BBK 11: ಮಂಜು ವಿರುದ್ಧ ಸಿಡಿದೆದ್ದ ಮೋಕ್ಷಿತಾ, ಗೌತಮಿ; ಒಂದು ಟಾಸ್ಕ್ ನಿಂದ ಗೆಳೆತನ ಹಗೆತನ ಆಯ್ತು

Written by Soma Shekar

Published on:

---Join Our Channel---

Bigg Boss Kannada: ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಗೌತಮಿ, ಮೋಕ್ಷಿತಾ ಮತ್ತು ಉಗ್ರಂ‌ ಮಂಜು ಅವರ ನಡುವಿನ ಸ್ನೇಹ ಮತ್ತು ಅವರ ನಡುವಿನ ಬಾಂಡಿಂಗ್ ಗೆ ಈಗಾಗಲೇ ಪರ ಮತ್ತು ವಿರೋಧ ಮಾತುಗಳು ಸಹಾ ಕೇಳಿ ಬಂದಿದೆ. ತಾವು ಮೂವರು ಒಬ್ಬರಿಗೊಬ್ಬರು ಸದಾ ನಿಲ್ಲುತ್ತೇವೆ ಎಂದೇ ಬಿಂಬಿಸಿಕೊಂಡು ಬಂದಿದ್ದ ಈ ಮೂವರ ಸ್ನೇಹದಲ್ಲಿ ಈಗ ಕಂಪನ ಮೂಡಿದೆ. ಮೋಕ್ಷಿತಾ ಮತ್ತು ಗೌತಮಿ ಇಬ್ಬರೂ ಸಹಾ ಮಂಜು ಮೇಲೆ ತಿರುಗಿ ಬಿದ್ದಿದ್ದಾರೆ. ಆಕ್ರೋಶ ವನ್ನು ಹೊರ ಹಾಕಿದ್ದಾರೆ.

ಈಗ ಐದನೇ ವಾರದಲ್ಲಿ ಬಿಗ್ ಬಾಸ್ (BBK 11) ಟಾಸ್ಕ್ ವಿಚಾರದಲ್ಲಿ ಮೋಕ್ಷಿತಾ (Mokshitha) ಮತ್ತು ಗೌತಮಿ (Gowthami) ಇಬ್ಭರೂ ಮಂಜು ಅವರ ಆಟವನ್ನು ನೋಡಿ ಶಾಕ್ ಆಗಿದ್ದಾರೆ. ಮೋಕ್ಷಿತಾ ಒಂದು ಕಡೆ ಕುಳಿತು, ನಾವು ನೋಡಿದ ಮಂಜಣ್ಣಾನ ಹೀಗಾ ಮಾಡ್ತಾ ಇರೋದು ಅನ್ನೋ ಮಾತನ್ನ ಹೇಳ್ತಾ ತಮ್ಮ ಬೇಸರ ಮತ್ತು ಅಸಮಾಧಾನವನ್ನು ಹೊರ ಹಾಕಿದರೆ, ಗೌತಮಿ ಟಾಸ್ಕ್ ವೇಳೆ ಮಂಜು ಅವರ ಮೇಲೆ ಗರಂ ಆಗಿದ್ದಾರೆ.

ಮೂರ್ನಾಲ್ಕು ದಿನದಿಂದ ಅವರ ಮೇಲೆ ಮಿಸ್ ಹೊಡಿತಾ ಇದೆ ಎಂದಿದ್ದಾರೆ ಮೋಕ್ಷಿತಾ. ಮಂಜಣ್ಣ ಆಗ ನಾವು ಫೇರ್ ಗೇಮ್ ಆಡಿಲ್ಲ ಬುದ್ಧಿವಂತಿಕೆ ಆಟ ಆಡಿದ್ದೀವಿ ಅಂತ ಹೇಳಿದ್ದಾರೆ. ಇದಕ್ಕೆ ಮೋಕ್ಷಿತಾ ಮತ್ತು ಗೌತಮಿ ಚಪ್ಪಾಳೆ ತಟ್ಟಿದರೆ ಗೌತಮಿ ನಮ್ಮ ಗೆಳೆಯ ಇಷ್ಟು ಬುದ್ಧಿವಂತ ಅಂತ ನಮಗೆ ಗೊತ್ತಿರ್ಲಿಲ್ಲ ಎಂದರೆ ಮಂಜು ಅದಕ್ಕೆ ಥ್ಯಾಂಕ್ಸ್ ಅಂತ ಹೇಳಿ ಟಾಂಗ್ ನೀಡಿದ್ದಾರೆ.

ಮೋಕ್ಷಿತಾ ಗೌತಮಿಗೆ ಮಂಜು (Ugram Manju) ಅವ್ರೊಬ್ಬರನ್ನ ಹೈಲೈಟ್ ಮಾಡ್ಕೊಳ್ಳೋಕೆ ಟ್ರೈ ಮಾಡ್ತಾ ಇದ್ದಾರೆ. ನೀವು ಬಂದಿರೋದು ಒಬ್ರು ನಿಮ್ಮ ಪಾಡಿಗೆ ನೀವು ಒಬ್ರಿಗಾಗಿ ಆಟ ಆಡಿ ಅನ್ನೋ ಸಲಹೆಯನ್ನು ಕೊಟ್ಟಿದ್ದಾರೆ. ಅನಂತರ ಮಂಜಣ್ಣ ಗೌತಮಿ ಅವರ ಬಳಿ ಹೋದಾಗಲೂ ಗೌತಮಿ ನಾನು ಫ್ರೆಂಡ್ ಶಿಪ್ ನಿರೀಕ್ಷೆ ಮಾಡಲ್ಲ ಅಂತ ಹೇಳಿದ್ದಾರೆ. ಟಾಸ್ಕ್ ವಿಚಾರವಾಗಿ ಮೂವರ ಸ್ನೇಹದಲ್ಲೊಂದು ಬಿರುಕು ಮೂಡಿದೆ.

Puttakkana Makkalu: ಪುಟ್ಟಕ್ಕನ ಮಗಳು ಸ್ನೇಹಾ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ?

Leave a Comment