Manu Bhaker: ಮನು ಈಗ ಸ್ಟಾರ್, ನಾನು ಕೆಲಸ ಇಲ್ಲದ ಕೋಚ್; ನೋವು ಹಂಚಿಕೊಂಡ ಮನು ಅವರ ಕೋಚ್

Written by Soma Shekar

Published on:

---Join Our Channel---

Manu Bhaker: ಮನು ಭಾಕರ್ (Manu Bhaker) ಪ್ರಸ್ತುತ ಇಡೀ ದೇಶದ ಕಣ್ಮಣಿಯಾಗಿ ಅಪಾರ ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ಯಾರಿಸ್ ಒಲಂಪಿಕ್ಸ್ ನಲ್ಲಿ (Paris Olympics 2024) ಎರಡು ಪದಕಗಳನ್ನ ಪಡೆದುಕೊಳ್ಳುವ ಮೂಲಕ ಅಸಂಖ್ಯಾತ ಭಾರತೀಯರಿಂದ ಅಪಾರ ಮೆಚ್ಚುಗೆಗಳನ್ನು ತನ್ನದಾಗಿಸಿಕೊಂಡು ಹೊಸ ನ್ಯಾಷನಲ್ ಕ್ರಷ್ ಎನ್ನುವಂತೆ ಎಲ್ಲೆಡೆ ಮನುಭಾಕರ್ ಅವರ ಫೋಟೋಗಳು ಹರಿದಾಡುತ್ತಿವೆ.

ಈ ವೇಳೆ ಮನು ಭಾಕರ್ ಅವರ ವೈಯಕ್ತಿಕ ಕೋಚ್ ಆಗಿ ಒಲಂಪಿಕ್ಸ್ ಗೆ ತೆರಳಿರುವ ಜಸ್ಪಾಲ್ ರಾಣಾ (Jaspal Rana) ಅವರು ಕೆಲಸವಿಲ್ಲದೇ ತಾನು ಅನುಭವಿಸಿದಂತಹ ನೋವನ್ನು ಹಂಚಿ ಕೊಂಡಿದ್ದಾರೆ. ಮನು ಈಗ ಏನು ಸಾಧಿಸಿದ್ದಾರೆ, ಆ ವಿಚಾರವಾಗಿ ನನಗೆ ಬಹಳ ಸಂತೋಷವಿದೆ. ಆಕೆಯಲ್ಲಿದ್ದ ಸಾಮರ್ಥ್ಯವನ್ನು ನಾನು ಹೊರ ತಂದೆ ಅಷ್ಟೇ.

ಈಗ ಯಾರೆಲ್ಲ ನನ್ನ ಸಂದರ್ಶನಕ್ಕಾಗಿ ಬರುತ್ತಿದ್ದಾರೆ, ಹಾತೊರೆಯುತ್ತಿದ್ದಾರೆ ಅವರೆಲ್ಲಾ ನನ್ನನ್ನು ಟೋಕಿಯೋದಲ್ಲಿ ಖಳನಾಯಕನನ್ನಾಗಿ ಮಾಡಿದ್ದರು. ಮೂರು ವರ್ಷಗಳ ಕಾಲ ರಾಷ್ಟ್ರೀಯ ರೈಫಲ್ ಸಂಸ್ಥೆ ಮತ್ತು ಬೇರೆ ಯಾವುದೇ ಏಜೆನ್ಸಿಗಳು ನನಗೆ ಕೆಲಸವನ್ನ ಕೊಡಲಿಲ್ಲ.

ಇಷ್ಟು ವರ್ಷ ಸಂಬಳವಿಲ್ಲದೆ ಕಳೆದಿದ್ದೇನೆ. ಮನು ಈಗ ಒಬ್ಬ ಸ್ಟಾರ್. ನಾನೊಬ್ಬ ಕೆಲಸವಿಲ್ಲದ ಕೋಚ್. ಮನು ನನಗೆ ಸಹಾಯ ಮಾಡಲು ಕೇಳಿಕೊಂಡು ನನಗೊಂದು ಅಸ್ತಿತ್ವವನ್ನು ನೀಡಿದರು. ಭಾರತಕ್ಕೆ ಮರಳಿದ ಮೇಲೆ ನಾನೊಂದು ಕೆಲಸವನ್ನು ಹುಡುಕಿಕೊಳ್ಳಬೇಕು ಎನ್ನುವ ಮಾತನ್ನ ರಾಣಾ ಅವರು ಹೇಳಿದ್ದಾರೆ.

Anushka Shetty: ಅನುಷ್ಕಾ ಶೆಟ್ಟಿ ಬೇಕಾದ್ರೆ 50 ಲಕ್ಷ ? ಮ್ಯಾನೇಜರ್ ಆಟ ಬಯಲು, ಶಾಕ್ ನಲ್ಲಿ ಅಭಿಮಾನಿಗಳು

Leave a Comment