Alia Bhatt : ರಾಮ್ ಚರಣ್ (Ram Charan) ಮತ್ತು ಆಲಿಯಾ (Alia Bhatt) ತ್ರಿಬಲ್ ಆರ್ ಸಿನಿಮಾದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಸಿನಿಮಾದಲ್ಲಿ ಅವರ ಪಾತ್ರ ತೆರೆಯ ಮೇಲೆ ಕೆಲವೇ ನಿಮಿಷಗಳಿಗೆ ಕಂಡರೂ ಕೂಡಾ ಸಿನಿಮಾದಿಂದ ಹೊರಗೆ ಅವರ ನಡುವೆ ಆತ್ಮೀಯ ಸ್ನೇಹವಿದೆ ಎನ್ನುವುದನ್ನು ಆಲಿಯಾ ತಾವೇ ಸ್ವತಃ ಹೇಳಿಕೊಂಡಿದ್ದಾರೆ. ಆಲಿಯಾ ತಮ್ಮ ಜಿಗ್ರಾ (Jigra) ಸಿನಿಮಾದ ಪ್ರಚಾರದ ವೇಳೆಯಲ್ಲಿ ಆಸಕ್ತಿಕರ ವಿಚಾರವೊಂದನ್ನ ತಿಳಿಸಿದ್ದಾರೆ.
ನಾನು ಮತ್ತು ರಾಮ್ ಚರಣ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಸ್ವಲ್ಪವೇ ಆದ್ದರಿಂದ ಅವರೊಡನೆ ಹೆಚ್ಚು ಸಮಯ ಕಳೆದಿರಲಿಲ್ಲ. ಆದರೆ ಸಿನಿಮಾ ಪ್ರಚಾರದ ವೇಳೆ ಅವರೊಂದಿಗೆ ಹೆಚ್ಚು ಸಮಯ ದೊರೆಯಿತು. ಅಲ್ಲದೇ ರಾಮ್ ಚರಣ್ ತಮ್ಮ ಮಗಳು ರಾಹಾ ಗಾಗಿ ನೀಡಿರುವ ವಿಶೇಷ ಉಡುಗೊರೆಯ ಕುರಿತಾಗಿಯೂ ಸಹಾ ಆಲಿಯಾ ಹೇಳಿಕೊಂಡಿದ್ದಾರೆ.
ರಾಹಾ (Raha) ಹುಟ್ಟಿ ಒಂದು ತಿಂಗಳಾದ ಮೇಲೆ ವಾಕಿಂಗ್ ಹೋದ ವೇಳೆಯಲ್ಲಿ ಯಾರೋ ಬಂದು ಆನೆ ಬಂದಿದೆ ಎಂದರು. ಆಶ್ಚರ್ಯದಿಂದ ಅದರ ಬಗ್ಗೆ ಕೇಳಿದಾಗ ರಾಮ್ ಚರಣ್ ಕಳಿಸಿರೋದು ಅಂತ ಗೊತ್ತಾಯ್ರು. ನಿಜವಾದ ಆನೆ ಕಳಿಸಿದ್ರೂ ಕಳಿಸಿರಬಹುದು ಅಂತ ಬಂದು ನೋಡಿದಾಗ ಅದೊಂದು ಮರದ ಆನೆಯಾಗಿತ್ತು. ಆದರೆ ಜೊತೆಯಲ್ಲಿ ಅಚ್ಚರಿಯೂ ಕಾದಿತ್ತು.
ರಾಮ್ ಚರಣ್ ಅವರು ನನ್ನ ಮಗಳು ರಾಹಾ ಹೆಸರಿನಲ್ಲಿ ಒಂದು ಆನೆ ಮರಿಯನ್ನು ದತ್ತು ಪಡೆದಿದ್ದಾರೆ ಎನ್ನುವುದು ಗೊತ್ತಾಯಿತು. ಅದನ್ನು ಸಾಂಕೇತಿಕವಾಗಿ ತಿಳಿಸಲು ಆನೆಯ ಬೊಂಬೆಯನ್ನು ಕಳಿಸಿದ್ದರು ಎಂದು ಆಲಿಯಾ ಹೇಳಿದ್ದಾರೆ. ಈಗಲೂ ಆ ಆನೆ ಬೊಂಬೆಯನ್ನು ಮನೆಯಲ್ಲಿ ಜೋಪಾನವಾಗಿ ಇಟ್ಟಿರುವುದಾಗಿ ಆಲಿಯಾ ಹೇಳಿಕೊಂಡಿದ್ದಾರೆ.