Tollywood : ತೆಲುಗು (Tollywood) ನಟ ವಿಷ್ಣು ಮಂಚು (Vishnu Manchu) ಅವರು ನಿರ್ಮಾಣ ಮಾಡುತ್ತಿರುವ ಬಿಗ್ ಬಜೆಟ್ ಸಿನಿಮಾ ಭಕ್ತ ಕಣ್ಣಪ್ಪ (Bhakta Kannappa) ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಕಳೆದ ಕೆಲವು ವರ್ಷಗಳಿಂದಲೂ ಸಿನಿಮಾ ನಿರ್ಮಾಣದ ವಿಚಾರದಲ್ಲಿ ಚಿತ್ರತಂಡವು ಸಾಕಷ್ಟು ಪರಿಶ್ರಮವನ್ನು ಹಾಕುತ್ತಿದೆ. ಕಣಪ್ಪ ಚಿತ್ರದ ಟೀಸರ್ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಬಿಡುಗಡೆಯಾಗಿತ್ತು. ಅನಂತರ ಅದು ಭಾರತದಲ್ಲಿ ಕೂಡ ಬಿಡಗಡೆಯಾಯ್ತು.
ನೂರಾರು ಕೋಟಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ಕಿರುತೆರೆಯಲ್ಲಿ ಮಹಾಭಾರತ ಸೀರಿಯಲ್ ಅನ್ನು ನಿರ್ದೇಶನ ಮಾಡಿರುವ ಮುಖೇಶ್ ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ನಿರ್ಮಾಣ ಕಾರ್ಯಗಳು ಬಹಳ ಭರದಿಂದ ಸಾಗುತ್ತಿದೆ. ಇವೆಲ್ಲವುಗಳ ನಡುವಲ್ಲಿ ಚಿತ್ರೀಕರಣ ಸಂದರ್ಭದಲ್ಲಿನ ನಟ ಪ್ರಭಾಸ್ (Prabhas) ಅವರ ಪಾತ್ರದ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದೆ.
ಸಿನಿಮಾ ಕೆಲಸಗಳು ಆರಂಭವಾದಾಗಿನಿಂದ ಯಾವುದೇ ಫೋಟೋ ಅಥವಾ ವಿಡಿಯೋಗಳು ಸಿನಿಮಾ ಸೆಟ್ ನಿಂದ ಲೀಕ್ ಆಗದ ಹಾಗೆ ಸಾಕಷ್ಟು ಎಚ್ಚರಿಕೆಯನ್ನು ಕಣ್ಣಪ್ಪ ಚಿತ್ರ ತಂಡ ವಹಿಸಿತ್ತು. ಆದರೆ ಅದರ ಹೊರತಾಗಿಯೂ ಪ್ರಮುಖ ಪಾತ್ರವೊಂದರ ಫೋಟೋ ಲೀಕ್ ಆಗಿದ್ದು ಚಿತ್ರತಂಡಕ್ಕೆ ಬಹಳ ಬೇಸರವನ್ನು ಇದೆ. ಆದ್ದರಿಂದ ಚಿತ್ರತಂಡ ಫೋಟೋ ಲೀಕ್ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಲು ನಿರ್ಧಾರ ಮಾಡಿದೆ.
ಈ ವೇಳೆ ಲೀಕ್ ಆಗಿದ್ದು ಹೇಗೆ ಎನ್ನುವುದನ್ನು ಪತ್ತೆ ಹಚ್ಚುವುದಕ್ಕಾಗಿ ತಮಗೆ ಸಹಾಯ ಮಾಡುವವರಿಗೆ ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ಚಿತ್ರ ತಂಡ ಪ್ರಕಟಣೆಯಲ್ಲಿ ತಿಳಿಸಿದೆ. ಚಿತ್ರತಂಡ ಫೋಟೋ ಲೀಕ್ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿದವರಿಗೆ ಐದು ಲಕ್ಷ ಬಹುಮಾನ ಘೋಷಣೆ ಮಾಡಿದ ಬಳಿಕ ವ್ಯಕ್ತಿಯೊಬ್ಬ ತಾನೇ ಮಾಡಿದ್ದು ಎಂದು ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾನೆ.
ವರ್ಕ್ ಫ್ಲೋ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವಿನಯ್ ಬೊಡ್ಡು ಎಂಬಾತ ಇದನ್ನ ಲೀಕ್ ಮಾಡಿ ತನ್ನ ಸ್ನೇಹಿತರ ಜೊತೆಗೆ ಹಂಚಿಕೊಂಡಿದ್ದಾಗಿ ಸ್ವತಃ ಒಪ್ಪಿಕೊಂಡಿದ್ದಾನೆ. ಪ್ರಸ್ತುತ ಈ ವಿಚಾರದ ತನಿಖೆ ಕಾರ್ಯಗಳು ನಡೆಯುತ್ತಿದ್ದು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಅಂತ ಹೇಳಲಾಗಿದೆ. ಕಣ್ಣಪ್ಪ ಸಿನಿಮಾದಲ್ಲಿ ದೊಡ್ಡ ಸ್ಟಾರ್ ನಟರುಗಳು ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.
BBK 11 : ಈ ವಾರ ನೋ ಎಲಿಮಿನೇಷನ್ ಆದ್ರೆ ಕಾದಿದೆ ಬಿಗ್ ಟ್ವಿಸ್ಟ್; ಏನದು ಟ್ವಿಸ್ಟ್ ? ಇಲ್ಲಿದೆ ಉತ್ತರ