Megastar Chiranjeevi : ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರಿಗೆ ಕೆಲವೇ ದಿನಗಳ ಹಿಂದೆಯಷ್ಟೇ ಸಿನಿಮಾಗಳಲ್ಲಿನ ಅವರ ನೃತ್ಯಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯ (Guinness World Record) ಗೌರವಕ್ಕೆ ಭಾಜನರಾಗಿದ್ದಾರೆ. ನಟ 156 ಚಿತ್ರಗಳಲ್ಲಿ 537 ಹಾಡುಗಳಿಗೆ 24 ಸಾವಿರಕ್ಕೂ ಹೆಚ್ಚು ಹೆಜ್ಜೆಗಳನ್ನು ಹಾಕಿದ ಸಾಧನೆ ಮಾಡಿದ್ದು ಅವರ ಈ ಸಾಧನೆಗೆ ಗಿನ್ನೆಸ್ ದಾಖಲೆಯ ಗೌರವ ದಕ್ಕಿದೆ.
ಗಿನ್ನೆಸ್ ಗೌರವಕ್ಕೆ ಭಾಜನರಾದ ಬೆನ್ನಲ್ಲೇ ನಟ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಡ್ಯಾನ್ಸ್ ಮಾಸ್ಟರ್ ಇಲ್ಲದ ವೇಳೆಯಲ್ಲಿ ಅವರೇ ನೃತ್ಯ ಸಂಯೋಜನೆ ಮಾಡಿದ್ದರು ಎನ್ನುವ ವಿಷಯವೊಂದು ಈಗ ಹೊರಗೆ ಬಂದಿದೆ. ತಮ್ಮಾ ರೆಡ್ಡಿ ಭರದ್ವಾಜ್ ಅವರ ನಿರ್ದೇಶನದ ಕೋತಲರಾಯುಡು ಸಿನಿಮಾದಲ್ಲಿ ನಟ ಒಂದು ಹಾಡಿಗೆ ತಾವೇ ನೃತ್ಯ ಸಂಯೋಜನೆ ಮಾಡಿದ್ದರು.
ಕೋತಲರಾಯುಡು (Kotala Rayudu) ಸಿನಿಮಾದ ಒಂದು ಹಾಡಿಗೆ ತಾರಾ ಮಾಸ್ಟರ್ ಅವರು ಕೊರಿಯೋಗ್ರಫಿ ಮಾಡಬೇಕಿತ್ತು. ಆದರೆ ಅವರು ಬೇರೊಂದು ಸಿನಿಮಾದ ಕೆಲಸದ ಕಾರಣದಿಂದ ಹೊರಡಬೇಕಾಯಿತು. ಆಗ ನಟ ಚಿರಂಜೀವಿ ಅವರೇ ತಮ್ಮ ಹಾಗೂ ಆಗ ಬಾಲನಟಿಯಾಗಿದ್ದ ನಟಿ ತುಳಸಿ ಅವರ ಜೊತೆಗಿನ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದರು.
ಚಿರಂಜೀವಿ ಅವರಿಗೆ ಗಿನ್ನೆಸ್ ದಾಖಲೆಯನ್ನು ಪಡೆದ ಸಂದರ್ಭದಲ್ಲಿ ಅವರ ನೆಲವಂಕ ಗೋರಿಂಕ ಹಾಡನ್ನು ಪ್ರದರ್ಶನ ಮಾಡಲಾಯಿತು. ಅದನ್ನು ನೋಡಿದಾಗ ಚಿರಂಜೀವಿ ನೃತ್ಯ ನಿರ್ದೇಶನ ಮಾಡಿದ ಘಟನೆ ನೆನಪಾಯಿತು ಎಂದು ತಮ್ಮಾರೆಡ್ಡಿ ಅವರು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.
Janhvi Kapoor ಒಂದು ಹಾಡು, ಮೂರು ಸೀನ್ ಇಷ್ಟಕ್ಕೇ ಜಾನ್ವಿ ಬೇಕಿತ್ತಾ? ದೇವರ ನೋಡಿ ನಿರಾಸೆಯಲ್ಲಿ ಫ್ಯಾನ್ಸ್