Rashmika Mandanna: ನಯನತಾರ ಓಟಕ್ಕೆ ಬ್ರೇಕ್ ಹಾಕಿದ ರಶ್ಮಿಕಾ, ಖುಷಿಯಿಂದ ಕುಣಿದ ಫ್ಯಾನ್ಸ್

Written by Soma Shekar

Published on:

---Join Our Channel---

Rashmika Mandanna: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯಕ್ಕಂತೂ ಇತ್ತ ತೆಲುಗು ಮತ್ತು ಅತ್ತ ಹಿಂದಿ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಟಾಲಿವುಡ್ ನಲ್ಲಿ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ 2 ಕೆಲಸಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ‌ ಮಂದಣ್ಣ, ಬಾಲಿವುಡ್ ನಲ್ಲಿ ಸ್ಟಾರ್ ನಟ ಸಲ್ಮಾನ್ ಖಾನ್ ನಾಯಕನಾಗಿರುವ ಸಿಕಂದರ್ (Sikandar) ಸಿನಿಮಾದಲ್ಲಿ ನಾಯಕಿಯಾಗಿದ್ದು, ಆ ಸಿನಿಮಾದ ಚಿತ್ರೀಕರಣ ಕೂಡಾ ಭರದಿಂದ ಸಾಗುತ್ತಿದೆ.

ಈ ಹಿನ್ನೆಲೆಯಲ್ಲಿ ರಶ್ಮಿಕಾ ಟಾಲಿವುಡ್ (Tollywood) ಮತ್ತು ಬಾಲಿವುಡ್ ಎರಡೂ ಕಡೆ ತಮ್ಮ ಕೆಲಸವನ್ನು ಸರಿದೂಗಿಸಿಕೊಂಡು, ಎರಡನ್ನೂ ನಿಭಾಯಿಸುವಾಗಲೇ ಹೊಸದೊಂದು ಸುದ್ದಿ ಎಲ್ಲರಿಗೂ ಅಚ್ಚರಿಯನ್ನು ನೀಡಿದೆ. ಸೌತ್ ಸಿನಿಮಾಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara)/ ಎನ್ನುವುದು ಈಗಾಗಲೇ ಗೊತ್ತಿರುವ ವಿಷಯವಾಗಿದೆ.

ಆದರೆ ಈಗ ಸಲ್ಮಾನ್ ಖಾನ್ (Salman Khan) ಜೊತೆಗೆ ನಟಿಸಲು ರಶ್ಮಿಕಾ ಮಂದಣ್ಣ ಪಡೆದಂತಹ ಸಂಭಾವನೆ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದ್ದು, ಈ ಸಿನಿಮಾದ ಸಂಭಾವನೆಯ ಮೂಲಕ ರಶ್ಮಿಕಾ ನಯನತಾರಾಗೆ ಟಕ್ಕರ್ ಕೊಟ್ರಾ ಎನ್ನುವ ವಿಚಾರ ಎಲ್ಲರಿಗೂ ಶಾಕ್ ನೀಡಿದೆ. ಹಾಗಾದ್ರೆ ಸಿಕಂದರ್ ಸಿನಿಮಾದಲ್ಲಿ ನಟಿಸುವುದಕ್ಕೆ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು?

ನಯನತಾರಾ ಸಿನಿಮಾವೊಂದಕ್ಕೆ 10-12 ಕೋಟಿ ಸಂಭವನೆ ಪಡೆಯುವ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿದ್ದರು. ಆದರೆ ಈಗ ರಶ್ಮಿಕಾ ಸಿಕಂದರ್ ಸಿನಿಮಾಕ್ಕೆ ಬರೋಬ್ಬರಿ 13 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಹೊರಬಂದಿದ್ದು, ಈ ಮೂಲಕ ರಶ್ಮಿಕಾ ನಯನತಾರಾರನ್ನು ಸಂಭಾವನೆ ವಿಚಾರದಲ್ಲಿ ಹಿಂದಿಕ್ಕಿದ್ದಾರೆ ಎನ್ನಲಾಗಿದೆ.‌ ಈ ವಿಷಯ ತಿಳಿದ ರಶ್ಮಿಕಾ ಅಭಿಮಾನಿಗಳು ಖುಷಿಯಾಗಿದ್ದಾರೆ.

Leave a Comment