Bigg Boss ಮನೆಯಲ್ಲಿ ಲಾಯರ್ ಜಗದೀಶ್ ಬಗ್ಗೆ ಶಾಕಿಂಗ್ ವಿಷಾರಗಳನ್ನ ಶೇರ್ ಮಾಡಿದ ಗೌತಮಿ ಜಾದವ್

Written by Soma Shekar

Published on:

---Join Our Channel---

Bigg Boss : ಬಿಗ್ ಬಾಸ್ (Bigg Boss) ಮನೆಯಲ್ಲಿ ತಾವು ಮಾಡುತ್ತಿರುವ ಕೆಲಸಗಳು, ಆಡುವ ಮಾತುಗಳು ಹಾಗೂ ಕ್ರೋಧ, ಆವೇಶಗಳಿಂದಲೇ ಸದ್ದು ಮಾಡುತ್ತಿರುವ ಸ್ಪರ್ಧಿ ಜಗದೀಶ್ (Jagadish) ಅವರು. ಒಂದು ಹಂತದಲ್ಲಿ ಬಿಗ್ ಬಾಸ್ ನ ಎಕ್ಸ್ ಪೋಸ್ ಮಾಡ್ತೀನಿ ಅಂತ ಚಾಲೆಂಜ್ ಮಾಡಿದ್ದ ಅವರು ವೀಕೆಂಡ್ ಪಂಚಾಯತಿಯಲ್ಲಿ ಕಿಚ್ಚನ ಮುಂದೆ ಕ್ಷಮೆ ಕೇಳಿದ್ದಾರೆ.

ಇದೇ ವೇಳೆ ಮತ್ತೋರ್ವ ಸ್ಪರ್ಧಿ ಗೌತಮಿ ಜಾಧವ್ (Gautami Jadhav) ಅವರು ಜಗದೀಶ್ ಅವರು ತಮಗೆ ಹೇಗೆ ಆಟ ಆಡಬೇಕಂತ ಹೇಳಿಕೊಟ್ರು ಅನ್ನೋ ವಿಚಾರವನ್ನು ಶೇರ್ ಮಾಡಿದ್ದಾರೆ. ಜಗದೀಶ್ ಅವರು ಯಾರ ಮಾತನ್ನು ಕೇಳೋದಿಲ್ಲ. ಅವರನ್ನ ನಾನು ಬಹಳ‌ ಗಮನಿಸಿದ್ದೇನೆ. ಅವರು ಬೆಳಗ್ಗೆಯಿಂದ ಒಂದು ರೀತಿ ಇರ್ತಾರೆ ಆದ್ರೆ ಮಧ್ಯಾಹ್ನದ ಮೇಲೆ ಚೇಂಜ್ ಆಗಿ ಬಿಡ್ತಾರೆ.

ಅವರು ಇದನ್ನೆಲ್ಲಾ ಬೇಕು ಬೇಕು ಅಂತಾನೇ ಮಾಡ್ತಾ ಇದ್ದಾರೆ ಅನ್ನೋದು ಅವರು ನನಗೆ ಕೊಡೋ ಸಲಹೆಗಳಿಂದ ಗೊತ್ತಾಯ್ತು. ಕನ್ಫೆಷನ್ ರೂಮ್‌ ನಲ್ಲಿ ಅವರು ನನಗೆ ಸಲಹೆಗಳನ್ನ ಕೊಡ್ತಿದ್ರು, ಇದು ಕಂಟೆಂಟ್, ಹಿಂಗ್ ಮಾತಾಡಬೇಕು, ಇದನ್ನೆಲ್ಲಾ ನೀವು ಕಲಿತುಕೊಳ್ಳಿ ಅಂತ ಅವರು ನನಗೆ ಹೇಳುತ್ತಿದ್ದರು.

ಅಲ್ಲದೇ ನಾನು ಬಳಸೋ ಪಾಯಿಂಟ್ಸ್‌ ನ ನೀವು ಉಪಯೋಗಿಸಿಕೊಳ್ಳಿ ಅಂತಾನೂ ಅವರು ನನಗೆ ಹೇಳಿದ್ದರು ಅನ್ನೋ ವಿಚಾರಗಳನ್ನು ಗೌತಮಿ ಅವರು ಕಿಚ್ಚ ಸುದೀಪ್ ಅವರ ಮುಂದೆ ಹೇಳಿಕೊಂಡಿದ್ದಾರೆ. ಇನ್ನು ಎರಡನೇ ವಾರದಲ್ಲಿ ಜಗದೀಶ್ ಅವರ ವರ್ತನೆಯಲ್ಲಿ ಯಾವ ಬದಲಾವಣೆ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.‌

Mahesh Babu ರಿಜೆಕ್ಟ್ ಮಾಡಿದ ಸಿನಿಮಾಗಳೇ ಮತ್ತೊಬ್ಬ ಸ್ಟಾರ್ ವೃತ್ತಿಗೆ ಮೈಲಿಗಲ್ಲುಗಳಾಯ್ತು; ಯಾರು ಆ ಸ್ಟಾರ್ ನಟ?

Leave a Comment