SeethaRama: ಸೀತಾರಾಮ (SeethaRama) ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದು. ಸೀರಿಯಲ್ ಜನರ ಮೆಚ್ಚುಗೆಯನ್ನು ಪಡೆಯಲು ಹಲವು ಕಾರಣಗಳನ್ನು ನೀಡಬಹುದು. ಆ ಕಾರಣಗಳಲ್ಲಿ ಒಂದು ಸೀರಿಯಲ್ ನಲ್ಲಿರುವ ಸಿಹಿಯ ಪಾತ್ರವೂ ಒಂದು ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಪುಟ್ಟ ಸಿಹಿಯ ಮುದ್ದು ಮಾತುಗಳು ಬಹಳಷ್ಟು ಜನರ ಮನಸ್ಸಿಗೆ ಮುದವನ್ನು ನೀಡುವ ಜೊತೆಗೆ ಸಿಹಿ ಪಾತ್ರದಲ್ಲಿ ಬಾಲ ಕಲಾವಿದೆಯ ಅಭಿನಯ ಸಹಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ಐದು ವರ್ಷದ ಪುಟ್ಟ ಪೋರಿಯ ಪಾತ್ರಕ್ಕೆ ಜೀವ ತುಂಬಿದ ಬಾಲಕಲಾವಿದೆಯ ಅಭಿನಯ ನೋಡಿ ಬೆರಗಾದವರೇ ಹೆಚ್ಚು.
ಹೀಗೆ ದಿನದಿಂದ ದಿನಕ್ಕೆ ಸಿಹಿಯ (Sihi) ಪಾತ್ರದ ಔಚಿತ್ಯ ಹೆಚ್ಚಾಗುತ್ತಲೇ ಇದೆ. ಆದರೆ ಇವೆಲ್ಲವುಗಳ ನಡುವೆಯೇ ಈಗ ಸಿಹಿಯ ಪಾತ್ರದ ಕುರಿತಾಗಿ ಕೂಡಾ ಒಂದಷ್ಟು ಬೇಸರ ಮತ್ತು ಅಸಮಾಧಾನ ವ್ಯಕ್ತವಾಗುತ್ತಿದೆ. ಸೀತಾ ರಾಮ ಸೀರಿಯಲ್ ನಲ್ಲಿ ಸಿಹಿಯ ಪಾತ್ರವನ್ನು ಅತಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎನ್ನುವ ಭಾವನೆಯೊಂದು ಅನೇಕರಲ್ಲಿ ಮೂಡಿದೆ.
ಮಕ್ಕಳಿಗೆ ಅರ್ಥವಾಗದಂತಹ ವಿಚಾರಗಳಲ್ಲಿ ಸಹಾ ಸಿಹಿಯ ಪಾತ್ರವನ್ನು ತೋರಿಸುವುದು ಕೇವಲ ಟಿ ಆರ್ ಪಿ ಗಾಗಿ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ.
ಎಲ್ಲಾ ವಿಚಾರಗಳಲ್ಲೂ ಸಹಾ ಸಿಹಿಯು ಮೂಗು ತೂರಿಸುವಂತೆ ನಿರ್ದೇಶಕರು ತೋರಿಸುತ್ತಿದ್ದಾರೆ ಇದು ಯಾಕೋ ಸರಿಯಾಗಿ ಕಾಣುತ್ತಿಲ್ಲ ಎನ್ನುವುದು ಈಗ ಒಂದು ವರ್ಗದ ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದೆ ಎನ್ನುವುದು ಸಹಾ ಸತ್ಯವಾಗಿದೆ. ಅನೇಕರು ಇದರ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಸೀತಾನ ರಾಮನ ಚಿಕ್ಕಮ್ಮ ಅವಹೇಳನ ಮಾಡಿದ್ದನ್ನ ಸಿಹಿ ಕೇಳಿಸಿಕೊಂಡಿದ್ದಾಳೆ. ರಾಮ್ ಇದರ ಬಗ್ಗೆ ಏನೂ ಮಾತನಾಡಲಿಲ್ಲ ಅನ್ನೋ ವಿಚಾರಕ್ಕೆ ಸಿಹಿ ಸಿಕ್ಕಾಪಟ್ಟೆ ಕೋಪಗೊಂಡಿದ್ದಾಳೆ.
ಅದಕ್ಕೆ ರಾಮ್ ನ ಜೊತೆ ಮಾತನಾಡ್ತಿಲ್ಲ. ಮಕ್ಕಳು ಕೋಪ ಬಂದ್ರೆ ಹೇಗೆ ಮಾಡ್ತಾರೋ ಅದೇ ರೀತಿ ಸಿಹಿ ನಟನೆ ಇದೆ. ಆದರೆ ಒಂದು ವರ್ಗ ಸಿಹಿಯನ್ನ ನೋಡಿ ಮನೆಯಲ್ಲಿ ಮಕ್ಕಳು ಹೀಗೆ ವರ್ತಿಸ್ತಾರೆ. ಸಿಹಿಯನ್ನ ಹೀಗೆ ಬಿಟ್ರೆ ಖಂಡಿತ ಸೀತಾ ರಾಮ್ ಜೊತೆಯಾಗಿ ಇರೋದಕ್ಕೆ ಬಿಡೋದು ಅನುಮಾನ ಅವರಿಗೆ ಡಿವೋರ್ಸ್ ಕೊಡಿಸ್ತಾಳೇನೋ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.