Parul Yadav: ಸೀರೆಯನ್ನು ಹೀಗೂ ಉಡಬಹುದಾ? ಪಾರುಲ್ ಗ್ಲಾಮರಸ್ ಲುಕ್, ಸ್ಟೈಲ್ ಗೆ ನಿದ್ದೆಗೆಟ್ಟ ಪಡ್ಡೆಗಳು

Written by Soma Shekar

Published on:

---Join Our Channel---

Parul Yadav: ಕೆಲವು ನಟಿಯರು ಸಿನಿಮಾಗಳ ವಿಷಯವಾಗಿ ಸುದ್ದಿಯಾಗದೇ ಇದ್ದರೂ ತಮ್ಮ ಫೋಟೋಗಳು ಹಾಗೂ ನೀಡುವ ಹೇಳಿಕೆಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ಎಲ್ಲರ ಗಮನವನ್ನು ಸೆಳೆದು ಸುದ್ದಿಯಾಗುತ್ತಾರೆ. ಆ ರೀತಿ ಈಗ ಪಾರುಲ್ ಯಾದವ್ (Parul Yadav) ಎಲ್ಲರ ಗಮನ ಸೆಳೆದಿದ್ದಾರೆ. ಪಾರುಲ್ ಕನ್ನಡದಲ್ಲಿ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಬೇರೆ ಭಾಷೆಯಲ್ಲಿ ಅವರ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಯಾವುದು ಅಪ್ಡೇಟ್ ಇಲ್ಲ.

ಆದ್ರೆ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಈ ನಟಿ ತಮ್ಮ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾರೆ. ಈಗ ಅವಾರ್ಡ್ ಕಾರ್ಯಕ್ರಮ ಒಂದಕ್ಕೆ ಹೋಗುವುದಕ್ಕಾಗಿ ನಟಿಯು ಸಿದ್ಧವಾದ ರೀತಿಯನ್ನ ನೋಡಿ ಎಲ್ಲರೂ ಆಶ್ಚರ್ಯಪಟ್ಟಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಲು ಕಪ್ಪು ಬಣ್ಣದ ಆಕರ್ಷಕ ಡ್ರೆಸ್ ತೊಟ್ಟಿದ್ದಾರೆ.

ಪಾರುಲ್ ಸೀರೆಯಂತೆ ಕಾಣುವ ಒಂದು ವಿಶೇಷವಾದ ರೀತಿಯ ಡ್ರೆಸ್ ಅನ್ನು ತೊಟ್ಟಿದ್ದು, ಇದು ಅವರ ದೇಹವನ್ನು ಸಂಪೂರ್ಣವಾಗಿ ಕವರ್ ಮಾಡಿಲ್ಲ. ಬದಲಾಗಿ ವಿಶೇಷ ಡಿಸೈನ್ ಹೊಂದಿರುವ ಈ ಸೀರೆಯಿಂದಾಗಿ ನಟಿಯ ದೇಹ ಸೌಂದರ್ಯ ಎಲ್ಲರ ಗಮನವನ್ನು ಸೆಳೆದಿದೆ ಮತ್ತು ಅಭಿಮಾನಿಯಳ ಮೆಚ್ಚುಗೆಗಳನ್ನ ಪಡೆದುಕೊಳ್ಳುತ್ತಿದೆ.

ನಟಿಯು ಒಂದು ಪೋಸ್ ನಲ್ಲಿ ತಾವು ತೊಟ್ಟ ಸೀರೆಯನ್ನು ಸೊಂಟದ ಕೆಳಕ್ಕೆ ಜಾರಿಸಿದ್ದು, ಇದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಬಹುಶಃ ಗ್ಲಾಮರ್ ಲುಕ್ ಗಾಗಿ ಅವರು ಈ ರೀತಿ ಪೋಸ್ ನೀಡಿರಬಹುದು ಎಂದು ಕೂಡಾ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅವರ ಪೋಸ್ ಮಾತ್ರ ಅನೇಕರ ಕಣ್ಣು ಕುಕ್ಕಿದೆ.

ನಟಿಯ ಫೋಟೋಗಳು ಸಿಕ್ಕಾಪಟ್ಟೆ ಗ್ಲಾಮರಸ್ ಆಗಿದ್ದು ಫೋಟೋ ನೋಡಿದ ಅಭಿಮಾನಿಗಳಂತೂ ಕಾಮೆಂಟ್ ಗಳಲ್ಲಿ ಮೆಚ್ಚುಗೆಗಳ ಹೊಳೆಯನ್ನು ಹರಿಸುತ್ತಿದ್ದಾರೆ. ತೊಡ್ಟ ಬಟ್ಟೆಗೆ ತಕ್ಕಂತೆ ಅದ್ಭುತವಾದ ಎಕ್ಸ್ಪ್ರೆಶನ್ ಗಳನ್ನು ನೀಡಿದ್ದಾರೆ ಎಂದು ನೆಟ್ಟಿಗರು ನಟಿಯನ್ನು ಹಾಡಿ ಹೊಗಳಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಪಾರುಲ್ ಯಾದವ್ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕನ್ನಡದಿಂದ ಅಂತರವನ್ನು ಕಾಯ್ದುಕೊಂಡಂತೆ ಕಾಣುತ್ತಿದೆ. ನಟಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲವೋ ಅಥವಾ ಅವರಿಗೆ ಯಾರು ಅವಕಾಶಗಳನ್ನು ನೀಡುತ್ತಿಲ್ಲವೋ ಸದ್ಯಕ್ಕೆ ಈ ವಿಷಯದ ಕುರಿತಾಗಿ ಸ್ಪಷ್ಟತೆ ಇಲ್ಲ.

Prashanth Neel: KGF 3 ನಲ್ಲಿ ತಲಾ ಅಜಿತ್? ಅಜಿತ್ ಜೊತೆ ಪ್ರಶಾಂತ್ ನೀಲ್ ಎರಡು ಸಿನಿಮಾ; ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್

Leave a Comment