Sangeetha Sringeri: ಬಿಗ್ ಬಾಸ್ ಬೆಡಗಿ, ಸ್ಯಾಂಡಲ್ವುಡ್ ನಟಿ ಸಂಗೀತಾ ಶೃಂಗೇರಿ (Sangeetha Sringeri) ಸೈಮಾ ಅವಾರ್ಡ್ಸ್ ನ ನಾಮಿನೇಷನ್ ಪಾರ್ಟಿಯಲ್ಲಿ ಭಾಗಿಯಾಗೋದಕ್ಕೆ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ನಟಿಯ ಲುಕ್ ಈಗ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗ್ತಿದೆ.
ಸಂಗೀತಾ ಶೃಂಗೇರಿ ಅವರು ಸ್ಯಾಂಡಲ್ವುಡ್ ನಟಿಯಾದ್ರು ಸಹಾ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಗಳಿಸಿದ್ದು ಮಾತ್ರ ಬಿಗ್ ಬಾಸ್ ಕನ್ನಡ ಸೀಸನ್ 10 ರ (Bigg Boss Kannada 10) ಮೂಲಕ ಅನ್ನೋದ್ರಲ್ಲಿ ಡೌಟೇ ಇಲ್ಲ ಎನ್ನಬಹುದು.
ಬಿಗ್ ಬಾಸ್ ನಲ್ಲಿ ಟಾಪ್ ತ್ರಿ ಯಲ್ಲಿ ನಟಿ ಸ್ಥಾನವನ್ನು ಪಡೆದಿದ್ರು. ಬಿಗ್ ಬಾಸ್ ನಂತರ ನಟಿಯ ಹೊಸ ಸಿನಿಮಾ ಅನೌನ್ಸ್ ಆಗಿಲ್ಲವಾದರೂ ನಟಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ಅನ್ನೋದು ನಿಜ.
ಇತ್ತೀಚಿಗೆ ನಟಿ ಸೈಮಾ ಅವಾರ್ಡ್ಸ್ ನ ನಾಮಿನೇಷನ್ ಪಾರ್ಟಿಗೆ ತೆರಳಿದ್ದರು. ಈ ವೇಳೆ ಸ್ಟೈಲಿಶ್ ಆಗಿ ಸಿದ್ಧವಾದ ತಮ್ಮ ಹೊಸ ಲುಕ್ ನ ಫೋಟೋಗಳನ್ನು ಶೇರ್ ಮಾಡಿಕೊಂಡು ಅಭಿಮಾನಿಗಳ ಗಮನವನ್ನು ಸೆಳೆದಿದ್ದಾರೆ.
ನಟಿಯು ಸಂಗೀತಾ ಕೆಂಪು ಬಣ್ಣದ ವೆಲ್ವೆಟ್ ಬ್ಲೇಸರ್ ಡ್ರೆಸ್ (red velvet blazer dress) ಧರಿಸಿದ್ದಾರೆ. ಅವರು ಹೊಸ ಲುಕ್ ಬಹಳ ವಿಶಿಷ್ಟವಾಗಿ ಕಾಣುತ್ತಿದ್ದು, ಅಭಿಮಾನಿಗಳ ಮೆಚ್ಚುಗೆಗಳನ್ನು ಪಡೆದುಕೊಂಡಿದೆ.
ನಟಿ ಫೋಟೋ ಶೇರ್ ಮಾಡಿದ ಕೂಡಲೇ ಫ್ಯಾನ್ಸ್ ಕಾಮೆಂಟ್ ಗಳನ್ನು ಮಾಡಿದ್ದಾರೆ. ಯಾವುದೇ ಲುಕ್ ನಲ್ಲಾದರೂ ನೀವು ನ್ಯಾಚುರಲ್ ಬ್ಯೂಟಿ ಎಂತಲೂ, ನೀವು ಕರ್ನಾಟಕದ ಸಮಂತಾ ಎಂದೂ ಹಾಡಿ ಹೊಗಳುತ್ತಿದ್ದಾರೆ.
Naga Chaitanya: ಮಗನ ಎಂಗೇಜ್ಮೆಂಟ್ ಗೆ ಬರ್ಲಿಲ್ಲ ಲಕ್ಷ್ಮಿ ದಗ್ಗುಬಾಟಿ, ನಾಗಚೈತನ್ಯ ಮೇಲೆ ತಾಯಿ ಕೋಪ ಏಕೆ?