Urmila Matondkar : ರಂಗೀಲಾ ಸಿನಿಮಾ ಖ್ಯಾತಿಯ ಬಾಲಿವುಡ್ ನಟಿ, ಮೋಹಕ ನಟಿ ಊರ್ಮಿಳಾ ಮಾತೋಂಡ್ಕರ್ (Urmila Matondkar) ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಈಗ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಊರ್ಮಿಳಾ ಅವರು 2016 ರಲ್ಲಿ ಉದ್ಯಮಿ ಮೋಹ್ಸಿನ್ ಅಖ್ತರ್ (Mohsin Akhtar) ಜೊತೆಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದರು.
ಇದೀಗ ಪತಿ ಪತ್ನಿ ಇಬ್ಬರೂ ಒಪ್ಪಿಕೊಂಡೇ ಬೇರೆಯಾಗುವ ನಿರ್ಧಾರವನ್ನು ಮಾಡಿದ್ದು, ವಿಚ್ಚೇದನ ಪಡೆಯಲು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಹರಡಿರುವ ಸುದ್ದಿಗಳೇ ನಿಜ ಎನ್ನುವಂತೆ ಊರ್ಮಿಳಾ ಇನ್ಸ್ಟಾಗ್ರಾಂ ನಲ್ಲಿ ತಮ್ಮ ಪತಿಯನ್ನು ಅನ್ ಫಾಲೋ ಮಾಡಿರುವುದು ಎಲ್ಲರ ಗಮನವನ್ನು ಸೆಳೆಯುತ್ತಿದೆ.
ಸಿನಿಮಾಗಳಿಂದ ದೂರವೇ ಉಳಿದಿದ್ದ ಊರ್ಮಿಳಾ ಸಾಂಸಾರಿಕ ಜೀವನದಲ್ಲಿ ಖುಷಿಯಾಗಿಯೇ ಇದ್ದಾರೆ ಎನ್ನಲಾಗಿತ್ತು. ಆದರೆ ಈಗ ಏಕಾಏಕೀ ಊರ್ಮಿಳಾ ಮತ್ತು ಮೋಹ್ಸಿನ್ ವಿಚ್ಚೇದನದ ಸುದ್ದಿ ಶಾಕ್ ಎನಿಸಿರುವುದು ಮಾತ್ರವೇ ಅಲ್ಲದೇ ಇದ್ದಕ್ಕಿದ್ದ ಹಾಗೆ ಇಂತಹ ಬೆಳವಣಿಗೆಗೆ ಕಾರಣವೇನು ಎನ್ನುವುದು ಅನೇಕರ ಪ್ರಶ್ನೆಯಾಗಿದೆ.
ನಟಿ ಊರ್ಮಿಳಾ ರಂಗೀಲಾ (Rangeela) ಸಿನಿಮಾದ ಮೂಲಕ ಜನಪ್ರಿಯತೆ ಪಡೆದವರು. ಅದಕ್ಕಿಂತ ಮೊದಲು ತೆಲುಗಿ ನಲ್ಲೂ ನಟಿ ಕಾಣಿಸಿಕೊಂಡಿದ್ದರು. ರಂಗೀಲಾ ನಂತರ ಸ್ಟಾರ್ ನಟಿಯಾದ್ರೂ ವರ್ಷಗಳ ಕಾಲ ಒಂಟಿಯಾಗಿದ್ದ ನಟಿ ಅನಂತರ ಮೊಹ್ಸಿನ್ ಜೊತೆ ಮದುವೆಯಾಗಿದ್ದರು. ಈಗ ಎಂಟು ವರ್ಷದ ದಾಂಪತ್ಯ ಜೀವನಕ್ಕೆ ನಟಿ ಪೂರ್ಣ ವಿರಾಮ ಹಾಕುವ ಹಾಗೆ ಕಂಡಿದೆ.
Srirastu Shubhamastu ನೆಟ್ಟಿಗರ ಸಿಟ್ಟಿಗೆ ಬದಲಾಗಿ ಹೋಯ್ತಾ ಕಥೆ, ಶ್ರೀರಸ್ತು ಶುಭಮಸ್ತುವಿನಲ್ಲಿ ಬಿಗ್ ಟ್ವಿಸ್ಟ್