Sunita Williams : ಜೂನ್ ತಿಂಗಳಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Sunita Williams) ಅವರ ಇತ್ತೀಚಿನ ಕೆಲವೊಂದು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದನ್ನ ನೋಡಿ ಜನ ಆತಂಕ ಪಡುವಾಗಲೇ ನಾಸಾ ಕೂಡಾ ಸುನೀತಾ ವಿಲಿಯಮ್ಸ್ ಅವರ ಆರೋಗ್ಯದ ಕುರಿತಾಗಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಸುನೀತಾ ಅವರ ಆರೋಗ್ಯದ ಕುರಿತಾಗಿ ಸಾಕಷ್ಟು ಚರ್ಚೆಗಳು ಆಗುತ್ತಿವೆ.
ಭೂಮಿಯಿಂದ ಬಾಹ್ಯಾಕಾಶದ ಕಡೆಗೆ ಹೊರಡುವಾಗ ಆರೋಗ್ಯಕರವಾಗಿ ಕಾಣುತ್ತಿದ್ದ ಸುನೀತಾ ವಿಲಿಯಂ ಅವರು ಈಗ ಬಹಳ ಸಣ್ಣಗಾಗಿರುವಂತೆ ಕಾಣುತ್ತಿದ್ದಾರೆ ಮತ್ತು ಮೂಳೆಗಳ ಮೇಲೆ ಚರ್ಮವನ್ನು ಹೊದಿಸಿದಂತೆ ಸುನೀತಾ ಅವರ ನೋಟ ಶಾಕಿಂಗ್ ಎನಿಸಿದೆ. ಈಗಾಗಲೇ ಐದು ತಿಂಗಳುಗಳ ಕಾಲದಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (International Space Centre) ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಸಿಲುಕಿಕೊಂಡಿದ್ದಾರೆ.
ಈಗ ಇವರ ಆರೋಗ್ಯದ ಕುರಿತಾಗಿ ಸಾಕಷ್ಟು ಆತಂಕ ಉಂಟಾಗಿದೆ. ಸುನೀತಾ ವಿಲಿಯಮ್ಸ್ ಅವರ ಹೊಸ ಫೋಟೋಗಳನ್ನು ನೋಡಿದ ಮೇಲೆ ಅವರು ನಂಬಲು ಅಸಾಧ್ಯವಾದಂತೆ ತಮ್ಮ ದೇಹದ ತೂಕವನ್ನು ಕಳೆದುಕೊಂಡಿರುವುದು ಕಾಣುತ್ತಿದೆ. ಬಾಹ್ಯಾಕಾಶ ಪ್ರಯಾಣ ಆರಂಭಿಸಿದಾಗ ಸುನೀತಾ ಅವರು 63 ಕೆಜಿ ತೂಕವಿದ್ದರು. ಆದರೆ ಈಗಿನ ಫೋಟೋಗಳಲ್ಲಿ ಅವರು ಅರ್ಧದಷ್ಟು ತೂಕ ಕಳೆದುಕೊಂಡಂತೆ ಕಾಣುತ್ತಿದ್ದಾರೆ.
ಸುನೀತಾ ಅವರ ಮುಖದಲ್ಲಿ ಲವಲವಿಕೆ ಇಲ್ಲ. ಅನಿರೀಕ್ಷಿತವಾಗಿ ಅವಧಿಗಿಂತ ಹೆಚ್ಚಿನ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಕಾರಣ ಸುನೀತಾ ಮತ್ತು ಬುಚ್ ವಿಲ್ನೋರ್ ಅವರ ದೇಹ ರಚನೆಯಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತಿದೆ. ಕೇವಲ ಎಂಟು ದಿನಕ್ಕಾಗಿ ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತಾ ಅವರು ತಾಂತ್ರಿಕ ಸಮಸ್ಯೆಗಳಿಂದಾಗಿ 150ಕ್ಕೂ ಅಧಿಕ ದಿನಗಳ ಕಾಲ ಐಎಸ್ಎಸ್ ನಲ್ಲಿ ವಾಸ ಮಾಡುವಂತಾಗಿದೆ.
BBK 11: ದೊಡ್ಮನೆಯಲ್ಲಿ ಫೇಕ್ ಯಾರು? ಊಸರವಳ್ಳಿ ಯಾರು? ಕಿಚ್ಚ ಕೊಡ್ಸಿದ್ರು ಸೂಪರ್ ಅವಾರ್ಡ್ಸ್ ಗಳನ್ನ