Rashmika Mandanna: ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಪ್ರಸ್ತುತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಬೆದರಿಕೆಯಿಂದಾಗಿ ರಕ್ಷಣೆಗೆ ಹೆಚ್ಚು ಒತ್ತನ್ನು ನೀಡಿರುವ ವಿಷಯ ಗೊತ್ತೇ ಇದೆ. ಮಹಾರಾಷ್ಟ್ರ ಸರ್ಕಾರ ಸಹಾ ಅವರಿಗೆ ಬಿಗಿ ಭದ್ರತೆಯನ್ನು ಕಲ್ಪಿಸಿದೆ. ಸಿನಿಮಾ ಶೂಟಿಂಗ್ ಗಳಿಗೂ ಸಹಾ ನಟ ಬಿಗಿ ಭದ್ರತೆ ಯೊಂದಿಗೆ ಬರುತ್ತಿದ್ದಾರೆ.
ಪ್ರಸ್ತುತ ನಟ ಸಲ್ಮಾನ್ ಖಾನ್ ತಮಿಳು ನಿರ್ದೇಶಕ ಮುರುಗದಾಸ್ ಅವರ ಸಿಕಂದರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಇದರಲ್ಲಿ ಸೌತ್ ಬ್ಯೂಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಈಗ ರಶ್ಮಿಕಾಗೆ (Rashmika Mandanna) ಸಹಾ ಸಲ್ಮಾನ್ ವಿಶೇಷ ಭದ್ರತೆಯನ್ನು ಏರ್ಪಡಿಸಿದ್ದಾರೆ ಎನ್ನುವ ವಿಷಯ ಸುದ್ದಿಯಾಗಿದೆ..
ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದ್ದು, ಚಿತ್ರೀಕರಣ ನಡೆಯುವ ದಿನಗಳಲ್ಲಿ ಸಲ್ಮಾನ್ ಖಾನ್ ತನ್ನ ಗೆಸ್ಟ್ ಹೌಸ್ನಲ್ಲಿ ನಟಿಯನ್ನು ವಿಶೇಷ ಅತಿಥಿಯಾಗಿ ನೋಡಿಕೊಳ್ಳುತ್ತಿದ್ದಾರೆ ಎನ್ನುವುದು ವಿಶೇಷವಾಗಿದೆ. ನಟಿಗೆ ಯಾವುದೇ ಸಮಸ್ಯೆ ಆಗದ ಹಾಗೆ ಬಿಗಿ ಭದ್ರತೆ ನೀಡಿದ್ದಾರೆ.
ರಶ್ಮಿಕಾಗೂ ಸಹಾ ಬಿಗಿ ಭದ್ರತೆ ನೀಡಿರುವುದನ್ನ ನೋಡಿ ನಟಿಗೆ ಏಕೆ ಅಷ್ಟೊಂದು ಸೆಕ್ಯುರಿಟಿ ಎಂದು ಅಭಿಮಾನಿಗಳು ಕಂಗಾಲಾಗಿದ್ದರು. ರಶ್ಮಿಕಾಗೂ ಪ್ರಾಣ ಭಯವಿದೆಯೇ? ಅವರಿಗೂ ಯಾರಿದಾಂದರೂ ಜೀವ ಬೆದರಿಕೆ ಇದೆಯೇ? ಎಂದೆಲ್ಲಾ ಅನುಮಾನಗಳು ಇದ್ದವು. ಆದರೆ ಕೊನೆಗೆ ವಿಷಯ ತಿಳಿದು ಅಭಿಮಾನಿಗಳು ಸಲ್ಮಾನ್ ಖಾನ್ ತೀರ್ಮಾನಕ್ಕೆ ಖುಷಿಯಾಗಿದ್ದಾರೆ.
Bigg Boss 11 : ವೀಕೆಂಡ್ ಪಂಚಾಯ್ತಿ ಮಾಡೋಕೆ ಬಂದ್ರು ಭಟ್ರು; ಯೋಗರಾಜ ಭಟ್ರ ಮಾತಿಗೆ ಮನೆ ಮಂದಿ ಶಾಕ್