Kannada Serial TRP: ಕಿರುತೆರೆಗೆ ಹೊಸ ಹೊಸ ಸೀರಿಯಲ್ ಗಳು (Kannada Serial TRP) ಎಂಟ್ರಿಯನ್ನ ಕೊಡ್ತಾ ಇವೆ. ಆದರೂ ಹಳೆ ಸೀರಿಯಲ್ ಗಳ ಮುಂದೆ ಅಬ್ಬರಿಸಲು ಈ ಸೀರಿಯಲ್ ಗಳು ಸೊರಗುತ್ತಿವೆ ಎನ್ನುವುದು ನಿಜ. ಹಳೆಯ ಸೀರಿಯಲ್ ಗಳು ತಮ್ಮ ಅಬ್ಬರವನ್ನು ಮುಂದುವರೆಸಿದೆ. ಒಂದೆರಡು ಸೀರಿಯಲ್ ಗಳಿಗಂತೂ ಬೇರೆ ಯಾವುದೇ ಸೀರಿಯಲ್ ಸಹಾ ಪೈಪೋಟಿ ನೀಡುವಲ್ಲಿ ವಿಫಲವಾಗಿದೆ. ಈ ವಾರ ಯಾವ ಯಾವ ಸೀರಿಯಲ್ ಗಳು ಟಾಪ್ ಐದರಲ್ಲಿ ಸ್ಥಾನ ಪಡೆದಿವೆ ತಿಳಿಯೋಣ ಬನ್ನಿ.
ಪುಟ್ಟಕ್ಕನ ಮಕ್ಕಳು (Puttakkana Makkalu), ಪ್ರತಿ ವಾರದಂತೆ ಈ ವಾರವೂ ಸಹಾ ಪುಟ್ಟಕ್ಕನ ಮಕ್ಕಳೇ ಟಿ ಆರ್ ಪಿ ರೇಟ್ ನಲ್ಲಿ ಮುಂದೆ ಇದ್ದಾರೆ. ಎಷ್ಟು ಹೊಸ ಸೀರಿಯಲ್ ಗಳು ಬಂದರೂ ಪುಟ್ಟಕ್ಕನ ಮಕ್ಕಳು ಸೀರಿಯಲ್ ನ ಜನಪ್ರಿಯತೆಗೆ ಮಾತ್ರ ಯಾವುದೇ ಕುತ್ತು ಎದುರಾಗಿಲ್ಲ. ಸಿಂಗಾರಮ್ಮ, ಬಂಗಾರಮ್ಮನ ಕಥೆ ಸದ್ಯಕ್ಕೆ ಪ್ರಮುಖ ಆಕರ್ಷಣೆ ಆಗಿದೆ.
ಲಕ್ಷ್ಮೀ ನಿವಾಸ (Lakshmi Nivasa), ಕಳೆದ ಒಂದಷ್ಟು ವಾರಗಳಿಂದಲೂ ಸಹಾ ಲಕ್ಷ್ಮೀ ನಿವಾಸ ಎರಡನೇ ಸ್ಥಾನದಲ್ಲಿ ಇದ್ದು, ಅದೇ ಸ್ಥಾನದಲ್ಲಿ ಈ ವಾರವೂ ಮುಂದುವರೆದಿದೆ. ಕೆಲವು ವಾರಗಳಲ್ಲಿ ಇದು ಪುಟ್ಟಕ್ಕನ ಮಕ್ಕಳು ಸೀರಿಯಲ್ ಜೊತೆ ನಂಬರ್ ಒನ್ ಸ್ಥಾನಕ್ಕೆ ಪೈಪೋಟಿಗೆ ಇಳಿದಿತ್ತು. ಆದರೆ ಈ ವಾರ ಟಿಆರ್‌ಪಿ ಪುಟ್ಟಕ್ಕನ ಮಕ್ಕಳಿಗಿಂತ ಕಡಿಮೆ ಇದೆ.
ಶ್ರಾವಣಿ ಸುಬ್ರಹ್ಮಣ್ಯ (Shravani Subramanya), ಇತ್ತೀಚಿಗೆ ಆರಂಭವಾದ ಈ ಸೀರಿಯಲ್ ಈಗಾಗಲೇ ಟಿ ಆರ್ ಪಿ ವಿಚಾರದಲ್ಲಿ ಉತ್ತಮ ಫಲಿತಾಂಶ ಪಡೆದು ಮೂರನೇ ಸ್ಥಾನದಲ್ಲಿ ಇದೆ. ಸೀರಿಯಲ್ ಒಂದು ವಿಭಿನ್ನವಾದ ಕಥೆಯೊಂದಿಗೆ ಸದ್ಯಕ್ಕಂತೂ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾ ಮುಂದೆ ಸಾಗ್ತಾ ಇದೆ.
ಆರಂಭವಾದಾಗ ಅಪಾರ ಜನಪ್ರಿಯತೆ ಪಡೆದು ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದ ಸೀತಾರಾಮ (SeethaRama) ಅನಂತರ ಟಿ ಆರ್ ಪಿ ಕುಸಿತದಿಂದಾಗಿ ತನ್ನ ಸ್ಥಾನದಲ್ಲಿ ಕುಸಿತ ಕಂಡಿತ್ತು. ಈಗ ಬಹುತೇಕ ನಾಲ್ಕು ಮತ್ತು ಐದನೇ ಸ್ಥಾನಕ್ಕೆ ತೃಪ್ತಿ ಪಡ್ತಿರೋ ಸೀತಾರಾಮ ಈ ವಾರವೂ ನಾಲ್ಕನೇ ಸ್ಥಾನದಲ್ಲಿದೆ.
ಈ ವಾರ ಐದನೇ ಸ್ಥಾನಕ್ಕೆ ರಾಮಾಚಾರಿ (Ramachari) ಸೀರಿಯಲ್ ಲಗ್ಗೆ ಇಟ್ಟಿದೆ. ಸಾಮಾನ್ಯವಾಗಿ ಟಿಆರ್‌ಪಿ ಯಲ್ಲಿ ಜೀ ವಾಹಿನಿಯ ಸೀರಿಯಲ್ ಗಳೇ ಹೆಚ್ಚು. ಆಗಾಗ ಐದನೇ ಸ್ಥಾನದಲ್ಲಿ ಕಲರ್ಸ್ ವಾಹಿನಿಯ ಸೀರಿಯಲ್ ಗಳು ಸ್ಥಾನ ಪಡೆಯುತ್ತದೆ. ಅದೇ ರೀತಿ ಈ ವಾರ ರಾಮಾಚಾರಿ ಟಾಪ್ ಐದಕ್ಕೆ ಎಂಟ್ರಿ ನೀಡಿದೆ.
Jyothi Rai: ಕನ್ನಡ ಬಿಗ್ ಬಾಸ್ ಗೆ ಹಾಟ್ ಬೆಡಗಿ ಜ್ಯೋತಿ ರೈ, ಸ್ವತಃ ನಟಿಯೇ ಕೊಟ್ಟ ಮಾಹಿತಿಗೆ ಫ್ಯಾನ್ಸ್ ಥ್ರಿಲ್