Puttakkana Makkalu: ಪುಟ್ಟಕ್ಕನ ಮಗಳು ಸ್ನೇಹಾ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ?

Written by Soma Shekar

Published on:

---Join Our Channel---

Puttakkana Makkalu: ಪುಟ್ಟಕ್ಕನ ಮಕ್ಕಳು (Puttakkana Makkalu) ಕಿರುತೆರೆಯ ನಂಬರ್ ಒನ್ ಸೀರಿಯಲ್. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಕಥೆಯಲ್ಲಿ ಮೂಡಿ ಬಂದಿರುವ ಹೊಸ ಟ್ವಿಸ್ಟ್ ಇನ್ನಷ್ಟು ರೋಚಕವಾಗಿದೆ. ಪುಟ್ಟಕ್ಕ ತನ್ನ ಮಗಳು ಸ್ನೇಹಾಳನ್ನ ಕಳೆದುಕೊಂಡು ದುಃಖದಲ್ಲಿ ಇದ್ದಾಳೆ. ಮತ್ತೊಂದು ಕಡೆ ಮರಳಿ ಬಂದಿರುವ ಸಹನಾಳನ್ನ ನೋಡಿ ಖುಷಿ ಪಡುವ ಪರಿಸ್ಥಿತಿಯಲ್ಲಿ ಸಹಾ ಇಲ್ಲ ಪುಟ್ಟಕ್ಕ. ಸಂಧಿಗ್ಧ ಸ್ಥಿತಿಯಲ್ಲಿ ಇದ್ದಾಳೆ ಪುಟ್ಟಕ್ಕ. ಸ್ನೇಹ ಪಾತ್ರಕ್ಕೆ ಅಂತ್ಯ ಹಾಡಿದ್ದು ಪ್ರೇಕ್ಷಕರಿಗೆ ಬಹಳ ಬೇಸರವನ್ನು ಉಂಟು ಮಾಡಿದೆ ಎನ್ನುವುದು ಸಹಾ ಸತ್ಯವಾಗಿದೆ.

ಡಿಸಿ ಅಗುವ ಕನಸನ್ನು ನನಸು ಮಾಡಿಕೊಂಡ ಸ್ನೇಹ ಅಪಘಾತದಲ್ಲಿ ಇಷ್ಟು ಬೇಗ ಸತ್ತಿದ್ದು ಅನೇಕರಿಗೆ ಅಸಮಾಧಾನ ಉಂಟು ಮಾಡಿದೆ. ಆದರೆ ಸ್ನೇಹ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಸಂಜನಾ ಬುರ್ಲಿ (Sanjana Burli) ಅವರು ತಮ್ಮ ಪಾತ್ರದಿಂದ ಹೊರಗೆ ಬರುವ ನಿರ್ಧಾರವನ್ನು ಮಾಡಿದ್ದರಿಂದ ಸ್ನೇಹ ಪಾತ್ರದಲ್ಲಿ ಇಂತದೊಂದು ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ ಎನ್ನುವುದು ಸಹಾ ಈಗಾಗಲೇ ಸುದ್ದಿಯಾಗಿದೆ.

ಇನ್ನು ಸಂಜನಾ ಬುರ್ಲಿ ಅವರು ಸೀರಿಯಲ್ ನ ಪಾತ್ರಕ್ಕೆ ಗುಡ್ ಬೈ ಹೇಳಿ ಬಂದ ಮೇಲೆ ಅವರಿಗೆ ಕನ್ನಡ ಬಿಗ್ ಬಾಸ್ ಸೀಸನ್ ಹನ್ನೊಂದಕ್ಕೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ (Bigg Boss Kannada Wild card) ದೊಡ್ಮನೆಗೆ ಎಂಟ್ರಿ ನೀಡೋ ಆಫರ್ ಬಂದಿದೆ. ನಟಿ ಬಿಗ್ ಬಾಸ್ ಮನೆಯನ್ನ ಪ್ರವೇಶ ಮಾಡ್ತಾರೆ ಅನ್ನೋ ಒಂದಷ್ಟು ಸುದ್ದಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು. ಈಗ ನಟಿ ಸಂಜನಾ ಅದಕ್ಕೆ ಸಂದರ್ಶನವೊಂದರಲ್ಲಿ ತಮ್ಕ ಸ್ಪಷ್ಟನೆ ನೀಡಿದ್ದಾರೆ.

ಸಂಜನಾ ಅವರು ತಾನು ಮೂರು ತಿಂಗಳ ಪೀರಿಯಡ್ ನೋಟಿಸ್ ಕೊಟ್ಟಿದ್ದೆ. ಆಗ ನಿರ್ದೇಶಕರು ಆರೂರ್ ಜಗದೀಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರಮುಖ ಪಾತ್ರಕ್ಕೆ ನಟಿ ಬೇಕು ಅಂತ ಜಾಹೀರಾತು ನೀಡಿದಾಗಲೇ ಅನೇಕರು ಸ್ನೇಹ ಪಾತ್ರ ಮುಗಿಯುತ್ತೆ ಅಂತ ಗೆಸ್ ಮಾಡಿದ್ರು. ಸಂಜನಾ ಬಿಗ್ ಬಾಸ್ ಗೆ ಹೋಗ್ತಾರೆ ಅಂತಾನೂ ಊಹೆ ಮಾಡಿದ್ರು. ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತೀನಿ ಅಂತ ಸಹಾ ಸುದ್ದಿ ಯಾಗಿತ್ತು. ‌ಆದ್ರೆ ನಾನು ಯಾವ ರಿಯಾಲಿಟಿ ಶೋಗೂ ಹೋಗ್ತಿಲ್ಲ ಅಂತ ನಟಿ ಸ್ಪಷ್ಟನೆ ನೀಡಿದ್ದಾರೆ.

Leave a Comment