Akshara: ಕನ್ನಡ ಕಿರುತೆರೆಯಲ್ಲಿ ನಂಬರ್ ಒನ್ ಸೀರಿಯಲ್ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್. ಕಳೆದ ಕೆಲವು ತಿಂಗಳುಗಳಿಂದಲೂ ಈ ಸೀರಿಯಲ್ ನಂಬರ್ ಒನ್ ಸ್ಥಾನದಲ್ಲೇ ಉಳಿದಿದ್ದು, ಇತ್ತೀಚಿಗೆ ಲಕ್ಷ್ಮೀ ನಿವಾಸದಿಂದ ಪೈಪೋಟಿ ಹೆಚ್ಚಾಗಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಹಿರಿಯ ನಟಿ ಉಮಾಶ್ರೀ ಮತ್ತು ಮಂಜು ಭಾಷಿಣಿ ಅವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದಲ್ಲದೇ ಪ್ರತಿಯೊಂದು ಪಾತ್ರಕ್ಕೂ ಸಹಾ ವಿಶೇಷ ಪ್ರಾಧಾನ್ಯತೆ ಇದೆ.
ಪುಟ್ಟಕ್ಕನ ಮೂರು ಜನ ಹೆಣ್ಣು ಮಕ್ಕಳಲ್ಲಿ ಹಿರಿ ಮಗಳು, ಗೋವಿನಂತಹ ಹುಡುಗಿ ಸಹನಾ ಪಾತ್ರ ಕೂಡಾ ಪ್ರೇಕ್ಷಕರ ಅಪಾರ ಮೆಚ್ಚುಗೆಯನ್ನು ಪಡೆದಿದೆ. ಅಮ್ಮನ ಗುಣಗಳನ್ನು ತನ್ನಲ್ಲಿ ಅಳವಡಿಸಿಕೊಂಡ ಹಿರಿಯಕ್ಕನಾಗಿರುವ ಸಹನಾ ಪಾತ್ರದಲ್ಲಿ ನಟಿಸುತ್ತಿರುವುದು ನಟಿ ಅಕ್ಷರಾ (Akshara) ಅವರು.
ಮುಗ್ಧ ಹಳ್ಳಿ ಹುಡುಗಿಯಾಗಿ, ಓದು ಬರಹ ಬರದೇ ಹೋದರೂ ಮನೆಯನ್ನು ನಿಭಾಯಿಸುವ ಜಾಣ್ಮೆ ಇರುವ ಸಹನಾ ಪಾತ್ರ ಇದೀಗ ಸ್ವಲ್ಪ ಗಟ್ಟಿಯಾಗಿದ್ದು, ಅತ್ತೆ ಮನೆಯವರ ವಿರುದ್ಧ ತಿರುಗಿ ಬಿದ್ದಾಗಿದ್ದು, ಇದು ಸೀರಿಯಲ್ ನಲ್ಲಿ ಈಗ ಪ್ರಮುಳ ಆಕರ್ಷಣೆಯಾಗಿದೆ.
ಸಹನಾ ಪಾತ್ರದ ಮೂಲಕ ಮನೆ ಮನೆ ಮಾತಾಗಿರುವ ನಟಿ ಅಕ್ಷರ ಅವರ ಮೂಲತಃ ಬೆಂಗಳೂರಿನವರೇ ಆಗಿದ್ದಾರೆ. ಬಾಲ್ಯದಿಂದಲೇ ನಟಿಯಾಗಿಬೇಕೆನ್ನುವ ಕನಸು ಕಂಡಿದ್ದ ಅಕ್ಷರ ಅವರ ವಿದ್ಯಾಭ್ಯಾಸ ಮುಗಿದ ಕೂಡಲೇ ನಟನೆಯ ಕಡೆಗೆ ಗಮನ ನೀಡಿ, ಅವಕಾಶಕ್ಕಾಗಿ ಸಾಕಷ್ಟು ಪ್ರಯತ್ನ ಮಾಡಿದರೆನ್ನಲಾಗಿದೆ.
ರಕ್ಷಾ ಬಂಧನ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿಯನ್ನು ನೀಡಿದ ನಟಿ, ಅನಂತರ ಅಮ್ನೋರು ಸೀರಿಯಲ್ ನಲ್ಲಿ ಸಹಾ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಆದರೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ನ ಸಹನಾ ಪಾತ್ರ ಅವರಿಗೆ ಬಹಳ ಜನಪ್ರಿಯತೆಯನ್ನು ತಂದು ಕೊಟ್ಟಿದೆ.
ಅಕ್ಷರ ಅವರು ತಮ್ಮ ನಟನೆಗೆ ಪ್ರಶಸ್ತಿಗಳನ್ನು ಸಹಾ ಪಡೆದಿದ್ದಾರೆ. ಸೀರಿಯಲ್ ಮಾತ್ರವೇ ಅಲ್ಲ ಅಲ್ಲದೇ ಜನಪ್ರಿಯ ನಟರ ಜೊತೆಗೆ ಕೆಲವೊಂದು ಜಾಹೀರಾತುಗಳಲ್ಲಿ ಸಹಾ ಅಕ್ಷರ ಕಾಣಿಸಿಕೊಂಡಿದ್ದಾರೆ ಎನ್ನುವುದು ವಿಶೇಷವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅಕ್ಷರಾ ಅವರ ಅಂದವಾದ ಫೋಟೋಗಳನ್ನು ನೋಡಿದಾಗ ಇವರು ಪುಟ್ಟಕ್ಕನ ಮಕ್ಕಳು ಸೀರಿಯಲ್ ನ ಸಹನಾ ಅವರೇನಾ ಎನ್ನುವಂತೆ ಅಚ್ಚರಿಯನ್ನು ಉಂಟು ಮಾಡೋದ್ರಲ್ಲಿ ಅನುಮಾನವೇ ಇಲ್ಲ.
ಅಕ್ಷರಾ ಅವರು ತಮ್ಮ ತಂದೆ ತಾಯಿ ಜೊತೆಗೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟ ಪಡುತ್ತಾರೆ. ಅಪ್ಪ ಅಮ್ಮನ ಮುದ್ದಿನ ಮಕ್ಕಳಾಗಿದ್ದಾರೆ ಅಕ್ಷರ. ಸೋಶಿಯಲ್ ಮೀಡಿಯಾದಲ್ಲಿ ಅಕ್ಷರ ಅವರನ್ನು ದೊಡ್ಡ ಸಂಖ್ಯೆಯಲ್ಲಿ ನೆಟ್ಟಿಗರು ಫಾಲೋ ಮಾಡುತ್ತಿದ್ದಾರೆ.