Sanjana Burli : ಕಿರುತೆರೆಯ ಜನಪ್ರಿಯ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makklu) ಸೀರಿಯಲ್ ನಲ್ಲಿ ಸ್ನೇಹಾ ಪಾತ್ರದ ಮೂಲಕ ಮನೆ ಮನೆ ಮಾತಾದ ನಟಿ ಸಂಜನಾ ಬುರ್ಲಿ (Sanjana Burli). ಆದರೆ ಕೆಲವೇ ದಿನಗಳ ಹಿಂದೆ ಸೀರಿಯಲ್ ನಲ್ಲಿ ಸ್ನೇಹ ಪಾತ್ರಕ್ಕೆ ಅಂತ್ಯ ಹಾಡಲಾಗಿದೆ. ಸ್ನೇಹ ಪಾತ್ರವನ್ನು ಸಾಯಿಸಿದ್ದು ಪ್ರೇಕ್ಷಕರಿಗೆ ಸಹಾ ಇಷ್ಟವಾಗಿಲ್ಲ. ಸ್ನೇಹ ಮರಳಿ ಬರಬೇಕು ಎಂಬುದಾಗಿಯೂ ಅನೇಕರು ಕಾಮೆಂಟ್ ಗಳನ್ನು ಮಾಡಿದ್ದುಂಟು.
ಉನ್ನತ ವಿಧ್ಯಾಭ್ಯಾಸ ಮಾಡುವ ಸಲುವಾಗಿ ಸಂಜನಾ ಅವರು ತಮ್ಮ ಸ್ನೇಹ ಪಾತ್ರದಿಂದ ಹೊರ ಬಂದಿರುವುದಾಗಿ ಸೀರಿಯಲ್ ನಿರ್ದೇಶಕರಾದ ಆರೂರು ಜಗದೀಶ್ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಅಲ್ಲದೇ ಆ ಪಾತ್ರಕ್ಕೆ ಬೇರೆ ಯಾರೇ ಬಂದರೂ ಜನ ಒಪ್ಪೋದಿಲ್ಲ ಅನ್ನೋ ಕಾರಣಕ್ಕೆ ಆ ಪಾತ್ರವನ್ನೇ ಕೊನೆ ಮಾಡಬೇಕಾಯಿತು ಎಂದು ಹೇಳಿದ್ದರು.
ಸೀರಿಯಲ್ ನಿಂದ ಹೊರ ಬಂದ ಮೇಲೆ ನಟಿ ಸೋಶಿಯಲ್ ಮೀಡಿಯಾ ಮತ್ತು ಟ್ರಾವೆಲ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕವು ಅವರು ಒಂದಷ್ಟು ಅಪ್ಡೇಟ್ ಗಳನ್ನು ನೀಡ್ತಾ, ಸೀರಿಯಲ್ ನ ಕೊನೆಯ ದಿನಗಳ ಶೂಟಿಂಗ್ ಕುರಿತಾಗಿ ಸಾಕಷ್ಟು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಯಾವಾಗ್ಲೂ ಸಿಂಪಲ್ ಆಗಿ ಸೀರೆಯಲ್ಲಿ ಮಿಂಚ್ತಾ ಇದ್ದ ಸಂಜನಾ ಅವ್ರು ಈಗ ಮಾಡರ್ನ್ ಡ್ರೆಸ್ ಧರಿಸಿ ಬೋಲ್ಡ್ ಆಗಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ. ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ನಟಿ ಅದರ ಜೊತೆಗೆ Dare to unleash new shades of you now and then ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಹೊಸ ಫೋಟೋಗಳನ್ನು ನೋಡಿ ಥ್ರಿಲ್ ಆಗಿದ್ದಾರೆ.
ಕಪ್ಪು ಬಣ್ಣದ ಲೆದರ್ ಸ್ಕರ್ಟ್ ಅದಕ್ಕೆ ಹೊಂದುವಂತಹ ಪಿಂಕ್ ಟಾಪ್ ಧರಿಸಿದ್ದಾರೆ. ಹೈ ಬನ್ ಹೇರ್ ಸ್ಟೈಲ್, ಲೆದರ್ ಶೂ ಧರಿಸಿರೋ ನಟಿಯ ಫೋಟೋಗಳಿಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಗಳನ್ನು ಹಾಕುತ್ತಿದ್ದು, ಮೆಸ್ಸು ಅಂದದ ಕಿಚ್ಚು ಹೊತ್ತಿಸುತ್ತಿದ್ದಾರೆ ಎಂದು ಕಾಮೆಂಟ್ ಗಳನ್ನು ಮಾಡಿ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ ಅಭಿಮಾನಿಗಳು.
BBK 11 : ವೈಲ್ಡ್ ಕಾರ್ಡ್ ಗಳ ಬಗ್ಗೆ ಉರ್ಕೊಂಡ್ರಾ ಮನೆ ಮಂದಿ : ಮೂಲ ನಿವಾಸಿಗಳ ಹೊಟ್ಟೆ ಉರಿಗೆ ಮದ್ದೇನು