Mokshita Pai: Bigg Boss ಮನೆಯಲ್ಲಿ ಮೋಕ್ಷಿತಾ ಕಣ್ಣೀರು, ಆ ಒಂದು ಕಾರಣಕ್ಕೆ ಭಾವುಕರಾದ ನಟಿ

Written by Soma Shekar

Published on:

---Join Our Channel---

Mokshita Pai: ಪಾರು ಸೀರಿಯಲ್ ಖ್ಯಾತಿಯ ನಟ ಮೋಕ್ಷಿತಾ ಪೈ (Mokshita Pai) ಅವರು ಬಿಗ್ ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಯಾಗಿದ್ದಾರೆ. ಆದರೆ ಇಲ್ಲಿ ಅವರು ಮತ್ತು ಗೌತಮಿ (Gowthami Jadav) ಇಬ್ಬರೂ ಸಹಾ ಮುಕ್ತವಾಗಿ ಎಲ್ಲರೊಂದಿಗೆ ಬೆರೆಯುವ, ಮಾತನಾಡುವ ಗೋಜಿಗೆ ಹೋಗುತ್ತಿಲ್ಲ. ಇದೇ ವೇಳೆ ಮೋಕ್ಷಿತಾ ಪೈ ಅವರು ಭಾವನಾತ್ಮಕ ವ್ಯಕ್ತಿ ಎನ್ನುವುದು ಎಲ್ಲರಿಗೂ ಗೊತ್ತಾಗುತ್ತಿದೆ.

ಮೋಕ್ಷಿತಾ ಬೇರೆಯವರ ನೋವಿಗೆ ಮಿಡಿಯುತ್ತಾರೆ. ಅಲ್ಲದೇ ಅವರು ಮಾನವೀಯತೆ ಮುಖ್ಯ ಎಂದು ವಾದಿಸುತ್ತಾರೆ. ದೊಡ್ಮನೆಯಲ್ಲಿ ಟಾಸ್ಕ್ ವೊಂದರ ವಿಚಾರವಾಗಿ ನಟಿಯು ಕಣ್ಣೀರನ್ನು ಕೂಡಾ ಹಾಕಿದ್ದು, ಇದಕ್ಕೆ ಕಾರಣವಾಗಿದ್ದು ಟಾಸ್ಕ್ ವೇಳೆ ಸ್ಪರ್ಧಿಗಳಿಗೆ ಆದಂತಹ ನೋವಾಗಿದೆ.

ಟಾಸ್ಕ್ ಆಡುವವರನ್ನ ಸೋಲಿಸಲು ಎದುರಾಳಿಗಳು ನೀರು ಎರಚುವುದು, ದಿಂಬಿನಿಂದ ಹೊಡೆಯುವುದು ಮಾಡುತ್ತಿದ್ದರು. ಇದರಿಂದ ಕೆಲವರು ಬಿದ್ದು ನೋವು ಮಾಡಿಕೊಂಡಿದ್ದಾರೆ. ಇದನ್ನೆಲ್ಲಾ ನೋಡಿ ಬೇಸರಗೊಂಡ ಮೋಕ್ಷಿತಾ‌ ಮಾನವೀಯತೆ ಮುಖ್ಯ ಎಂದು ಕಣ್ಣೀರನ್ನು ಹಾಕಿದ್ದಾರೆ.

ಮೋಕ್ಷಿತಾ ಅವರ ಈ ಮಾತುಗಳನ್ನ ಅನೇಕರು ಒಪ್ಪಿದ್ದಾರೆ. ಟಾಸ್ಕ್ ಗೋಸ್ಕರ ಮಾನವೀಯತೆಯನ್ನು ಮರೆಯಬಾರದು ಎಂದು ಮೋಕ್ಷಿತಾ ಮಾತಿಗೆ ತಮ್ಮ ಮಾತನ್ನು ಸೇರಿಸಿದ್ದಾರೆ. ಮೋಕ್ಷಿತಾ ಬಿಗ್ ಬಾಸ್ ಮೂಲಕ ಪ್ರೇಕ್ಷಕರ ಮನ ಗೆದ್ದು ಫೈನಲ್ ವರೆಗೆ ಹೋಗ್ತಾರಾ ಅನ್ನೊದನ್ನ ಕಾದು ನೋಡಬೇಕಾಗಿದೆ.

Leave a Comment