Kasturi Shankar: ಗ್ಲೋಬಲ್ ಸ್ಟಾರ್, ಮಾಜಿ ಮಿಸ್ ವರ್ಲ್ಡ್ ಮತ್ತು ಬಾಲಿವುಡ್ ನ ಒಂದು ಕಾಲದ ನಂಬರ್ ಒನ್ ನಟಿ ಐಶ್ವರ್ಯ ರೈ (Aishwarya Rai) ಅವರಿಗೆ ಪ್ರತ್ಯೇಕ ಪರಿಚಯದ ಅಗತ್ಯ ಖಂಡಿತ ಇಲ್ಲ. ನಟಿಯ ಅಂದಕ್ಕೆ ಮಾರು ಹೋಗದವರೇ ಇಲ್ಲ ಎನ್ನುವ ಮಾತು ಸಹಾ ಪ್ರಚಲಿತದಲ್ಲಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಂದದ ವಿಚಾರವು ಬಂದಾಗ ಐಶ್ವರ್ಯ ರೈ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಕೆಲವೇ ದಿನಗಳ ಹಿಂದೆಯಷ್ಟೇ ಐಶ್ವರ್ಯ ರೈ ಕಾನ್ಸ್ ಸಿನಿಮಾ ಉತ್ಸವದಲ್ಲಿ (Cannes 2024) ರೆಡ್ ಕಾರ್ಪೆಟ್ ಮೇಲೆ ನಡೆಯುತ್ತಾ ತಮ್ಮ ಝಲಕ್ ನಿಂದ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಕಾನ್ಸ್ ನಿಂದ ನಟಿಯ ಲೇಟೆಸ್ಟ್ ಲುಕ್ ನ ಫೋಟೋಗಳು ವೈರಲ್ ಆಗಿವೆ. ಆದರೆ ಫೋಟೋಗಳು ವೈರಲ್ ಆದ ಮೇಲೆ ಐಶ್ವರ್ಯ ಅವರ ಬಗ್ಗೆ ಸಾಕಷ್ಟು ಟೀಕೆಗಳು ಸಹಾ ಕೇಳಿ ಬರುತ್ತಿದ್ದು, ನಟಿಯ ಲುಕ್ ನ ವಿಚಾರವಾಗಿ ದಕ್ಷಿಣದ ಜನಪ್ರಿಯ ನಟಿಯೊಬ್ಬರು ಸಹಾ ಮಾತನಾಡಿದ್ದಾರೆ.
ಹೌದು, ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲೂ ನಟಿಸಿರುವ ಹಿರಿಯ ನಟಿ ಕಸ್ತೂರಿ ಶಂಕರ್ (Kasturi Shankar) ಅವರು ಐಶ್ವರ್ಯ ರೈ ಅವರ ಮೇಲೆ ಪ್ಲಾಸ್ಟಿಕ್ ಸರ್ಜರಿ (Plastic Surgery) ಮಾಡಿಸಿಕೊಂಡಿರುವ ಆರೋಪವನ್ನು ಮಾಡಿದ್ದಾರೆ. ನಟಿ ಕಸ್ತೂರಿ ಅವರ ಪ್ರಕಾರ ಐಶ್ವರ್ಯ ರೈ ಅವರ ಪ್ಲಾಸ್ಟಿಕ್ ಸರ್ಜರಿಯ ಕಾರಣದಿಂದಾಗಿಯೇ ಅವರ ಅಂದ ಹಾಳಾಗಿದೆ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
ನಟಿ ಕಸ್ತೂರಿ ಶಂಕರ್ ಅವರು ತಮ್ಮ ಟ್ವೀಟ್ ನಲ್ಲಿ, ಕಾಲ ಅನ್ನೋದು ವಿಶ್ವದ ಅತ್ಯಂತ ಸುಂದರ ಮಹಿಳೆಯನ್ನ ಕೂಡಾ ಬಿಡೋದಿಲ್ಲ. ಐಶ್ವರ್ಯ ಗಡಿಯಾರವನ್ನು ಹಿಂದಕ್ಕೆ ತಿರುಗಿಸುವ ಅನಿವಾರ್ಯತೆ ಇಲ್ಲ. ಅವರು ಸುಂದರವಾಗಿಯೇ ಇರುತ್ತಿದ್ದರು. ಆದರೆ ಪ್ಲಾಸ್ಟಿಕ್ ಅವರ ಸಹಜ ಸೌಂದರ್ಯವನ್ನು ಹಾಳು ಮಾಡಿದೆ ಎಂದು ಕಸ್ತೂರಿ ಶಂಕರ್ ಹೇಳಿದ್ದು ಅವರ ಪೋಸ್ಟ್ ವೈರಲ್ ಆಗಿದೆ.
ಸೌತ್ ನಟಿಯ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ತಡ ಎನ್ನುವಂತೆ ನೆಟ್ಟಿಗರು ಭರ್ಜರಿ ಕಾಮೆಂಟ್ ಗಳನ್ನು ಮಾಡುತ್ತಿದ್ದು, ನಟಿಯ ಅಭಿಮಾನಿಗಳು ಪ್ಲಾಸ್ಟಿಕ್ ಸರ್ಜರಿ ಅವರಿಷ್ಟ , ನೀವು ಏಕೆ ಪ್ರಶ್ನೆ ಮಾಡ್ತೀರಾ ಅಂದ್ರೆ, ಇದನ್ನು ವಿರೋಧಿಸುವವರ ಕಸ್ತೂರಿ ಅವರ ಮಾತು ಅಕ್ಷರಶಃ ಸತ್ಯ, ವಯಸ್ಸಾದ ಮೇಲೆ ಪ್ಲಾಸ್ಟಿಕ್ ಸರ್ಜರಿ ಎಲ್ಲಾ ಯಾಕೆ ಬೇಕು ಎಂದಿದ್ದಾರೆ.