Lavanya Tripathi : ತೆಲುಗು ಸಿನಿಮಾ ರಂಗದಲ್ಲಿ ಕಡಿಮೆ ಸಮಯದಲ್ಲೇ ಜನಪ್ರಿಯತೆ ಪಡೆದ ನಟಿ ಲಾವಣ್ಯ ತ್ರಿಪಾಠಿ (Lavanya Tripathi) ಪ್ರಸ್ತುತ ಮೆಗಾ ಕುಟುಂಬದ ಸೊಸೆ. ತೆಲುಗು ಸ್ಟಾರ್ ನಟ ವರುಣ್ ತೇಜ್ (Varun Tej) ಅವರನ್ನು ಪ್ರೀತಿಸಿ ಕಳೆದ ವರ್ಷವಷ್ಟೇ ನಟಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಅಲ್ಲದೇ ಮದುವೆಯ ನಂತರ ನಟಿ ಸಿನಿಮಾಗಳಿಂದ ದೂರ ಉಳಿದಿದ್ದಾರೆ.
ತಮ್ಮ ಅಭಿಮಾನ ನಟಿ ಏನು ಮಾಡ್ತಿದ್ದಾರೆ ಅಂತ ತಿಳಿಯೋಕೆ ಇತ್ತೀಚಿಗೆ ನಿಹಾರಿಕಾನ (Niharika) ಅಭಿಮಾನಿಗಳು ಪ್ರಶ್ನೆ ಮಾಡಿದ್ದು ಸೋಶಿಯಲ್ ಮೀಡಿಯಾ ಚಾಟ್ ನಲ್ಲಿ ನಿಹಾರಿಕಾ ಅತ್ತಿಗೆಯ ಬಗ್ಗೆ ಆಸಕ್ತಿಕರ ವಿಚಾರಗಳನ್ನ ಶೇರ್ ಮಾಡಿಕೊಂಡಿದ್ದಾರೆ. ಲಾವಣ್ಯ 24 ಗಂಟೆ ಮನೆಯಲ್ಲೇ ಇರ್ತಾರಂತೆ. ಏನಾದ್ರು ಕೆಲಸ ಇದ್ದಾಗ ಮಾತ್ರವೇ ಮನೆಯಿಂದ ಹೊರಗೆ ಬರ್ತಾರಂತೆ.
ನಾನು ಮನೇಲಿ ಒಂದು ಗಂಟೆ ಕೂಡ ಇರೋಕೆ ಆಗಲ್ಲ. ಹುಚ್ಚು ಹಿಡಿದ ಹಾಗೆ ಆಗುತ್ತೆ. ಆದರೆ ನಮ್ಮ ಅತ್ತಿಗೆ ಅದು ಹೇಗೆ ಮನೆಗೇ ಸೀಮಿತರಾಗ್ತಾರೋ ಅರ್ಥ ಆಗ್ತಿಲ್ಲ ಅಂತ ಹೇಳಿದ್ದಾರೆ ನಿಹಾರಿಕ. ಅಷ್ಟೇ ಅಲ್ಲ, ಅವರ ಮನೆಯಲ್ಲಿ ಅಡುಗೆ ಮಾಡೋ ಜವಾಬ್ದಾರಿ ಲಾವಣ್ಯ ಅವರದ್ದಂತೆ.
ಕುಟುಂಬ ಸದಸ್ಯರಿಗಾಗಿ ರುಚಿಕರವಾದ ಊಟವನ್ನು ಲಾವಣ್ಯ ಪ್ರತಿದಿನ ತಾವೇ ಸಿದ್ಧಪಡಿಸ್ತಾರಂತೆ. ನಿಹಾರಿಕಾ ತಮ್ಮ ಅತ್ತಿಗೆಯ ಬಗ್ಗೆ ಹಂಚಿಕೊಂಡ ವಿಚಾರಗಳನ್ನು ಕೇಳಿ ನೆಟ್ಟಿಗರು ಮತ್ತು ಲಾವಣ್ಯ ತ್ರಿಪಾಠಿ ಅವರ ಅಭಿಮಾನಿಗಳು ನಟಿಯನ್ನು ಹಾಡಿ ಹೊಗಳುತ್ತಿದ್ದಾರೆ.
Bigg Boss Kannada 11 ಬಿಗ್ ಬಾಸ್ ಇತಿಹಾಸದಲ್ಲೇ ಫಸ್ಟ್, ಗ್ರಾಂಡ್ ಪ್ರೀಮಿಯರ್ ಗೂ ಮೊದಲೇ ಸ್ಪರ್ಧಿಗಳ ಹೆಸರು ರಿವೀಲ್