Sangeetha Sringeri: ಆಗ ಸಿಗದಿದ್ರೆ ಏನು, ಈಗ ಸಿಕ್ಕಾಯ್ತು, ಬಿಗ್ ಬಾಸ್ ಬೆಡಗಿ ಸಂಗೀತಾ ಶೃಂಗೇರಿಗೆ ಜನ ಕೊಟ್ಟ ಪ್ರಶಸ್ತಿ

Written by Soma Shekar

Published on:

---Join Our Channel---

Sangeetha Sringeri: ಸ್ಯಾಂಡಲ್ವುಡ್ ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರು ಬಿಗ್ ಬಾಸ್ ಕನ್ನಡ ಸೀಸನ್ ಹತ್ತರಲ್ಲಿ ಟಾಪ್ ತ್ರಿ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದವರು. ಬಿಗ್ ಬಾಸ್ ಸ್ಪರ್ಧಿಯಾಗಿ ಅವರು ದೊಡ್ಡ ಅಭಿಮಾನಿಗಳ ಬಳಗವನ್ನು ಪಡೆದುಕೊಂಡಿದ್ದಾರೆ. ಸಿನಿಮಾಕ್ಕಿಂತ ರಿಯಾಲಿಟಿ ಶೋ ಮೂಲಕವೇ ಅವರು ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡರು ಎನ್ನುವುದರಲ್ಲಿ ಎರಡು ಮಾತಿಲ್ಲ.

ಈಗ ನಟಿ ಕಲರ್ಸ್ ಕನ್ನಡ ವಾಹಿನಿಯ ಪ್ರತಿಷ್ಠಿತ ಅನುಬಂಧ ಅವಾರ್ಡ್ಸ್ ನಲ್ಲಿ (Anubandha Awards) ಪ್ರಶಸ್ತಿಯನ್ನು ಪಡೆದಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿದೆ. ಹೌದು, ಅನುಬಂಧ ಅವಾರ್ಡ್ಸ್ ನಲ್ಲಿ ಯೂತ್ ಐಕಾನ್ ಅವಾರ್ಡ್ ಗೆ ಭಾಗ್ಯ, ವೈಷ್ಣವ್‌, ರಚನಾ, ಅಪ್ಪು, ರಾಮಚಾರಿ, ಕರ್ಣ, ಆರಾಧನಾ, ತೀರ್ಥ ಮತ್ತು ಸಂಗೀತಾ ಶೃಂಗೇರಿ ಅವರು ನಾಮಿನೇಟ್ ಆಗಿದ್ದರು.

ಸೋಶಿಯಲ್ ಮೀಡಿಯಾಗಳಲ್ಲಿ ಒಂದು ವೀಡಿಯೋ ಹರಿದಾಡಿದ್ದು ಇದರಲ್ಲಿ ಅನುಬಂಧ ಅವಾರ್ಡ್ಸ್ ವೇದಿಕೆಯಲ್ಲಿ ನಟಿಯು ಪ್ರಶಸ್ತಿ ಪಡೆದು ಬರುವುದು ಕಂಡಿದ್ದು, ಇದನ್ನು ನೋಡಿದ ಅಭಿಮಾನಿಗಳು ಸಂಗೀತ ಶೃಂಗೇರಿ ಅವರಿಗೆ ಜನಮೆಚ್ಚಿದ ಯೂತ್ ಐಕಾನ್ ಪ್ರಶಸ್ತಿ ಸಿಕ್ಕಿದೆ ಎಂದಿದ್ದಾರೆ. ‌

ಬಿಗ್ ಬಾಸ್ ಕನ್ನಡ ಸೀಸನ್ ಹತ್ತರಲ್ಲಿ (Bigg Boss Kannada Season 10) ಸಿಕ್ಕಾಪಟ್ಟೆ ಸದ್ದು ಮತ್ತು ಸುದ್ದಿಯನ್ನು ಮಾಡಿದ ಇಬ್ಬರು ಸ್ಪರ್ಧಿಗಳಲ್ಲಿ ಸಂಗೀತಾ ಶೃಂಗೇರಿ ಸಹಾ ಒಬ್ಬರು. ಶೋನಲ್ಲಿ ಮಿಂಚಿದ್ದ ಇವರು ಅನೇಕರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದರು. ಅದೇ ಕಾರಣಕ್ಕೆ ಈಗ ಜನರಿಂದ ಅವರು ಯೂತ್‌ ಐಕಾನ್ ಅವಾರ್ಡ್ ಗೆ ಆಯ್ಕೆ ಆಗಿದ್ದಾರೆನ್ನುವುದು ಫ್ಯಾನ್ಸ್ ಅಭಿಪ್ರಾಯ.

Leave a Comment