Puttakkana Makkalu: ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನ ಪ್ರತಿಯೊಂದು ಪಾತ್ರಕ್ಕೂ ಸಹಾ ವಿಶೇಷ ಪ್ರಾಮುಖ್ಯತೆ ಇದೆ. ಎಲ್ಲಾ ಪಾತ್ರಗಳ ನಡುವೆಯೇ ಹೊಸ ಪಾತ್ರವೊಂದು ಸಹಾ ಎಂಟ್ರಿಯಾಗಿದೆ. ಪುಟ್ಟಕ್ಕ ಹೊಸ ಹುಡುಗಿಯನ್ನು ಸಹಾ ತನ್ನ ಮಗಳಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಈ ಹೊಸ ಪಾತ್ರ ಬಂದ ಮೇಲೆ ಪ್ರೇಕ್ಷಕರಿಗೆ ಹೊಸದೊಂದು ಅನುಮಾನ ಸಹಾ ಮೂಡಿದೆ.
ಕೆಲವೇ ದಿನಗಳ ಹಿಂದೆಯಷ್ಟೇ ಸ್ನೇಹ (Sneha) ಕಂಠಿಯ ಜೊತೆ ಅಂಗಾಂಗ ದಾನವನ್ನು ಮಾಡಿದ್ದಾಳೆ. ಇನ್ನೊಂದು ಕಡೆ ತನ್ನ ಅಕ್ಕ ಸಹನಾಳನ್ನು ಪತ್ತೆ ಹಚ್ಚಿ ಮನೆಗೆ ಕರೆ ತರುವ ಸಿದ್ಧತೆ ನಡೆಸಿದ್ದಾಳೆ. ಇದಲ್ಲದೇ ಅತ್ತೆ ಬಂಗಾರಮ್ಮನನ್ನು ಸಹಾ ಪತ್ತೆ ಹಚ್ಚಿ ಮನೆಗೆ ಕರ್ಕೊಂಡು ಬರೋದಕ್ಕೆ ಎಲ್ಲಾ ತಯಾರಿ ನಡೆಸಿದ್ದಾಳೆ.
ಸಿಂಗಾರಮ್ಮನಿಗೆ ಸ್ನೇಹ ಸವಾಲನ್ನು ಸಹಾ ಹಾಕಿದ್ದಾಳೆ. ಇದೆಲ್ಲಾ ನೋಡುವಾಗ ಸೀರಿಯಲ್ ನಲ್ಲಿ ಸ್ನೇಹ ಪಾತ್ರಕ್ಕೆ ಇದ್ದಕ್ಕಿದ್ದ ಹಾಗೆ ಇಷ್ಟೆಲ್ಲಾ ಪ್ರಾಮುಖ್ಯತೆ ಸಿಕ್ಕಿರೋದು ಸಹಜವಾಗಿಯೇ ಅನುಮಾನಗಳನ್ನು ಮೂಡಿಸಿದೆ. ಸ್ನೇಹ ಪಾತ್ರ ಶೀಘ್ರದಲ್ಲೇ ಕಥೆಗೆ ವಿದಾಯ ಹೇಳುತ್ತಾ ಅನ್ನೋ ಪ್ರಶ್ನೆ ಸಹಾ ಕಾಡುತ್ತಿದೆ.
ಸ್ನೇಹ ತನ್ನ ತಂದೆಯ ಕಡೆಗೆ ಕೂಡಾ ಮೃದು ಧೋರಣೆ ತೋರಿದ್ದಾಳೆ. ನೆಟ್ಟಿಗರಲ್ಲಿ ಕೆಲವರು ಸ್ನೇಹ ಬಹುಶಃ ಯಾವುದೋ ತೊಂದರೆಯಿಂದ ಪ್ರಾಣ ಬಿಡ್ತಾಳೆ, ಅಂಗಾಂಗ ದಾನ ಮಾಡಿರೋ ಅವಳಿಂದ ಹೊಸ ಹುಡುಗಿಗೆ ಜೀವದಾನ ಸಿಗಲಿದೆ.
ಪುಟ್ಟಕ್ಕ ಮತ್ತು ಕಂಠಿ ಜೀವನದಲ್ಲಿ ಮುಂದೆ ಸ್ನೇಹ ಸ್ಥಾನವನ್ನು ಹೊಸ ಹುಡುಗಿ ತುಂಬ್ತಾಳೆ ಅಂತ ಊಹೆ ಮಾಡ್ತಿದ್ದಾರೆ. ಜನರ ಈ ಊಹೆ ನಿಜವಾಗುತ್ತಾ? ನಿಜಕ್ಕೂ ಸ್ನೇಹ ಪಾತ್ರ ಮುಗಿಯಲಿದೆಯಾ? ಹೊಸ ಪಾತ್ರದ ಎಂಟ್ರಿ ಆಗಿರೋದೇ ಅದಕ್ಕೇನಾ? ಅನ್ನೋ ಈ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗುತ್ತಾ ಅಂತ ಕಾದು ನೋಡಬೇಕಾಗಿದೆ.
Bigg Boss Kannada ಜಗದೀಶ್ ಮೇಲೆ ರೊಚ್ಚಿಗೆದ್ದ ಮನೆ ಮಂದಿ, ತಾಳ್ಮೆ ಕಳೆದುಕೊಂಡು ಬಿಗ್ ಬಾಸ್ ವಾರ್ನಿಂಗ್