ಶೋಭಿತಾ ಜೊತೆ ಮದುವೆ, ಮಾಜಿ ಪತ್ನಿ ಸಮಂತಾ ಜೊತಗಿನ ತನ್ನ ಕೊನೆಯ ನೆನಪನ್ನು ಅಳಿಸಿ ಹಾಕಿದ Naga Chaitanya

Written by Soma Shekar

Published on:

---Join Our Channel---

Naga Chaitanya : ನಟ ನಾಗಚೈತನ್ಯ (Naga Chaitanya) ಸಮಂತಾಗೆ ವಿಚ್ಚೇದನ ನೀಡಿದ ನಂತರ ಶೋಭಿತಾ ದೂಳಿಪಾಳ (Sobhita Dhulipala) ಪ್ರೇಮದಲ್ಲಿ ಮುಳುಗಿ ಈಗ ನಟಿಯ ಜೊತೆಗೆ ಮದುವೆಗೆ ಸಜ್ಜಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ನಲ್ಲಿ ತೊಡಗಿದ್ದ ನಾಗಚೈತನ್ಯ ಮತ್ತು ಶೋಭಿತಾ ಕೆಲವೇ ದಿನಗಳ ಹಿಂದೆಯಷ್ಟೇ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ನಿಶ್ಚಿತಾರ್ಥದ ಪೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.

ನಾಗಚೈತನ್ಯ ಎಂಗೇಜ್ಮೆಂಟ್ ಆದ ನಂತರವೂ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಮಂತಾ ಜೊತೆಗಿನ ಒಂದು ಫೋಟೋ ಹಾಗೆ ಇತ್ತು ಮತ್ತು ಅದು ಒಂದಷ್ಟು ಸುದ್ದಿಗಳಿಗೆ ಸಹಾ ಕಾರಣವಾಗಿತ್ತು. ಅನೇಕರು ನಾಗಚೈತನ್ಯ ಆ ಫೋಟೋವನ್ನು ಯಾಕಿನ್ನು ಡಿಲೀಟ್ ಮಾಡಿಲ್ಲ ಎನ್ನುವುದಾಗಿಯೂ ಸಹಾ ಕಾಮೆಂಟ್ ಗಳನ್ನು ಮಾಡಿದ್ದರು.

ಎಲ್ಲಾ ಫೋಟೋ ಡಿಲೀಟ್ ಮಾಡಿ ಅದೊಂದು ಫೋಟೋವನ್ನು ಹಾಗೆ ಬಿಟ್ಟಿದ್ದ ನಾಗಚೈತನ್ಯ ಇದೀಗ ತಮ್ಮ ಮಾಜಿ ಪತ್ನಿಯೊಡನೆ ಇದ್ದ ಕೊನೆಯ ಫೋಟೋವನ್ನು ಸಹಾ ಡಿಲೀಟ್ ಮಾಡಿದ್ದಾರೆ. ಅಲ್ಲಿಗೆ ಪ್ರಶ್ನೆ ಕೇಳುತ್ತಿದ್ದವರಿಗೆ ಈಗ ಕೊನೆಗೂ ಉತ್ತರವನ್ನು ನೀಡಿದ್ದಾರೆ ನಟ ನಾಗಚೈತನ್ಯ.

ಶೋಭಿತಾ ಜೊತೆಗೆ ಶೀಘ್ರದಲ್ಲೇ ಸಪ್ತಪದಿ ತುಳಿಯಲಿರುವ ನಾಗಚೈತನ್ಯ ಅವರ ಪ್ರೀ ವೆಡ್ಡಿಂಗ್ ಶೂಟ್ ನ ಸಿದ್ಧತೆಗಳು ಸಹಾ ಜೋರಾಗಿಯೇ ನಡೆಯುತ್ತಿದೆ. ನಾಗಚೈತನ್ಯ ಇನ್ಸ್ಟಾಗ್ರಾಂ ನಲ್ಲಿ ಸಮಂತಾ (Samantha) ಜೊತೆಗೆ ತಾನು ನಟಿಸಿದ ಸಿನಿಮಾದ ಫೋಟೋ ಮಾತ್ರವೇ ಈಗ ಉಳಿದಿದೆ.

Thlapathy Vijay ಮೊಟ್ಟ ಮೊದಲ ಸಮಾವೇಶ, ಹರಿದು ಬಂದ ಜನಸಾಗರ, ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ

Leave a Comment