Samantha : ನಾಗಚೈತನ್ಯ (Naga Chaitanya) ಮತ್ತು ಸಮಂತಾ (Samantha) ಪ್ರೇಮ ಮತ್ತು ವಿವಾಹ ಮುಗಿದ ಕಥೆ. ಅಷ್ಟು ಪ್ರೀತಿಸಿದ ಜೋಡಿ ಬೇರೆಯಾಗಿದ್ದು, ದೂರಾಗಿದ್ದು ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿತ್ತು. ವಿಚ್ಚೇದನದ ನಂತರ ನಾಗಚೈತನ್ಯ ಜೀವನದಲ್ಲಿ ಮುಂದಡಿ ಇಟ್ಟಿದ್ದಾರೆ. ಶೋಭಿತಾ ಧೂಳಿಪಾಳ (Sobhita Dhulipala) ಜೊತೆಗೆ ಪ್ರೀತಿಯಲ್ಲಿ ಬಿದ್ದ ನಾಗಚೈತನ್ಯ ಕೆಲವೇ ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ನಾಗಚೈತನ್ಯ ಮತ್ತು ಶೋಭಿತಾ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಆದರೆ ಸಮಂತಾ ಇನ್ನೂ ಒಂಟಿಯಾಗಿಯೇ ಉಳಿದಿರುವುದು ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿದೆ.
ಸಮಂತಾ ವಿಚ್ಚೇದನದ ನಂತರ ಆರೋಗ್ಯ ಸಮಸ್ಯೆಯಿಂದ ಬಳಲಿದ್ದು, ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದು ಸಹಾ ಅನೇಕರಿಗೆ ಬೇಸರವನ್ನು ಉಂಟು ಮಾಡಿತ್ತು. ಇವೆಲ್ಲವುಗಳ ನಡುವೆ ಸಮಂತಾ ನಾಯಕಿಯಾಗಿರುವ ಸಿಟಾಡೆಲ್ ಹನಿ ಬನ್ನಿ (Honey Bunny) ವೆಬ್ ಸಿರೀಸ್ ಶೀಘ್ರದಲ್ಲೇ ಸ್ಟ್ರೀಮಿಂಗ್ ಆರಂಭಿಸಲಿದ್ದು, ಪ್ರಮೋಷನ್ ನಲ್ಲಿ ಬ್ಯುಸಿಯಿರುವ ನಟಿ ಸಂದರ್ಶನಗಳಲ್ಲಿ ಒಂದಷ್ಟು ಮಾತುಗಳನ್ನಾಡಿದ್ದಾರೆ.
ಸಮಂತಾ ಅವರಿಗೆ ಇನ್ಮುಂದೆ ಐಟಂ ಸಾಂಗ್ ಗಳಲ್ಲಿ ಹೆಜ್ಜೆ ಹಾಕ್ತೀರಾ ಎನ್ನುವ ಪ್ರಶ್ನೆಯನ್ನು ಕೇಳಲಾಗಿದ್ದು ಇದಕ್ಕೆ ಉತ್ತರ ಕೊಟ್ಟ ನಟಿ ಸಮಂತಾ ತಾನು ಇನ್ನು ಮುಂದೆ ಐಟಂ ಹಾಡುಗಳಿಗೆ ಹೆಜ್ಜೆಯನ್ನು ಹಾಕೋದಿಲ್ಲ ಎನ್ನುವ ಮಾತನ್ನು ಹೇಳುವ ಮೂಲಕ ಅಚ್ಚರಿಯನ್ನು ಮೂಡಿಸಿದ್ದಾರೆ. ಏಕೆಂದರೆ ಊಂ ಅಂಟಾವಾ ಹಾಡಿನಿಂದ ಸಂಚಲನ ಸೃಷ್ಟಿಸಿದ್ದ ಸಮಂತಾ ಇನ್ಮುಂದೆ ಐಟಂ ಹಾಡು ಮಾಡಲ್ಲ ಅಂದಿದ್ದು ಅನೇಕರಿಗೆ ಬೇಸರ ಮೂಡಿಸಿದೆ.
ಇದೇ ವೇಳೆ ಮುಂದೆ ನೀವು ಸಿಂಗಲ್ ಆಗೇ ಇರ್ತೀರಾ? ಅನ್ನೋ ಪ್ರಶ್ನೆಯನ್ನು ಸಹಾ ಕೇಳಲಾಗಿದ್ದು, ಸಮಂತಾ ಸಿಂಪಲ್ ಆಗಿ ಇಲ್ಲ ಅನ್ನೋ ಉತ್ತರವನ್ನು ನೀಡಿದ್ದಾರೆ. ಇದನ್ನ ಕೇಳಿ ನಟಿ ಮುಂದೆ ಮದುವೆ ಆಗೋ ಅಥವಾ ರಿಲೇಶನ್ ಶಿಪ್ ನಲ್ಲಿ ಇರೋ ಸೂಚನೆಯನ್ನ ಕೊಟ್ರಾ ಅನ್ನೋ ಅನುಮಾನ ಎಲ್ಲರಿಗೂ ಮೂಡಿದೆ. ಸಮಂತಾ ಸಂದರ್ಶನದ ವೀಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
ಸಮಂತಾ ಇತ್ತೀಚಿನ ದಿನಗಳಲ್ಲಿ ಯಾವುದೇ ಹೊಸ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಬದಲಾಗಿ ನಟಿ ವೆಬ್ ಸಿರೀಸ್ ಗಳ ಕಡೆಗೆ ಹೆಚ್ಚು ಗಮನವನ್ನು ನೀಡಿದ್ದಾರೆ. ಇದೇ ವೇಳೆ ನಟಿ ಜೂ. ಎನ್ ಟಿ ಆರ್ ಅವರ ಮುಂದಿನ ಸಿನಿಮಾದಲ್ಲಿ ನಾಯಕಿಯಾಗುವ ಸಾಧ್ಯತೆಗಳು ದಟ್ಟವಾಗಿದೆ ಎಂದೂ ಸಹಾ ಹೇಳಲಾಗುತ್ತಿದ್ದು, ಟಾಲಿವುಡ್ ಗೆ ಭರ್ಜರಿ ಕಮ್ ಬ್ಯಾಕ್ ಮಾಡ್ತಾರೆ ಎನ್ನಲಾಗಿದೆ.
Bigg Boss Kannada: ಹಿಂದೆ ಮಾತಾಡಿದವ್ರ ಬಂಡವಾಳ ಬಯಲು; ಮೋಕ್ಷಿತಾ ತ್ರಿವಿಕ್ರಮ್ ನಡುವೆ ಸಮರ