Soma Shekar

Published on:

---Join Our Channel---

Government Schemes: ದೇಶದಲ್ಲಿ ಹೆಣ್ಣು ಮಕ್ಕಳ ಭವಿಷ್ಯವನ್ನು ಸುಧಾರಿಸಲು ಸರ್ಕಾರ ಹಲವು ರೀತಿಯ ಯೋಜನೆಗಳು (Government Schemes) ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇವುಗಳಲ್ಲಿ ಅತ್ಯಂತ ಜನಪ್ರಿಯವಾದುದು ಸುಕನ್ಯಾ ಸಮೃದ್ಧಿ ಯೋಜನೆ. ಈ ಯೋಜನೆ ನಿಮ್ಮ ಮಗಳ ಆರ್ಥಿಕ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಒಂದು ಉತ್ತಮ ದೀರ್ಘಾವಧಿಯ ಹೂಡಿಕೆಯ ಆಯ್ಕೆ ಎಂದರೆ ತಪ್ಪಲ್ಲ.

ಈ ಯೋಜನೆಯು ಮಗಳ ಶಿಕ್ಷಣ ಮತ್ತು ಮದುವೆ ಗಳಂತಹ ವೆಚ್ಚಗಳನ್ನು ಭರಿಸಲು ನಿಮಗೆ ನೆರವಾಗುತ್ತದೆ. ಈ ಯೋಜನೆಯು 21 ವರ್ಷಗಳ ಕಾಲಾವಧಿಯದ್ದಾಗಿದೆ. ಮೊದಲ 15 ವರ್ಷಗಳವರೆಗೆ ಪೋಷಕರು ಹಣ ಹೂಡಿಕೆ ಮಾಡುತ್ತಾರೆ. ಈ ಖಾತೆಯು ಅದಾದ ನಂತರವೂ ಮುಂದಿನ ಆರು ವರ್ಷಗಳವರೆಗೆ ತೆರೆದಿರುತ್ತದೆ, ಆದರೆ ಹೆಚ್ಚುವರಿ ಹಣ ಹೂಡವ ಅಗತ್ಯ ಇರುವುದಿಲ್ಲ.

ಸುಕನ್ಯಾ ಸಮೃದ್ಧಿ ಯೋಜನೆಯು (Sukanya Samruddhi Scheme) 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಲು ಪೋಷಕರಿಗೆ ಅವಕಾಶವನ್ನು ಮಾಡಿಕೊಡುತ್ತದೆ. ಇಲ್ಲಿ ವಾರ್ಷಿಕ 250 ರಿಂದ 1.50 ಲಕ್ಷ ರೂ.ವರೆಗೆ ಠೇವಣಿ ಇಡಬಹುದು. ಇದರ ಮೆಚ್ಯೂರಿಟಿ ಅವಧಿ 21 ವರ್ಷಗಳಾಗಿದೆ. ಇದರಲ್ಲಿ ಹುಡುಗಿಗೆ 18 ವರ್ಷ ತುಂಬಿದಾಗ, ಶಿಕ್ಷಣದ ವೆಚ್ಚಗಳಿಗಾಗಿ ಖಾತೆಯ ಬಾಕಿಯ 50% ವರೆಗೆ ಹಿಂದಕ್ಕೆ ಪಡೆಯಬಹುದು.

ಇದಕ್ಕಾಗಿ ಖರ್ಚಿನ ಪುರಾವೆ ಅಗತ್ಯವಿರುತ್ತದೆ. ಹಿಂಪಡೆಯುವಿಕೆಯ ಪ್ರಕ್ರಿಯೆಯನ್ನು ನೀವು ಕಂತುಗಳಲ್ಲಿ ಅಥವಾ ಒಟ್ಟು ಮೊತ್ತದಲ್ಲಿ ಮಾಡಬಹುದಾಗಿರುತ್ತದೆ. ಐದು ವರ್ಷಗಳ ಅವಧಿಯಲ್ಲಿ ವರ್ಷಕ್ಕೊಮ್ಮೆ ನೀವು ಮೊತ್ತವನ್ನು ಹಿಂಪಡೆಯಬಹುದು. ಈ ಯೋಜನೆಯಲ್ಲಿ, ನಿಮ್ಮ ಮಗಳ ಮದುವೆಗಾಗಿ ನಿಮ್ಮ ಖಾತೆಯಲ್ಲಿ ಠೇವಣಿ ಮಾಡಿದ ಒಟ್ಟು ಮೊತ್ತದ 50% ಅನ್ನು ನೀವು ಹಿಂಪಡೆಯಬಹುದು.

ನಿಯಮಗಳ ಪ್ರಕಾರ, ಮದುವೆಗೆ ಒಂದು ತಿಂಗಳ ಹಿಂದಿನಿಂದ ಮದುವೆಯಾದ ಮೂರು ತಿಂಗಳವರೆಗೆ ಹಣವನ್ನು ಹಿಂಪಡೆಯಬಹುದು. ಪೂರ್ತಿ ಹಣವನ್ನು ಮಗಳಿಗೆ 21 ವರ್ಷ ತುಂಬಿದಾಗ ಮಾತ್ರವೇ ಹಿಂಪಡೆಯಲು ಸಾಧ್ಯ. ಈ ಯೋಜನೆಯಲ್ಲಿ 8% ರಷ್ಟು ಬಡ್ಡಿ ದರವು ಲಭ್ಯವಿದೆ. ಯೋಜನೆಗೆ ಸೇರಲು, ನಿಮ್ಮ ಸ್ಥಳೀಯ ಅಂಚೆ ಕಚೇರಿ ಅಥವಾ ಬ್ಯಾಂಕ್‌ಗೆ ಭೇಟಿ ನೀಡಿ.

ಅಂಚೆ ಕಚೇರಿ ಅಥವಾ ಬ್ಯಾಂಕ್ ನಲ್ಲಿ ನೀವು ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ತೆರೆಯಬಹುದಾಗಿದ್ದು, ಈ ಯೋಜನೆಯ ಅಡಿಯಲ್ಲಿ, ನೀವು ನಗದು, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡಬಹುದಾಗಿದೆ.‌

Actress Rekha: ಮೂವರನ್ನ ಮದುವೆ ಆಗಿದ್ದೇನೆ ಅದಕ್ಕೆ ಸಿಂಧೂರ ಇಡುತ್ತೇನೆ; ನಟಿ ರೇಖಾ ಶಾಕಿಂಗ್ ಮಾತು

Leave a Comment