Rashmika Mandanna: ಕ್ಷಮಿಸಿ, ತಪ್ಪಾಯ್ತು; ಇದ್ದಕ್ಕಿದ್ದ ಹಾಗೆ ರಶ್ಮಿಕಾ ಕ್ಷಮೆ ಕೇಳಿದ್ಯಾಕೆ? ಕೇಳಿದ್ದಾದ್ರು ಯಾರಿಗೆ

Written by Soma Shekar

Published on:

---Join Our Channel---

Rashmika Mandanna : ರಶ್ಮಿಕಾ ಮಂದಣ್ಣ (Rashmika Mandanna) ಒಂದೊಮ್ಮೆ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ದ ನಟಿ. ಅದರೆ ಇತ್ತೀಚಿನ ದಿನಗಳಲ್ಲಿ ನಟಿ ಅಷ್ಟಾಗಿ ಟ್ರೋಲ್ ಆಗುತ್ತಿಲ್ಲ. ಆದರೆ ಈಗ ಬಹುದಿನಗಳ ನಂತರ ಮತ್ತೆ ನಟಿ ಟ್ರೋಲ್ ಆಗಿದ್ದು, ರಶ್ಮಿಕಾ ಕೂಡಾ ಟ್ರೋಲ್ ಗಳು ಹೆಚ್ಚಾದ ಬೆನ್ನಲ್ಲೇ ತಾನು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ.‌ ಇಷ್ಟಕ್ಕೂ ಈಗ ರಶ್ಮಿಕಾ ಟ್ರೋಲ್ ಆಗಿದ್ದೇಕೆ ತಿಳಿಯೋಣ ಬನ್ನಿ.‌

ರಶ್ಮಿಕಾ ದಳಪತಿ ವಿಜಯ್ (Thalapathy Vijay) ನನ್ನ ನೆಚ್ಚಿನ ನಟ ಎಂದು ಹೇಳುತ್ತಾ, ನಾನು ಚಿತ್ರಮಂದಿರದಲ್ಲಿ ನೋಡಿದ ಮೊದಲ ಸಿನಿಮಾ ‘ಗಿಲ್ಲಿ’ ಆ ಚಿತ್ರದಲ್ಲಿ ವಿಜಯ್ ಅವರ ನಟನೆ, ಡ್ಯಾನ್ಸ್ ಇಷ್ಟವಾಗಿದ್ರಿಂದ ವಿಜಯ್ ಸರ್ ಅಂದ್ರೆ ಇಷ್ಟ ಎಂದಿದ್ದಾರೆ. ಅಲ್ಲದೇ ‘ಗಿಲ್ಲಿ’ ತೆಲುಗಿನ ‘ಪೋಕಿರಿ’ ರೀಮೆಕ್ ಅಂತ ಇತ್ತೀಚೆಗೆ ಬಾಯ್ತಪ್ಪಿ ಹೇಳಿದ್ದಾರೆ.‌

ಆದರೆ ಇಲ್ಲಿ ನಟಿ ಹೇಳಿದ ತಪ್ಪು ಟ್ರೋಲ್ ಗೆ ಗುರಿಯಾಗಿದೆ. ಏಕೆಂದರೆ ವಿಜಯ್ ನಟನೆಯ ಗಿಲ್ಲಿ ತೆಲುಗಿನ ಮಹೇಶ್ ಬಾಬು (Mahesh Babu) ನಟನೆಯ ಸಿನಿಮಾ ಒಕ್ಕಡು ಸಿನಿಮಾದ ರಿಮೇಕ್ ಆಗಿದೆ. ಪೋಕಿರಿ ಗಿಲ್ಲಿ ಸಿನಿಮಾದ ರಿಮೇಕ್ ಅಲ್ಲ. ಇದಲ್ಲದೇ ಮಹೇಶ್ ಬಾಬು ಅವರ ಪೋಕಿರಿ ಸಿನಿಮಾವನ್ನು ವಿಜಯ್ ಪೊಕಿರಿ ಹೆಸರಲ್ಲೇ ರಿಮೇಕ್ ಮಾಡಿದ್ದಾರೆ.

ರಶ್ಮಿಕಾ ಪೋಕಿರಿ ಸಿನಿಮಾದ ಬಗ್ಗೆ ಹೇಳಲು ಹೋಗಿ ಗಿಲ್ಲಿ ಬಗ್ಗೆ ಹೇಳಿದ್ದಕ್ಕೆ ನೆಟ್ಟಿಗರು ಆ ಇಬ್ಬರು ನಟರ ಜೊತೆಗೂ ನಟಿಸಿರುವ ರಶ್ಮಿಕಾ ಅವರ ಸಿನಿಮಾ ಜ್ಞಾನವನ್ನು ಟ್ರೋಲ್ ಮಾಡಿದ್ದಾರೆ. ಇದಕ್ಕೆ ನಟಿ ಪ್ರತಿಕ್ರಿಯೆ ನೀಡಿದ್ದು ಕ್ಷಮಾಪಣೆ ಕೇಳಿದ್ದು, ಮಾತಿನ ಭರದಲ್ಲಿ ಹೀಗಾಯ್ತು ಎನ್ನುವ ಮಾತನ್ನು ಹೇಳಿಕೊಂಡಿದ್ದಾರೆ.

Leave a Comment