Megastar Chiranjeevi ಗೆ ವಿಶೇಷ ಗೌರವ, ಗಿನ್ನೆಸ್ ರೆಕಾರ್ಡ್ ನಲ್ಲಿ ದಾಖಲಾಯ್ತು ನಟನ ಹೆಸರು; ಥ್ರಿಲ್ ಆದ ಫ್ಯಾನ್ಸ್

Written by Soma Shekar

Published on:

---Join Our Channel---

Megastar Chiranjeevi : ತೆಲುಗು ಸಿನಿಮಾ ರಂಗದಲ್ಲಿ ಮೆಗಾಸ್ಟಾರ್ ಖ್ಯಾತಿಯನ್ನು ಪಡೆದಿರುವ ನಟ ಚಿರಂಜೀವಿ (Megastar Chiranjeevi) ಅವರು ಟಾಲಿವುಡ್ ನ ದಿಗ್ಗಜ ನಟರಲ್ಲಿ ಒಬ್ಬರು. ಅಪಾರ ಅಭಿಮಾನಿಗಳನ್ನು ಪಡೆದಿರುವ ಈ ನಟ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈಗ ನಟನ ಖ್ಯಾತಿಗೆ ಗಿನ್ನಿಸ್ ದಾಖಲೆಯ (Guinness World Record) ಗರಿಯು ಜೊತೆಯಾಗಿದೆ.

ನಟ ಚಿರಂಜೀವಿ ಅವರ ಸಿನಿಮಾಗಳಲ್ಲಿನ ಡ್ಯಾನ್ಸ್ ಗಳಿಂದಾಗಿ ಅವರಿಗೆ ಚಲನಚಿತ್ರೋದ್ಯಮದ ಅತ್ಯಂತ ಸಮೃದ್ಧ ತಾರೆ (Most Prolific Cinema Star) ಎಂದು ಗಿನ್ನೆಸ್ ದಾಖಲೆಯ ಗೌರವ ದಕ್ಕಿದೆ. ಪ್ರಮಾಣ ಪತ್ರವನ್ನು ಸ್ವೀಕರಿಸಿದ ನಟ ಚಿರಂಜೀವಿ ಅವರು, ನೃತ್ಯವು ನನ್ನ ಜೀವನದ ಒಂದು ಭಾಗವೇ ಆಗಿದೆ.

ಸಾವಿತ್ರಿಯಂತಹ ಲೆಜೆಂಡ್ ನಾಯಕಿರೊಂದಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದು, ಸಿನಿಮಾದಲ್ಲಿ ನಾಯಕಿಯರ ಜೊತೆಗೆ ಹೆಜ್ಜೆ ಹಾಕಿದ್ದನ್ನು ನಾನು ಸ್ಮರಿಸುತ್ತೇನೆ. ನನ್ನನ್ನು ನಟನಾಗಿ ಮಾಡುವುದರಲ್ಲಿ ನಿರ್ದೇಶಕರು, ನಿರ್ಮಾಪಕರು ಮತ್ತು ನೃತ್ಯ ಸಂಯೋಜಕರ ಪಾತ್ರ ಬಹಳ ದೊಡ್ಡದು ಅವರಿಗೆ ಚಿರ ಋಣಿಯಾಗಿರುತ್ತೇನೆ ಎಂದಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಅವರು ಟಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ 45 ವರ್ಷಗಳ ಸಿನಿಮಾ ಜರ್ನಿ ಮುಗಿಸಿದ್ದು, 156 ಸಿನಿಮಾಗಳಲ್ಲಿ 537 ಹಾಡುಗಳಲ್ಲಿ 24,000 ಡ್ಯಾನ್ಸ್ ಸ್ಟೆಪ್ ಗಳನ್ನು ಹಾಕಿದ್ದಾರೆ ಎನ್ನುವುದು ಅವರ ಸಾಧನೆಯಾಗಿದ್ದು, ಈ ಸಾಧನೆಗೆ ಗಿನ್ನೆಸ್ ದಾಖಲೆಯ ಗೌರವ ಅವರಿಗೆ ದಕ್ಕಿದೆ.

Amruthadhaare ಮಗು ಕಳ್ಕೊಂಡ ಮಲ್ಲಿ, ದಿಯಾ ಮಾತು ಕೇಳಿ ಮಲ್ಲಿನ ಮುಗಿಸಿಬಿಡ್ತಾನಾ ಜೈದೇವ್; ಹೊಸ ಟ್ವಿಸ್ಟ್

Leave a Comment