Ram Gopal Varma: ರಾಮ್ ಗೋಪಾಲ್ ವರ್ಮಾ (Ram Gopal Varma) ಒಂದು ಕಾಲದಲ್ಲಿ ತಮ್ಮದೇ ಶೈಲಿಯ ಸಿನಿಮಾಗಳ ಮೂಲಕ ಸೆನ್ಸೇಷನಲ್ ಡೈರೆಕ್ಟರ್ ಆಗಿ ಜನಪ್ರಿಯತೆಯನ್ನು ಪಡೆದಿದ್ದವರು. ಶಿವ, ಸರ್ಕಾರ್, ಕ್ಷಣಸಾಕ್ಷಂ, ದೆಯ್ಯಂ ನಂತರ ಸಿನಿಮಾಗಳಿಂದ ಹೊಸ ಅಲೆ ಎಬ್ಬಿಸಿದ್ದರು. ಆದರೆ ಈಗ ರಾಮ್ ಗೋಪಾಲ್ ವರ್ಮಾ ಎಂದ್ರೆ ಸಾಕು ಅಲ್ಲಿ ವಿವಾದಗಳು ಅನ್ನೋ ಹಾಗೆ ಆಗಿದೆ. ರಾಮ್ ಗೋಪಾಲ್ ವರ್ಮಾ ಸಿನಿಮಾಗಳಿಗೆ ಮೊದಲ ಹಾಗೆ ಕ್ರೇಜ್ ಇಲ್ಲ.
ಈಗ ರಾಮ್ ಗೋಪಾಲ್ ವರ್ಮಾ ಹಳೆ ಟ್ವೀಟ್ ಒಂದು ಮತ್ತೆ ಮುನ್ನೆಲೆಗೆ ಬಂದಿದೆ. ರಾಮ್ ಗೋಪಾಲ್ ವರ್ಮಾ ಹುಡುಗಿಯರೆಂದರೆ ಹೇಗೆ ಅಂತ ಎಲ್ಲರಿಗೂ ಗೊತ್ತಿದೆ. ಅದರಲ್ಲೂ ನಟಿ ಶ್ರೀ ದೇವಿಯನ್ನು (Sridevi) ಹುಚ್ಚನಂತೆ ಪ್ರೀತಿಸಿದ ವ್ಯಕ್ತಿ ಇವರು. ಶ್ರೀದೇವಿ ಅವರ ಎಐ ಫೋಟೋ ಶೇರ್ ಮಾಡಿಕೊಂಡು ರಾಮ್ ಗೋಪಾಲ್ ವರ್ಮಾ ಖುಷಿ ಪಟ್ಟಿದ್ದಾರೆ.
ಶ್ರೀದೇವಿ ಬೋನಿಕಪೂರ್ ನ (Boney Kapoor) ಮದುವೆಯಾಗಿದ್ದು ರಾಮ್ ಗೋಪಾಲ್ ವರ್ಮಾ ಅವರಿಗೆ ಇಷ್ಟ ಇರಲಿಲ್ಲ. ಅದಕ್ಕೆ ಅವರು ಶ್ರೀದೇವಿ ಮದುವೆಯಾಗಿ ಪಂಜರದ ಹಕ್ಕಿಯಾಗಿದ್ದಾಳೆ. ಆಕೆಯ ವೃತ್ತಿಜೀವನದ ಅವನತಿಗೆ ಅವರೇ ಪ್ರಮುಖ ಕಾರಣವೆಂದೂ, ಶ್ರೀದೇವಿಯ ಚಾರ್ಮ್, ಸೌಂದರ್ಯ, ವ್ಯಕ್ತಿತ್ವ ಎಲ್ಲಾ ನನಗೆ ಹುಚ್ಚು ಹಿಡಿಸಿತ್ತು ಎಂದಿದ್ದರು.
ಸಿನಿ ಕರಿಯರ್‌ನಲ್ಲಿ ಉತ್ತುಂಗದಲ್ಲಿದ್ದಾಗ ಶ್ರೀದೇವಿ ಮುದುಕ ಬೋನಿ ಕಪೂರ್‌ರನ್ನು ಮದುವೆಯಾದಳು. ಬೋನಿ ಕಪೂರ್ ಮನೆಯಲ್ಲಿ ಆಕೆ ಒಬ್ಬ ಸಾಧಾರಣ ಗೃಹಿಣಿಯಾಗಿ ಟೀ ಕೊಡುವುದನ್ನು ನಾನು ನೋಡಿದ್ದೇನೆ. ದೇವಲೋಕದ ಅಪ್ಸರೆಯನ್ನು ಭೂಮಿಗೆ ತಂದು ಸಾಧಾರಣ ಗೃಹಿಣಿಯಂತೆ ನಡೆಸಿಕೊಂಡ ಬೋನಿ ಕಪೂರ್‌ನನ್ನು ನಾನು ದ್ವೇಷಿಸುತ್ತೇನೆ ಎಂದಿದ್ದರು ರಾಮ್ ಗೋಪಾಲ್ ವರ್ಮಾ
Bigg Boss ಸ್ವರ್ಗ ವಾಸಿಗಳಿಗೆ ಮೊದಲ ದಿನವೇ ನರಕ ದರ್ಶನ ಮಾಡಿಸಿ ನೇರ ನಾಮಿನೇಟ್ ಆದ ಚೈತ್ರ ಕುಂದಾಪುರ