Mahakali ಹನುಮಾನ್ ನಂತರ ಮಹಾಕಾಳಿ ಕಥೆ ಹೇಳಲು ಸಜ್ಜಾದ ನಿರ್ದೇಶಕ ಪ್ರಶಾಂತ್ ವರ್ಮಾ,‌ ಥ್ರಿಲ್ಲಿಂಗ್ ಪೋಸ್ಟರ್

Written by Soma Shekar

Published on:

---Join Our Channel---

Mahakali : ಹನುಮಾನ್ (Hanuman) ಸಿನಿಮಾವನ್ನು ನಿರ್ದೇಶಿಸಿ ಭರ್ಜರಿ ಗೆಲುವನ್ನು ಪಡೆದುಕೊಂಡ ನಿರ್ದೇಶಕ ಪ್ರಶಾಂತ್ ವರ್ಮಾ (Prashanth Varma) ಸದ್ಯಕ್ಕಂತೂ ತೆಲುಗಿನಲ್ಲಿ ಒಂದರ ನಂತರ ಮತ್ತಿಂದು ಎನ್ನುವ ಹಾಗೆ ಸಾಲು ಸಾಲು ಸಿನಿಮಾ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರ ‘ಹನುಮಾನ್ 2’ ಸಿನಿಮಾಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.

ಇದರ ಬೆನ್ನಲ್ಲೇ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅವರ ಮಗ ಮೋಕ್ಷಜ್ಞ ಚೊಚ್ಚಲ ಸಿನಿಮಾದ ಜವಾಬ್ದಾರಿ ಸಹಾ ಪ್ರಶಾಂತ್ ವರ್ಮಾ ಅವರ ಹೆಗಲ ಮೇಲಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಮತ್ತೊಂದು ಹೊಸ ಕಥೆಯನ್ನು ಹೇಳಲು ನಿರ್ದೇಶಕ ಸಿದ್ಧತೆಗಳನ್ನು ನಡೆಸಿದ್ದಾರೆ. ಹೌದು, ಪ್ರಶಾಂತ್ ವರ್ಮಾ ಈಗ ಮಹಾಕಾಳಿಯ ಕಥೆ ಹೇಳಲು ಸಜ್ಜಾಗಿದ್ದಾರೆ.‌

ಸಿನಿಮ್ಯಾಟಿಕ್ ಯೂನಿವರ್ಸ್ ನ ಅಡಿಯಲ್ಲಿ ಪ್ರಶಾಂತ್ ವರ್ಮಾ ತಮ್ಮ ಮೂರನೇ ಸಿನಿಮಾ ಘೋಷಣೆ ಮಾಡಿದ್ದು, ಮಹಾಕಾಳಿ ಸಿನಿಮಾಕ್ಕೆ ಅವರು ಕಥೆಯನ್ನು ಬರೆದಿದ್ದರೆ, ಈ ಸಿನಿಮಾವನ್ನು ಮಹಿಳಾ ನಿರ್ದೇಶಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ ಅನ್ನೋದು ವಿಶೇಷವಾಗಿದೆ.

ಪಶ್ಚಿಮ ಬಂಗಾಳದ ಬಹು ಪ್ರಸಿದ್ಧ ದೇವಿಯಾದ ಕಾಳಿ ಮಾತೆಯ ಹಿನ್ನೆಲೆ, ಆ ನೆಲದ ಸಂಸ್ಕೃತಿಯನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡಲಾಗುತ್ತಿದ್ದು, ‘ಮಹಾಕಾಳಿ’ (Mahakali) ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಹುಡುಗಿಯೊಬ್ಬಳು ಹುಲಿಯ ಹಣೆ ಮೇಲೆ ತಲೆ ಇಟ್ಟು ನಿಂತಿರುವ ಲುಕ್ ಬಿಡುಗಡೆ ಆಗಿದ್ದು ಆಕರ್ಷಕವಾಗಿ ಕಂಡಿದೆ.

ಸ್ವಂತ ಮನೆಗೆ ಕಾಲಿಟ್ಟ ಸಂಭ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ Anupama Gowda, ವೈರಲ್ ಆಯ್ತು ಫೋಟೋಗಳು

Leave a Comment