Allu Arjun : ಕನ್ನಡತಿ ಶ್ರೀಲೀಲಾ (Sreeleela) ಅಲ್ಲು ಅರ್ಜುನ್ (Allu Arjun) ಜೊತೆಗೆ ಪುಷ್ಪ 2 (Pushpa 2) ಸಿನಿಮಾದಲ್ಲಿ ಕಿಸ್ಸಿಕ್ (Kissik) ಹಾಡಿಗೆ ಭರ್ಜರಿ ಹೆಜ್ಜೆಗಳನ್ನು ಹಾಕಿದ್ದಾರೆ. ನಟಿಯ ಅಭಿಮಾನಿಗಳು ಅವರ ಸ್ಟೆಪ್ ಗಳನ್ನು ನೋಡಿ ಖುಷಿ ಪಟ್ಟಿದ್ದಾರೆ. ಇದೇ ವೇಳೆ ಶ್ರೀಲೀಲಾ ಪಡ್ಡೆಗಳ ಎದೆಯಲ್ಲೊಂದು ಕಿಚ್ಚನ್ನು ಹೊತ್ತಿಸಿದ್ದಾರೆ. ಪುಷ್ಪ 2 ಸಿನಿಮಾ ಬಿಡುಗಡೆಗೆ ಮೊದಲೇ ಸಾಕಷ್ಟು ಸದ್ದು ಮತ್ತು ಸುದ್ದಿಯನ್ನು ಮಾಡಿದೆ.
ಇವೆಲ್ಲವುಗಳ ನಡುವೆ ಸಿನಿಮಾದ ಪ್ರಚಾರದ ವೇಳೆಯಲ್ಲಿ ಸಿನಿಮಾದ ನಾಯಕ ನಟ ಅಲ್ಲು ಅರ್ಜುನ್ ಅವರು ನಟಿ ಶ್ರೀಲೀಲಾ ಅವರನ್ನು ಹಾಡಿ ಹೊಗಳಿದ್ದಾರೆ. ಅಲ್ಲು ಅರ್ಜುನ್ ಮಾತನಾಡುತ್ತಾ, ಶ್ರೀಲೀಲಾಗೆ ಸಿನಿಮಾ ರಂಗದಲ್ಲಿ ಉತ್ತಮ ಭವಿಷ್ಯ ಇದೆ ಎಂದು ಹೇಳಿದ್ದಾರೆ.
ಶ್ರೀಲೀಲಾ ಕ್ಯೂಟ್ ನಟಿ, ಪ್ರತಿಭಾನ್ವಿತ ನಟಿ ಹಾಗೂ ತೆಲುಗು ಹೆಣ್ಣು ಮಕ್ಕಳಿಗೆ ನಟಿ ಸ್ಪೂರ್ತಿ ಎನ್ನುವ ಮಾತುಗಳನ್ನು ಸಹಾ ಹೇಳಿದ್ದಾರೆ. ಶ್ರೀಲೀಲಾ ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳು ನಿರೀಕ್ಷಿತ ಗೆಲುವು ಕಾಣದಿದ್ದರೂ ನಟಿಗೆ ಬೇಡಿಕೆ ಕಡಿಮೆಯಾಗಿಲ್ಲ.
ಮತ್ತೊಂದು ಕಡೆ ಕಿಸ್ಸಿಕ್ ಹಾಡು ಬಿಡುಗಡೆ ಆದ ಮೇಲೆ ಅದನ್ನ ಪುಷ್ಪ ಸಿನಿಮಾದ ಸಮಂತಾ ಹಾಡಿಗೆ ಹೋಲಿಕೆ ಮಾಡಿ ಅಷ್ಟೊಂದು ಚೆನ್ನಾಗಿಲ್ಲ ಎಂದು ಟ್ರೋಲ್ ಮಾಡಲಾಗಿತ್ತು. ಇದಕ್ಕೆ ನಟಿ ಶ್ರೀಲೀಲಾ ಉತ್ತರ ಕೊಟ್ಟು ಸಿನಿಮಾದಲ್ಲಿ ಹಾಡನ್ನು ನೋಡಿದಾಗ ಅದರ ವಿಶೇಷತೆ ಗೊತ್ತಾಗುತ್ತೆ ಎಂದಿದ್ದರು.
Puttakkana Makkalu : ಗೋಪಾಲನ ಮುಂದೆ ಬಂದೇ ಬಿಟ್ಳು ರಾಜಿ; ನೆಟ್ಟಿಗರ ಊಹೆ ಸರಿಯಾಗಿದ್ಯಾ?