Mahesh Babu ರಿಜೆಕ್ಟ್ ಮಾಡಿದ ಸಿನಿಮಾಗಳೇ ಮತ್ತೊಬ್ಬ ಸ್ಟಾರ್ ವೃತ್ತಿಗೆ ಮೈಲಿಗಲ್ಲುಗಳಾಯ್ತು; ಯಾರು ಆ ಸ್ಟಾರ್ ನಟ?

Written by Soma Shekar

Published on:

---Join Our Channel---

Mahesh Babu : ಮಹೇಶ್ ಬಾಬು (Mahesh Babu) ಟಾಲಿವುಡ್ ನ (Tollywood) ಸ್ಟಾರ್ ನಟ. ವೃತ್ತಿ ಜೀವನದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟ. ಮಹೇಶ್ ಬಾಬು ತಮ್ಮ ವೃತ್ತಿ ಜೀವನದಲ್ಲಿ ಒಂದಷ್ಟು ಸಿನಿಮಾಗಳ ಆಫರ್ ತಿರಸ್ಕರಿಸಿದ್ದೂ ಉಂಟು. ಆದರೆ ನಟ ರಿಜೆಕ್ಟ್ ಮಾಡಿದ ಸಿನಿಮಾಗಳು ಮತ್ತೊಬ್ಬ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ವೃತ್ತಿ ಜೀವನದಲ್ಲಿ ಮೈಲಿಗಲ್ಲುಗಳಾದ ಸಿನಿಮಾಗಳಾದವು ಎನ್ನುವುದು ನಿಜ.

ಅಲ್ಲು ಅರ್ಜುನ್ (Allu Arjun), ಪೂಜಾ ಹೆಗ್ಡೆ ಜೋಡಿಯಾಗಿ ನಟಿಸಿ, ಬ್ಲಾಕ್ ಬಸ್ಟರ್ ಸಾಲಿಗೆ ಸೇರಿದ ಅಲಾ ವೈಕುಂಠಪುರಮುಲೋ ಸಿನಿಮಾವನ್ನು ಮೊದಲು ತ್ರಿವಿಕ್ರಮ್ ಮಹೇಶ್ ಬಾಬು ಅವರಿಗಾಗಿ ಸಿದ್ಧ ಪಡಿಸಿದ್ದರು. ಕಥೆ ಇಷ್ಟ ಆದ್ರೂ ಮಹೇಶ್ ಬಾಬು ಅವರು ಕೆಲವೊಂದು ಕಾರಣಗಳಿಂದ ಈ ಸಿನಿಮಾ ರಿಜೆಕ್ಟ್ ಮಾಡಿದ್ದರು.

ಅಲ್ಲು ಅರ್ಜುನ್ ಗೆ ಪ್ಯಾನ್ ಇಂಡಿಯಾ ಖ್ಯಾತಿಯನ್ನು ತಂದುಕೊಟ್ಟ ಪುಷ್ಪ ಸಿನಿಮಾಕ್ಕೆ ನಾಯಕನ ಪಾತ್ರಕ್ಕೆ ಸುಕುಮಾರ್ ಅವರ ಮೊದಲ ಆಯ್ಕೆ ಮಹೇಶ್ ಬಾಬು ಆಗಿದ್ದರು. ಆದರೆ ಮಹೇಶ್ ಬಾಬು ಆ ಪಾತ್ರ ಮಾಡಲು ಒಪ್ಪದೇ ಇದ್ದಾಗ ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ಸುಕುಮಾರ್ ಅಲ್ಲು ಅರ್ಜುನ್ ನನ್ನು ನಾಯಕನಾಗಿ ಮಾಡಿಕೊಂಡರು.‌

ಇದಲ್ಲದೇ ಅನುಷ್ಕಾ ಶೆಟ್ಟಿ ಅಭಿನಯದ ರುದ್ರಮದೇವಿ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸಿದ್ದ ಗೋನ ಗನ್ನಾರೆಡ್ಡಿ ಪಾತ್ರ ಕೂಡಾ ಮಹೇಶ್ ಬಾಬು ಅವರು ರಿಜೆಕ್ಟ್ ಮಾಡಿದ್ದರು. ಆದರೆ ಅಲ್ಲು ಅರ್ಜುನ್ ಆ ಪಾತ್ರದಲ್ಲಿ ಮಿಂಚಿದ್ದರು. ಹೀಗೆ ಮಹೇಶ್ ಬಾಬು ನಿರಾಕರಿಸಿದ ಪಾತ್ರಗಳೇ ಅಲ್ಲು ಅರ್ಜುನ್ ಅವರ ಸ್ಟಾರ್ ಡಂ ಅನ್ನು ಇನ್ನಷ್ಟು ಹೆಚ್ಚಿಸಿದೆ.

Amruthadhaare ಜೈದೇವ್ ಪಾಪದ ಕೊಡ ತುಂಬಾಯ್ತು, ಸಾಕ್ಷಿ ಸಮೇತ ಮುಖವಾಡ ತೆಗೆಯಲು ಸಜ್ಜಾದ ಭೂಮಿಕಾ

Leave a Comment