Sangeetha Sringeri: ಬಿಗ್ ಬಾಸ್ ಕನ್ನಡ ಸೀಸನ್ ಹತ್ತರಲ್ಲಿ (Bigg Boss Kannada 10) ಬಿಗ್ ಮನೆಯಲ್ಲಿದ್ದಂತಹ ಅನ್ಯ ಸ್ಪರ್ಧಿಗಳಿಗೆ ಹೋಲಿಕೆ ಮಾಡಿ ನೋಡಿದಾಗ, ನಟಿ ಸಂಗೀತಾ ಶೃಂಗೇರಿ ಅವರು ಸೀಸನ್ ಮುಗಿದ ಮೇಲೆ ಅನ್ಯ ಸ್ಪರ್ಧಿಗಳ ಜೊತೆಗೆ ಅಷ್ಟಾಗಿ ಕಾಣಿಸಿಕೊಂಡಿಲ್ಲ. ವರ್ತೂರು ಸಂತೋಷ್ ಅವರ ಮನೆಯ ಕಾರ್ಯಕ್ರಮವೊಂದರಲ್ಲಿ ಮಾತ್ರವೇ ಸಂಗೀತಾ ಕಾಣಿಸಿಕೊಂಡಿದ್ದರು. ಅದು ಬಿಟ್ಟರೆ ಉಳಿದವರ ಜೊತೆಗೆ ನಟಿ ಕಾಣಿಸಿಕೊಂಡಿಲ್ಲ.
ತನಿಷಾ ಕುಪ್ಪಂಡ ಅವರ ಆಭರಣ ಮಳಿಗೆಯ ಕಾರ್ಯಕ್ರಮ, ನಮ್ರತಾ ಗೌಡ ಅವರ ಜನ್ಮದಿನದ ಕಾರ್ಯಕ್ರಮಗಳಲ್ಲಿ ಸಂಗೀತಾ (Sangeetha Sringeri) ಭಾಗಿಯಾಗಿರಲಿಲ್ಲ. ಬಿಗ್ ಬಾಸ್ ನಂತರ ನಟಿಯು ತಮ್ಮ ಹೊಸ ಸಿನಿಮಾದ ಪ್ರಚಾರದಲ್ಲಿಯೇ ಬ್ಯುಸಿಯಾಗಿದ್ದರು.
ಸಿರಿ ಅವರ ಜನ್ಮ ದಿನಕ್ಕೆ ಅವರ ಮನೆಗೆ ಹೋಗಿ ಉಡುಗೊರೆ ನೀಡಿದ್ದರುಸಂಗೀತಾ. ಈಗ ಇಶಾನಿ ಅವರ ಸಹೋದರನ ಮದುವೆಯ ಸಮಾರಂಭದಲ್ಲಿ ಸಂಗೀತಾ ಭಾಗಿಯಾಗಿದ್ದಾರೆ.
ಇಶಾನಿ ಅವರ ಸಹೋದರನ ಮದುವೆಯಲ್ಲಿ ಸಂಗೀತಾ ಶೃಂಗೇರಿ ಅವರು ತಮ್ಮ ಸಹೋದರ ಮತ್ತು ಅತ್ತಿಗೆ ಸುಚಿತ್ರ ಅವರ ಜೊತೆಗೆ ಭಾಗಿಯಾಗಿದ್ದಾರೆ.
ಇಶಾನಿ (Eshani) ಜೊತೆಗೆ ಮದುವೆ ಸಮಾರಂಭದಲ್ಲಿ ಕಳೆದ ಖುಷಿಯ ಕ್ಷಣಗಳ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇಶಾನಿ ಅವರ ಅಣ್ಣ ಯಾರು? ಮದುವೆ ನಡೆದಿದ್ದು ಎಲ್ಲಿ ? ಎನ್ನುವ. ವಿಷಯಗಳ ಕುರಿತಾಗಿ ಹೆಚ್ಚಿನ ಮಾಹಿತಿಗಳು ಇನ್ನೂ ಹೊರ ಬಂದಿಲ್ಲ.
ಆದರೆ ಸಂಗೀತಾ, ಇಶಾನಿ ಮತ್ತು ನೀತು ಜೊತೆಯಾಗಿರುವ ಫೋಟೋಗಳು ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗೋ ಮೂಲಕ ಎಲ್ಲರ ಗಮನವನ್ನು ಸೆಳೆದಿದೆ. ಫೋಟೋಗಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆಗಳನ್ನು ನೀಡಿದ್ದಾರೆ.
ಬಿಗ್ ಬಾಸ್ ನಂತರ ಸಂಗೀತಾ ಅವರು ತಮ್ಮ ಮಾರಿ ಗೋಲ್ಡ್ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದರು. ಅನ್ಯ ಸ್ಪರ್ಧಿಗಳ ಹಾಗೆ ಕಿರುತೆರೆಯಲ್ಲಿ ಯಾವುದೇ ಶೋ ಗಳಲ್ಲೂ ಸಹಾ ಸಂಗೀತ ಅವರು ಕಾಣಿಸಿಕೊಂಡಿರಲಿಲ್ಲ. ಇನ್ನು ಅವರ ಮುಂದಿನ ಸಿನಿಮಾ ಯಾವುದು ಅನ್ನೋ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.