Radhika Sarathkumar: ನಟಿಯರಿಗೆ ಬಲವಂತವಾಗಿ ಕಿಸ್ ಮಾಡ್ತಿದ್ರಾ ಕಮಲ ಹಾಸನ್ ? ಸಂಚಲನ ಸೃಷ್ಟಿಸಿದ ನಟಿಯ ಮಾತುಗಳು

Written by Soma Shekar

Published on:

---Join Our Channel---

Radhika Sarathkumar : ಮಲೆಯಾಳಂ ಸಿನಿಮಾ (Mollywood) ರಂಗದ ಕರಾಳ ಸತ್ಯಗಳು, ನಟಿಯರ ಮೇಲೆ ನಡೆಯುತ್ತಿರುವ ಶೋ ಷ ಣೆಗಳ ಕುರಿತಾಗಿ ಹೇಮಾ ಸಮಿತಿ ವರದಿ ಹೊರ ಬಂದ ಮೇಲೆ ಹಲವು ನಟಿಯರು ತಮಗಾದ ಭಯಾನಕ ಅನುಭವಗಳನ್ನು ಶೇರ್ ಮಾಡಿಕೊಂಡು ಶಾಕ್ ನೀಡಿದ್ದಾರೆ. ಇವೆಲ್ಲವುಗಳ ನಡುವೆ ದಕ್ಷಿಣದ ಒಂದು ಕಾಲದ ಸ್ಟಾರ್ ನಟಿ ರಾಧಿಕಾ ಶರತ್ ಕುಮಾರ್ (Radhika Sarathkumar) ಹೇಳಿದ್ದ ವಿಚಾರಗಳು ತಮ್ಮ ಮುನ್ನೆಲೆಗೆ ಬಂದು ಚರ್ಚೆಗೆ ಕಾರಣವಾಗಿದೆ.

ಮಲಯಾಳಂ ಸಿನಿಮಾಗಳಲ್ಲಿ ನಟಿಯರ ಬೆತ್ತಲೆ ದೃಶ್ಯಗಳಿಗಾಗಿ ನಟಿಯರಿಗೆ ತಿಳಿಯದ ಹಾಗೆ ಕ್ಯಾರವಾನ್ ಗಳಲ್ಲಿ ಹಿಡನ್ ಕ್ಯಾಮರಾ ಇಟ್ಟಿರ್ತಾ ಇದ್ರು. ಅದಕ್ಕೆ ತಾನು ಕ್ಯಾರಾವಾನ್ ಗಳಲ್ಲಿ ಡ್ರೆಸ್ ಚೇಂಜ್ ಮಾಡ್ತಾ ಇರ್ಲಿಲ್ಲ ಎಂದು ಹೇಳಿದ್ದ ಮಾತುಗಳು ಈಗ ವೈರಲ್ ಆಗ್ತಿದೆ.‌

ಅಲ್ಲದೇ ನಟಿ ರಾಧಿಕಾ ಶರತ್ ಕುಮಾರ್ ಅವರು ತಮಿಳಿನ ಜನಪ್ರಿಯ ನಟನೊಬ್ಬ ಬಲವಂತವಾಗಿ ನಟಿಯರಿಗೆ ಕಿಸ್ ಕೊಡ್ತಾ ಇದ್ದ ವಿಚಾರವನ್ನು ಹೇಳಿದ್ದು, ಇದನ್ನು ಕೇಳಿ ನಟಿ ಪರೋಕ್ಷವಾಗಿ ಕಮಲ ಹಾಸನ್ ಅವರ ಬಗ್ಗೆಯೇ ಹೇಳಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಏಕೆಂದರೆ ಆಗೆಲ್ಲಾ ಕಮಲ ಹಾಸನ್ ಅವರ ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್ ಇರುತ್ತಿತ್ತು.

ಕೆಲವು ತಿಂಗಳುಗಳ ಹಿಂದೆ ರಾಧಿಕಾ ಶರತ್ ಕುಮಾರ್ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಒಬ್ಬ ಜನಪ್ರಿಯ ನಟ, ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸೋದ್ರಲ್ಲಿ ಫೇಮಸ್ ಆಗಿದ್ದು ನನಗೂ, ಹಾಗೂ ನನ್ನ ಕಿರಿಯ ಸಹೋದರಿಗೂ ಸಹಾ ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸಬೇಕಂತ ಒತ್ತಡ ಹಾಕಿ, ಕಿರುಕುಳ ಕೊಟ್ಟಿದ್ರು.

ಆದರೆ ನಟಿ ರಾಧಿಕಾ ಅವರು ಆ ನಟ ಯಾರು ಅನ್ನೋದನ್ನ ಹೇಳದೇ ಇದ್ರು ನೆಟ್ಟಿಗರು ಕಮಲ ಹಾಸನ್ (Kamal Haasan) ಎಂದು ಊಹೆ ಮಾಡುತ್ತಿದ್ದಾರೆ. ಅಲ್ಲದೇ ತಾವು ಅಂತಹ ದೃಶ್ಯಗಳನ್ನು ನಿರಾಕರಿಸದ್ದಕ್ಕೆ ಒಂದಷ್ಟು ಅವಕಾಶಗಳನ್ನು ಸಹಾ ಕಳೆದುಕೊಳ್ಳಬೇಕಾಯಿತು ಎನ್ನುವ ವಿಚಾರವನ್ನು ಸಹಾ ಹೇಳಿದ್ದರು.

Jr. NTR: ಆಂಧ್ರ ತೆಲಂಗಾಣ ಭೀಕರ ಮಳೆ, ಪ್ರವಾಹ; 1 ಕೋಟಿ ರೂ. ದೇಣಿಗೆ ಕೊಟ್ಟ ನಟ ಜೂ. ಎನ್ ಟಿ ಆರ್

Leave a Comment