Upendra: ರಜನೀಕಾಂತ್ ಜೊತೆ ಸಿನಿಮಾ ಅಂತ ಟ್ವೀಟ್ ಮಾಡಿ, ನಂತ್ರ ಅದನ್ನ ಉಪೇಂದ್ರ ಡಿಲೀಟ್ ಮಾಡಿದ್ದೇಕೆ?

Written by Soma Shekar

Published on:

---Join Our Channel---

Upendra : ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ತಮ್ಮ ಯುಐ ಸಿನಿಮಾದ ಮೂಲಕ ಒಂದು ಹೊಸ ಗೆಟಪ್ ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.‌ ಅವರ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ನಟನ ಈ ಹೊಸ ಸಿನಿಮಾದ ನಿರೀಕ್ಷೆಯಲ್ಲಿರುವಾಗಲೇ ಉಪೇಂದ್ರ ಅವರು ರಜನೀಕಾಂತ್ (Rajanikanth) ಅವರ ಜೊತೆಗೆ ತೆರೆಯನ್ನು ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ.

ಈ ವಿಷಯವನ್ನು ಸ್ವತಃ ಉಪೇಂದ್ರ ಅವರ ಎಕ್ಸ್ ನಲ್ಲಿ ಟ್ವೀಟ್ ಮಾಡಿದ ಉಪೇಂದ್ರ ಅವರು ನಿಮ್ಮ ಆಶೀರ್ವಾದದಿಂದ ನನ್ನ ಸೂಪರ್ ಸ್ಟಾರ್ ರಜನೀಕಾಂತ್ ಜೊತೆಗೆ ಕೂಲಿ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ ಎಂದು ಸಂತೋಷದಿಂದ ವಿಚಾರವನ್ನು ತಿಳಿಸಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ನಟ ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಉಪೇಂದ್ರ ಅವರು ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದೇಕೆ ಎನ್ನುವುದು ಈಗ ಪ್ರಶ್ನೆಯಾಗಿದೆ. ಹಾಗಾದರೆ ನಟ ಈ ಸಿನಿಮಾದಲ್ಲಿ ನಟಿಸ್ತಾರೋ ಇಲ್ಲವೋ ಎನ್ನುವ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಒಂದು ವೇಳೆ ಮಾಡಿದರೆ ಅವರು ಯಾವ ಪಾತ್ರ ಮಾಡಲಿದ್ದಾರೆ? ಪ್ರಮುಖ ಪಾತ್ರವೋ ಅಥವಾ ಅತಿಥಿ ಪಾತ್ರವೋ ಎನ್ನುವ ಪ್ರಶ್ನೆ ಸಹಾ ಅನೇಕರನ್ನು ಕಾಡಿದೆ.

ಸೋಶಿಯಲ್ ಮೀಡಿಯಾಗಳಲ್ಲಿ ಕೆಲವು ಕಡೆ ಉಪೇಂದ್ರ ರಜನೀಕಾಂತ್ ಸಿನಿಮಾದಲ್ಲಿ ವಿಲನ್ ಆಗಿ ನಟಿಸಲಿದ್ದಾರೆ ಎನ್ನುವ ಪೋಸ್ಟ್ ಗಳು ಸಹಾ ಹರಿದಾಡಿದೆ. ಒಟ್ನಲ್ಲಿ ಉಪೇಂದ್ರ ಅವರು ಶೇರ್ ಮಾಡಿದ ಪೋಸ್ಟ್ , ಅನಂತರ ಅದನ್ನು ಡಿಲೀಟ್ ಮಾಡಿದ್ದು ಎಲ್ಲವೂ ಕೂಡಾ ಅಚ್ಚರಿಯ ಜೊತೆಗೆ ಒಂದಷ್ಟು ಪ್ರಶ್ನೆಗಳನ್ನು ಸಹಾ ಹುಟ್ಟು ಹಾಕಿದೆ.

Nagarjuna : ನಾಗಾರ್ಜುನ ಪರ ಚಿತ್ರರಂಗ ಮೌನ, ನಟನ ನೋವಿಗೆ ಸೆಲೆಬ್ರಿಟಿಗಳ ಮನಸ್ಸು ಮಿಡಿಯಲಿಲ್ಲ ಏಕೆ?

Leave a Comment