Bigg Boss Kannada 11: ಬಿಗ್ ಬಾಸ್ ಗೆ ಅವಳಿ ಸಹೋದರಿಯರ ಎಂಟ್ರಿ, ಸ್ಪಷ್ಟನೆ ನೀಡಿದ ಅದ್ವಿತಿ ಶೆಟ್ಟಿ; ಫ್ಯಾನ್ಸ್ ಶಾಕ್

Written by Soma Shekar

Published on:

---Join Our Channel---

Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ (Bigg Boss Kannada 11) ವೇದಿಕೆ ಸಿದ್ಧವಾಗ್ತಿದೆ ಅನ್ನೋ ಸುದ್ದಿ ಬಂದಿದ್ದೇ ತಡ ಸಂಭಾವ್ಯ ಸ್ಪರ್ಧಿಗಳ ಹೆಸರು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಾ ಇದೆ. ವೈರಲ್ ಆಗಿರುವ ಹೆಸರುಗಳಲ್ಲಿ ಅವಳಿ ಸಹೋದರಿಯರಾದ ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ ಹೆಸರುಗಳು ಸೇರಿವೆ.

ಅದ್ವಿತಿ ಮತ್ತು ಅಶ್ವಿತಿ ದೊಡ್ಮನೆಗೆ ಬರ್ತಾರೆ ಅನ್ನೋ ಮಾತುಗಳು ಕೇಳಿ ಬಂದ ಬೆನ್ನಲ್ಲೇ ನಟಿ ಅದ್ವಿತಿ (Adhvithi Shetty) ಉತ್ತರವನ್ನು ನೀಡಿದ್ದು, ನಾವು ಬಿಗ್ ಬಾಸ್‌ಗೆ ಹೋಗ್ತೀವಿ ಅನ್ನೋದನ್ನ ನೀವೇ ನಿರ್ಧಾರ ಮಾಡೋಕೆ ಹೋಗಬೇಡಿ ಎನ್ನುವ ಮಾತುಗಳನ್ನು ಅವರು ಹೇಳಿದ್ದಾರೆ.

ಈ ಹಿಂದಿನ ಸೀಸನ್ ಗಳ ಸಮಯದಲ್ಲೂ ಸಹಾ ಇವರ ಹೆಸರುಗಳು ಕೇಳಿ ಬಂದಿದ್ದವು.‌ ಆದರೆ ಈ ಅವಳಿ ಸಹೋದರಿಯರು ಮಾತ್ರ ಅಧಿಕೃತವಾಗಿ ತಾವು ಬಿಗ್ ಬಾಸ್ ಮನೆಗೆ ಹೋಗುವುದಾಗಿ ಎಂದೂ ಕೂಡಾ ಹೇಳಿರಲಿಲ್ಲ. ಈ ಬಾರಿ ಸಹಾ ಇವರು ಬಿಗ್ ಬಾಸ್ ಮನೆಗೆ ಹೋಗ್ತಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು.

ಸುದ್ದಿಗಳು ವೈರಲ್ ಆಗಿದ್ದರಿಂದ, ನಾನೇ ಹೇಳುವವರೆಗೂ ದಯವಿಟ್ಟು ನೀವೇ ಕಲ್ಪನೆ ಮಾಡಿಕೊಳ್ಳಲು ಹೋಗಬೇಡಿ ಎಂದು ಅದ್ವಿತಿ ಅವರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿ ಧನ್ಯವಾದಗಳನ್ನು ಹೇಳಿದ್ದು, ನಮ್ಮನ್ನು ಹೀಗೆ ಬೆಂಬಲಿಸುತ್ತಾ ಇರಿ ಎಂದು ಮನವಿ ಮಾಡಿದ್ದಾರೆ. ಅಲ್ಲಿಗೆ ಅವಳಿ ಸಹೋದರಿಯರು ಬಿಗ್ ಬಾಸ್‌ ಗೆ ಹೋಗೋ ಸುದ್ದಿಗೆ ಸ್ಪಷ್ಟತೆ ಸಿಕ್ಕಿದೆ.

Virat Kohli: ಲಂಡನ್ ನಲ್ಲೇ ಇದ್ರು ದೇಶದ ಪ್ರತಿಷ್ಠಿತ ಶಾಲೆಗೆ ಮಗಳನ್ನು ಸೇರಿಸಿದ ವಿರಾಟ್ ಕೊಹ್ಲಿ ಅನುಷ್ಕಾ ದಂಪತಿ

Leave a Comment