Samantha ದಕ್ಷಿಣ ಸಿನಿಮಾಗಳ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha) ತೆಲುಗಿನಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡು ಜನಪ್ರಿಯ ನಟಿ. ಅಂದ ಮತ್ತು ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿರುವ ನಟಿ. ವೃತ್ತಿ ಜೀವನದಲ್ಲಿ ಉತ್ತಮ ಮಟ್ಟದಲ್ಲಿ ಇರುವಾಗಲೇ ನಟ ನಾಗ ಚೈತನ್ಯ (Nagachaitanya) ಅವರನ್ನು ಪ್ರೀತಿಸಿ ಮದುವೆಯಾದ ಈ ನಟಿಯ ದಾಂಪತ್ಯ ಜೀವನ ಮಾತ್ರ ಹೆಚ್ಚು ಕಾಲ ಉಳಿಯಲಿಲ್ಲ.
ಪ್ರೀತಿಸಿ ಮದುವೆಯಾದ ಜೋಡಿ ಇದ್ದಕ್ಕಿದ್ದ ಹಾಗೆ ವಿಚ್ಚೇದನ ಘೋಷಣೆ ಮಾಡಿದಾಗ ಅಭಿಮಾನಿಗಳು ಶಾಕ್ ಆದರು. ಅಲ್ಲದೇ ಇವರ ಈ ವಿಚ್ಚೇದನದ ಕಾರಣ ಮಾತ್ರ ಕೊನೆಗೂ ಬಹಿರಂಗವಾಗಲೇ ಇಲ್ಲ. ವಿಚ್ಚೇದನದ ನಂತರ ಸಮಂತಾ ಸಿಂಗಲ್ ಆಗೇ ಇದ್ದಾರೆ. ನಾಗಚೈತನ್ಯ ಶೋಭಿತಾ ಧೂಳಿಪಾಳ (Shobhita Dhulipala) ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈಗ ಇವೆಲ್ಲವುಗಳ ನಡುವೆ ಸಮಂತಾ ಹಿಂದೊಮ್ಮೆ ಹೇಳಿದ ವಿಚಾರಗಳು ಮುನ್ನೆಲೆಗೆ ಬಂದಿದೆ. ಮದುವೆ ಆದ ಮೇಲೆ ಪ್ರೀತಿ ಅನ್ನೋದು ಬದಲಾಗುತ್ತೆ. ಆಗ ಜವಾಬ್ದಾರಿ ಅನ್ನೋದೇ ಪ್ರೀತಿಯಾಗುತ್ತದೆ. ಪ್ರೀತಿಸಿದ್ದ ಇಬ್ಬರು ಮದುವೆ ಬಳಿಕ ಅವರಾಗಿ ಉಳಿಯುವುದಿಲ್ಲ.
ಲವ್ ನಲ್ಲಿದ್ದಾಗ ಮಾಡುವಂತೆ ಒಬ್ಬರನ್ನೊಬ್ಬರು ಇಂಪ್ರೆಸ್ ಮಾಡೋದಕ್ಕೆ ಮದುವೆ ನಂತರ ಪ್ರಯತ್ನ ಮಾಡುವುದಿಲ್ಲ. ನನಗೂ ಸಹಾ ಮದುವೆ ಆದ ಮೇಲೆ ಈ ವಿಚಾರ ಗೊತ್ತಾಗಿದ್ದು ಎಂದಿದ್ದಾರೆ ನಟಿ. ಏನೇ ಆದರೂ ನಾಗಚೈತನ್ಯ ಜೀವನದಲ್ಲಿ ಶೋಭಿತಾ ಎಂಟ್ರಿ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ನಿಶ್ಚಿತಾರ್ಥದ ನಂತರ ಅದು ಖಚಿತವಾಯಿತು.
Bigg Boss Kannada ಈ ಬಾರಿ ಒಂದಲ್ಲ ಎರಡು ಮನೆ, ಸ್ವರ್ಗ, ನರಕ ಎರಡೂ ಇಲ್ಲೇ; ಬಿಗ್ ಬಾಸ್ ಹೊಸ ಟ್ವಿಸ್ಟ್