Viral News : ಸುಖ ಸಂಸಾರವನ್ನು ಒಬ್ಬ ವಿವಾಹಿತ ಮಹಿಳೆ (Viral News) ತಾನೇ ಹಾಳು ಮಾಡಿಕೊಂಡಿದ್ದಾಳೆ. ಗಂಡ ಮತ್ತು ಮಕ್ಕಳು ಇದ್ದಾರೆ ಎನ್ನುವ ವಿಷಯವನ್ನು ಮರೆತು, ಕುಟುಂಬದ ಮರ್ಯಾದೆ ಹೋಗುತ್ತದೆ ಎನ್ನುವುದನ್ನು ಆಲೋಚನೆ ಮಾಡದೆ ಮಹಿಳೆ ಮಾಡಿದ ಕೆಲಸದಿಂದ ಆಕೆ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ನೆರೆಯ ರಾಜ್ಯ ತೆಲಂಗಾಣದಲ್ಲಿ ಇಂತಹದೊಂದು ಘಟನೆ ನಡೆದಿದೆ. ಸಂಸಾರವನ್ನು ನಡೆಸಿಕೊಂಡು ಹೋಗಬೇಕಿದ್ದ ಮಹಿಳೆ ಮಾಡಿದ ತಪ್ಪಿನಿಂದ ಕೊನೆಗೆ ತಾನೇ ಸಾವಿಗೆ ಶರಣಾಗಿದ್ದಾಳೆ
ಚಿಂತಪಲ್ಲಿ (Chintapalli) ಮಂಡಲದಲ್ಲಿ ಧೈರ್ಯಪುರಿಗೆ ಸೇರಿದ ವಾಂಕುಡೋತ್ ಹರಿನಾಯಕ ಮತ್ತು ರೋಜಾ (Roja) ಪತಿ-ಪತ್ನಿಯರಾಗಿದ್ದು ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರು ಒಂದು ದಿನಸಿ ಅಂಗಡಿಯನ್ನು ನಡೆಸಿಕೊಂಡು ಜೀವನವನ್ನು ಸಾಗಿಸುತ್ತಿದ್ದರು. ಸಂಸಾರ ಹಾಗೂ ಮಕ್ಕಳು ಹೀಗೆ ಕುಟುಂಬ ಬಹಳ ಸಂತೋಷದಿಂದ ಯಾವುದೇ ಸಮಸ್ಯೆ ಇಲ್ಲದೆ ಇತ್ತು. ಆದರೆ ಮತ್ತೊಬ್ಬ ವ್ಯಕ್ತಿಯ ಆಗಮನ ಎಲ್ಲವನ್ನು ಹಾಳು ಮಾಡಿತು.
ಅದೇ ಊರಿನ ನಿವಾಸಿ ಕಲ್ಯಾಣ್ ಎನ್ನುವ ವ್ಯಕ್ತಿ ರೋಜಾಳನ್ನ ಪ್ರೇಮಿಸುತ್ತಿದ್ದೇನೆ ಎಂದು ಆಕೆಯ ಹಿಂದೆ ಬಿದ್ದಿದ್ದ. ತನ್ನ ಮಾತಿನ ಮೋಡಿಯಿಂದಲೇ ಆಕೆಯನ್ನು ತನ್ನ ಕಡೆಗೆ ತಿರುಗಿಸಿಕೊಂಡು ಆಕೆಗೆ ಒಂದು ಸೆಲ್ ಫೋನ್ ಕೊಡಿಸಿದನು. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದನು. ಆತನ ಮಾತಿಗೆ ಮರುಳಾದ ರೋಜಾ ಗಂಡ ಮತ್ತು ಮಕ್ಕಳನ್ನು ಬಿಟ್ಟು ಕಳೆದ ತಿಂಗಳು ಕಲ್ಯಾಣ್ ಜೊತೆ ಮನೆಯಲ್ಲಿ ಬಿಟ್ಟು ಓಡಿ ಹೋಗಿದ್ದಾಳೆ. ನಂತರ ಆಕೆಯ ಗಂಡ ಮತ್ತು ಕುಟುಂಬ ಸದಸ್ಯರು ಕಲ್ಯಾಣ್ ಕುಟುಂಬದ ಮೇಲೆ ಜಗಳಕ್ಕೆ ಇಳಿದಿದ್ದಾರೆ.
ಈ ಜಗಳದ ನಂತರ ಕಲ್ಯಾಣ್ ರೋಜಾ ಜೊತೆಗೆ ವಾಪಸ್ಸು ಬಂದಿದ್ದು ಊರಿನ ದೊಡ್ಡ ವ್ಯಕ್ತಿಗಳ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿ ನಡೆಸಿ ರೋಜಾಳನ್ನು ಗಂಡನ ಮನೆಗೆ ಕಳಿಸಲಾಗಿದೆ. ಆದರೆ ಗಂಡನ ಮನೆಯವರ ಚುಚ್ಚು ಮಾತುಗಳಿಂದ ಬೇಸತ್ತು ರೋಜಾ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಅಕ್ಕ ಪಕ್ಕದವರು ಗಮನಿಸಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿದೆ ಆಕೆ ಪ್ರಾಣ ಬಿಟ್ಟಿದ್ದು, ಗಂಡನ ಮನೆಯವರ ಮೇಲೆ ದೂರನ್ನು ದಾಖಲಿಸಲಾಗಿದೆ.
Sonu Srinivas Gowda : ಅಪ್ಪು ಪರಮಾತ್ಮ ಸಿನಿಮಾ ತರ 15 ಕಂಬಗಳ ಮನೆ ಕಟ್ಟಿದ ಸೋನು; ಗೃಹ ಪ್ರವೇಶದ ಫೋಟೋ ವೈರಲ್