Sangeetha Sringeri : ಸ್ಯಾಂಡಲ್ವುಡ್ ಸುಂದರಿ, ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಬಿಗ್ ಬಾಸ್ ನಂತರ ನಟಿಯ ಹೊಸ ಸಿನಿಮಾ ಕುರಿತಾಗಿ ಅಪ್ಡೇಟ್ ಇನ್ನೂ ಬಂದಿಲ್ಲವಾದರೂ, ಸೋಶಿಯಲ್ ಮೀಡಿಯಾ ಮೂಲಕ ನಟಿ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.

ಈಗ ಹೊಸ ಫೋಟೊ ಶೂಟ್ ಮೂಲಕ ನಟಿ ಅಭಿಮಾನಿಗಳು ಮತ್ತು ನೆಟ್ಟಿಗರ ಗಮನವನ್ನು ಸೆಳೆದಿದ್ದು, ನಟಿಯ ಹೊಸ ಕ್ಯೂಟ್ ಲುಕ್ ನೋಡಿದ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

ವಿಭಿನ್ನ ಲುಕ್ ಗಳನ್ನು ಟ್ರೈ ಮಾಡ್ತಿರೋ ಸಂಗೀತಾ ಈಗ ಡಂಗ್ರಿ ಸೂಟ್ ಧರಿಸಿ ಮಿಂಚಿದ್ದಾರೆ. ಎರಡು ಜಡೆ, ಪುಟ್ಟ ಡ್ರೆಸ್, ಉದ್ದನೆಯ ಬೂಟ್ ಧರಿಸಿ ಹೊಸ ಲುಕ್ ಮತ್ತು ಕ್ಯೂಟ್ ಆಗಿ ಕಾಣೋ ಲುಕ್ ನಲ್ಲಿ ಸಂಗೀತಾ ಕಂಡಿದ್ದಾರೆ.

ತೊಟ್ಟ ಡ್ರೆಸ್ ಗೆ ತಕ್ಕ ಹಾಗೆ ಹೇರ್ ಸ್ಟೈಲ್ ಅನ್ನು ಸಹಾ ಮಾಡಿಕೊಂಡಿದ್ದಾರೆ. ಜಡೆಗಳನ್ನು ಕೈಯಲ್ಲಿ ಹಿಡಿದುಕೊಂಡು ಕ್ಯಾಮರಾ ಕಣ್ಣಿಗೆ ಅಂದವಾಗಿ ಪೋಸ್ ಗಳನ್ನು ನೀಡಿದ್ದಾರೆ ಸಂಗೀತಾ.

ಸಂಗೀತಾ ಅವರ ಹೊಸ ಲುಕ್ ನೋಡಿದ ಅವರ ಅಭಿಮಾನಿಗಳು ಕಾಮೆಂಟ್ ಗಳ ಮೂಲಕ ಸಾಕಷ್ಟು ಮೆಚ್ಚುಗೆಗಳನ್ನು ನೀಡುತ್ತಾ, ನಟಿಯ ಅಂದವನ್ನು ಹಾಡಿ ಹೊಗಳುತ್ತಿದ್ದಾರೆ.

ಸಂಗೀತಾ ಶೃಂಗೇರಿ ಅವರು ಚಾರ್ಲಿ (Charlie) ಸಿನಿಮಾದ ನಂತರ ಹೆಚ್ಚು ಸದ್ದು ಮಾಡಿದ್ದು ಬಿಗ್ ಬಾಸ್ ಮೂಲಕ. ಬಿಗ್ ಬಾಸ್ ವಿನ್ನರ್ ಆಗೋ ಮಟ್ಟಿಗೆ ಸಂಗೀತಾ ಸದ್ದು ಮತ್ತು ಸುದ್ದಿ ಮಾಡಿದ್ದರು ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಜಗದೀಶ್ ಗೆ ಆ ಟೈಟಲ್ ಸಿಕ್ಕಿದ್ದೇ ನನ್ನಿಂದ, Bigg Boss Kannada ದಿಂದ ಹೊರ ಬಂದ ಹಂಸ ಶಾಕಿಂಗ್ ಮಾತು