Manisha Koirala: ಬಾಲಿವುಡ್ ನ (Bollywood) ಒಂದು ಕಾಲದ ಸ್ಟಾರ್ ನಟಿ, ಮಾಧುರಿ ದೀಕ್ಷಿತ್ ಗೆ ಟಕ್ಕರ್ ನೀಡಿದ್ದ ನಟಿ ಮನೀಷಾ ಕೊಯಿರಾಲ (Manisha Koirala) ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ದಕ್ಷಿಣ ಸಿನಿಮಾ ಪ್ರೇಮಿಗಳಿಗೂ ಇವರು ಪರಿಚಿತರಾಗಿದ್ದಾರೆ. ಇದೀಗ ನಟಿ ಬಹುದಿನಗಳ ನಂತರ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಮನೀಷಾ ಕೊಯಿರಾಲ ಮಾತನಾಡುತ್ತಾ, ನಾನು ಮದುವೆಯ ಕನಸು ಕಂಡಿದ್ದೆ ಆದರೆ ಎಂದು ಜೀವನದಲ್ಲಿ ನಡೆದಂತಹ ತನ್ನ ಎಲ್ಲಾ ತಪ್ಪುಗಳನ್ನು ನೆನಪಿಸಿಕೊಂಡು ಪಶ್ಚಾತ್ತಾಪ ಪಡುತ್ತಿದ್ದಾರೆ. ಎ ಲವ್ ಸ್ಟೋರಿ, ಬಾಂಬೆ, ಗುಪ್ತ್, ಅಗ್ನಿಸಾಕ್ಷಿ ಗಳಂತಹ ಸಿನಿಮಾಗಳ ಮೂಲಕ ವೃತ್ತಿಪರ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿದವರು ಈ ನಟಿ.
ಆದರೆ ನಟಿಯ ಖಾಸಗಿ ಜೀವನ ಮಾತ್ರ ಸವಾಲುಗಳಿಂದಲೇ ತುಂಬಿತ್ತು. ಮನೀಷಾ 2020 ರಲ್ಲಿ ಉದ್ಯಮಿ ಸಾಮ್ರಾಟ್ ದಹಾಲ್ ಅವರನ್ನು ವಿವಾಹವಾದರು ಆದರೆ ಈ ಬಾಂಧವ್ಯ ಹೆಚ್ಚು ದಿನ ಉಳಿಯಲೇ ಇಲ್ಲ. ಎರಡು ವರ್ಷಗಳ ನಂತರ ಇವರ ವಿಚ್ಚೇದನವಾಯಿತು. ನಂತರ ತನಗೆ ಕ್ಯಾನ್ಸರ್ ಇರುವ ವಿಷಯ ತಿಳಿದ ನಟಿ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಿದರು.
ನಟಿ ಮದುವೆಗೆ ಮೊದಲೇ ಹನ್ನೆರಡು ಮಂದಿಯ ಜೊತೆಗೆ ಡೇಟಿಂಗ್ ಮಾಡಿದರೂ ಯಾರೊಂದಿಗೂ ಗಟ್ಟಿ ಸಂಬಂಧ ಬೆಸೆಯಲೇ ಇಲ್ಲ. ನಾನಾ ಪಾಟೇಕರ್ ಸೇರಿ ವಿವೇಕ್ ಮುಶ್ರಾನ್, ಡಿಜೆ ಹುಸೇನ್, ಸೆಸಿಲ್ ಆಂಥೋನಿ, ಆರ್ಯನ್ ವೇದ್, ಪ್ರಶಾಂತ್ ಚೌಧರಿ, ಕ್ರಿಸ್ಪಿನ್ ಕಾನ್ರಾಯ್, ತಾರಿಕ್ ಪ್ರೇಮ್ಜಿ ಜೊತೆಗೆ ನಟಿಯ ಡೇಟಿಂಗ್ ನಡೆದಿತ್ತು ಎನ್ನಲಾಗಿದೆ.
Salman Khan: ನೆಚ್ಚಿನ ನಟ ಹೀಗಾಗಿ ಬಿಟ್ರಾ ಅಂತ ಕಣ್ಣೀರಿಟ್ಟ ಫ್ಯಾನ್ಸ್; ಸಲ್ಮಾನ್ ಅಭಿಮಾನಿಗಳು ಬೇಸರ ಯಾಕೆ?