Bigg Boss Kannada Season 11 ಕ್ಕೆ ಎಂಟ್ರಿ ಕೊಟ್ಟ ಪಾರು ಸೀರಿಯಲ್ ಖ್ಯಾತಿಯ ನಟ ಮೋಕ್ಷಿತಾ ಪೈ

Written by Soma Shekar

Published on:

---Join Our Channel---

Bigg Boss Kannada Season 11 ಜೀ ಕನ್ನಡ ಧಾರಾವಾಹಿ ಸತ್ಯ ಖ್ಯಾತಿಯ ನಟಿ ಗೌತಮಿ ಜಾಧವ್ (Gautami Jadhav) ಬಿಗ್ ಬಾಸ್ ಕನ್ನಡ ಸೀಸನ್ 11 ಕ್ಕೆ (Bigg Boss Kannada Season 11) ಎಂಟ್ರಿ ನೀಡ್ತಾ ಇರೋ ಅಧಿಕೃತ ಸುದ್ದಿಯ ಬೆನ್ನಲ್ಲೇ ಈಗ ಮತ್ತೊಂದು ಆಸಕ್ತಿಕರ ಸುದ್ದಿ ಹೊರಗೆ ಬಂದಾಗಿದೆ. ಜೀ ಕನ್ನಡ ವಾಹಿನಿಯ ಮತ್ತೊಂದು ಜನಪ್ರಿಯ ಸೀರಿಯಲ್ ಆಗಿದ್ದ ಪಾರುವಿನ ನಾಯಕಿ, ಜನಪ್ರಿಯ ನಟಿ ಮೋಕ್ಷಿತಾ ಪೈ (Mokshitha Pai) ಎಂಟ್ರಿ ಕೊಟ್ಟಿದ್ದಾರೆ.

‘ಪಾರು’ (Paaru) ಸೀರಿಯಲ್‌ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ನಟಿ ದೊಡ್ಮನೆ ಆಟದಲ್ಲಿ ಸ್ಪರ್ಧಿಯಾಗಿ ಅಖಾಡಕ್ಕೆ ಇಳಿದಿದ್ದಾರೆ ಎನ್ನುವ ಸುದ್ದಿಯನ್ನು ಕೇಳಿ ಈಗ ಅವರ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ ಮತ್ತು ನಟಿ ಬಿಗ್ ಬಾಸ್ ನಲ್ಲಿ ಏನೆಲ್ಲಾ‌ ಮಾಡ್ತಾರೆ ನೋಡಬೇಕಂತ‌ ಥ್ರಿಲ್‌ ಆಗಿದ್ದಾರೆ.

ಕರಾವಳಿ ಬೆಡಗಿ ಮೋಕ್ಷಿತಾ ಪೈ ಅವರು ಬಿಗ್ ಬಾಸ್ ಗೆ ಬರ್ತಾರೆ ಅನ್ನೋ ಸುದ್ದಿಗಳು ಕಳೆದ ಕೆಲವು ದಿನಗಳಿಂದಲೂ ಸಹಾ ಹರಿದಾಡುತ್ತಲೇ ಇತ್ತು. ಆದರೆ ಇದಕ್ಕೆ ಸ್ಪಷ್ಟ ಉತ್ತರ ಮಾತ್ರ ಸಿಕ್ಕಿರಲಿಲ್ಲ.‌ ಈಗ ದೊಡ್ಮನೆ ಆಟದಲ್ಲಿ ಅವರು ಭಾಗಿಯಾಗಿರುವ ಬಗ್ಗೆ ಗುಡ್‌ ನ್ಯೂಸ್‌ ಸಿಕ್ಕಿದೆ.

ಆದರೆ ಈ ಬಾರಿಯ ಥೀಮ್ ನ‌ ಪ್ರಕಾರ ನಟಿ ದೊಡ್ಮೆನೆಯ ಸ್ವರ್ಗ ಅಥವಾ ನರಕ ಯಾವುದರಲ್ಲಿ ಇರ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ. ಇದರ ಅಧಿಕೃತ ಅನಾವರಣ ನಾಳೆ ಅಂದರೆ ಸೆ. 29 ರಂದು ‘ಬಿಗ್‌ ಬಾಸ್‌ ಕನ್ನಡ 11’ರ ಚಾಲನೆಯಲ್ಲಿ ಗೊತ್ತಾಗಲಿದೆ.‌

ಬ್ಲರ್ ಇಮೇಜ್ ಅವರದ್ದೇ, ಬಿಗ್ ಬಾಸ್ ಮನೆಗೆ Sara Annaiah? ಅಮೃತಧಾರೆ ಸೀರಿಯಲ್ ನಲ್ಲಿ ಮಿಸ್ ಆಗಿದ್ದು ಅದಕ್ಕೆ

Leave a Comment