Rajasthan: ರಾಜಸ್ಥಾನದ (Rajasthan) ಬಾಡ್ಮೇರ್ ನಿಂದ ಅಚ್ಚರಿಯನ್ನ ಉಂಟುಮಾಡುವ ಒಂದು ಘಟನೆ ವರದಿಯಾಗಿದೆ. ಇಲ್ಲಿನ ಯುವಕನೊಬ್ಬನು ತನ್ನ ತಮ್ಮನ ನೀಟ್ (NEET) ಎಕ್ಸಾಂ ಅನ್ನು ಬರೆಯುವಾಗ ಸಿಕ್ಕಿಬಿದ್ದಿದ್ದಾನೆ.. ಎಕ್ಸಾಮ್ ಪರಿವೀಕ್ಷಕರ ಪ್ರಕಾರ ಈ ವ್ಯಕ್ತಿಯು ಡ್ಯೂಪ್ಲಿಕೇಟ್ ಕ್ಯಾಂಡಿಡೇಟ್ ಆಗಿದ್ದು, ಅನುಮಾನ ಬಂದ ಕಾರಣ ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾಗಿ ಹೇಳಿದ್ದಾರೆ. ಪ್ರಸ್ತುತ ಪೊಲೀಸರು ಇಬ್ಬರೂ ಸಹೋದರರನ್ನು ಅರೆಸ್ಟ್ ಮಾಡಿದ್ದು ಮುಂದಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಭಾನುವಾರದಂದು ನೀಟ್ ಯು ಜಿ ಪರೀಕ್ಷೆ ಆಯೋಜನೆ ಮಾಡಲಾಗಿತ್ತು. ಇದಕ್ಕಾಗಿ ಬಾಡ್ಮೇರ್ ನಲ್ಲಿ (Badmer) 8 ಎಕ್ಸಾಮ್ ಸೆಂಟರ್ ಗಳನ್ನು ತೆರೆಯಲಾಗಿತ್ತು. ಈ ಘಟನೆಯು ಅಂತರಿದೇವಿ ರಾಜಕೀಯ ಉಚ್ಚ ಮಾಧ್ಯಮಿಕ ವಿದ್ಯಾಲಯದ ಎಕ್ಸಾಮ್ ಸೆಂಟರ್ ನಲ್ಲಿ ನಡೆದಿದೆ. ಎಕ್ಸಾಂ ಕೋಣೆಯಲ್ಲಿ ಉಪಸ್ಥಿತರಿದ್ದ ಶಿಕ್ಷಕರಿಗೆ ಎಕ್ಸಾಮ್ ನೀಡಲು ಬಂದಿರುವ ಒಬ್ಬ ಪರೀಕ್ಷಾರ್ಥಿಯ ಮೇಲೆ ಅನುಮಾನ ಮೂಡಿದೆ. ಇದರಿಂದ ಅವರು ಆ ಯುವಕನ ವಿವರವನ್ನು ಪರಿಶೀಲನೆ ಮಾಡಿದ್ದು ಆತ ಅಸಲಿ ಪರೀಕ್ಷಾರ್ಥಿ ಅಲ್ಲ ಅಂತ ತಿಳಿದು ಬಂದಿದೆ.
ನಂತರ ಅವರು ಪೊಲೀಸರಿಗೆ ಕರೆ ಮಾಡಿ ಈ ವಿಷಯದ ಸೂಚನೆಯನ್ನು ಕೊಟ್ಟಿದ್ದಾರೆ. ಕೊಡಲೇ ಪೊಲೀಸ್ ಟೀಮ್ ಘಟನೆಯ ಸ್ಥಳಕ್ಕೆ ಬಂದಿದ್ದು ಆ ಯುವಕನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆಯನ್ನು ನಡೆಸಿದಾಗ, ಆ ಯುವಕ ತನ್ನ ಹೆಸರು ಭಾಗಿರಥರಾಮ್ (Bhagirath Ram) ಅಂತ ತಿಳಿಸಿದ್ದು, ತನ್ನ ಕಿರಿಯ ಸಹೋದರ ಗೋಪಾಲ್ ರಾಮ್ ನ ಜಾಗದಲ್ಲಿ ಪರೀಕ್ಷೆಯನ್ನ ಬರೆಯುತ್ತಿರುವುದಾಗಿ ಹೇಳಿದ್ದಾರೆ.
ಹಿಂದಿನ ವರ್ಷ ಭಾಗಿರಥ್ ನೀಟ್ ಪರೀಕ್ಷೆಯನ್ನ ಪಾಸ್ ಮಾಡಿ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಪಡೆದುಕೊಂಡು, ಮೊದಲ ವರ್ಷದ ಮೆಡಿಕಲ್ ವಿದ್ಯಾರ್ಥಿಯಾಗಿದ್ದಾರೆ. ಕಿರಿಯ ಸಹೋದರನಿಗೂ ಸಹಾ ಮೆಡಿಕಲ್ ನಲ್ಲಿ ಸೀಟ್ ಸಿಗಬೇಕೆನ್ನುವ ಆಸೆಯಿಂದ ಅವನ ಪರವಾಗಿ ತಾವೇ ನೈಟ್ ಎಕ್ಸಾಮನ್ನು ಬರೆಯುವ ಪ್ರಯತ್ನವನ್ನು ಮಾಡುವಾಗ ನಕಲಿ ಅಭ್ಯರ್ಥಿಯಾಗಿ ಎಕ್ಸಾಮ್ ಗೆ ಬಂದಿದ್ದು, ಈಗ ಪೊಲೀಸರ (Police) ಕೈಗೆ ಸಹೋದರರು ಸಿಕ್ಕಿ ಬಿದ್ದಿದ್ದಾರೆ.