Varsham Movie: ವರ್ಷಂಗೆ ಹೀರೋ ಆಗಿ ಪ್ರಭಾಸ್ ನಿರ್ದೇಶಕನ ಮೊದಲ ಆಯ್ಕೆ ಆಗಿರ್ಲಿಲ್ಲ, ಈ ಸಿನಿಮಾ ರಿಜೆಕ್ಟ್ ಮಾಡಿ ಸ್ಟಾರ್ ಯಾರು?

Written by Soma Shekar

Published on:

---Join Our Channel---

Varsham Movie: ವರ್ಷಂ ಸಿನಿಮಾ (Varsham Movie) ಸಿನಿ ಪ್ರಿಯರ ಮನಸ್ಸಿನಲ್ಲಿ ಸದಾ ಹಸಿರಾಗಿರುವ ಸಿನಿಮಾ ಆಗಿದೆ. ಈ ಸಿನಿಮಾ ಮೂಲಕ ಪ್ರಭಾಸ್ (Prabhas) ಮತ್ತು ತ್ರಿಷಾ (Trisha) ಜೋಡಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಇಂದಿಗೂ ಸಿನಿ ಪ್ರಿಯರಿಗೆ ವರ್ಷಂ ಸಿನಿಮಾ ಅಂದರೆ ಅವರ ಫೇವರಿಟ್ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾ ಮೂಲಕ ತ್ರಿಷಾ ಟಾಲಿವುಡ್ ನಲ್ಲಿ ಸ್ಟಾರ್ ಆದವರು.

ವರ್ಷಂ ಸಿನಿಮಾ ಪ್ರಭಾಸ್ ಕೆರಿಯರ್ ನ ಮೊದಲ ಬ್ಲಾಕ್ ಬಸ್ಟರ್ ಸಿನಿಮಾ ಆಗಿತ್ತು. ಅಲ್ಲದೇ ಸಿನಿಮಾ ಪ್ರಶಸ್ತಿಗಳನ್ನು ಪಡೆಯುವುದರಲ್ಲಿಯೂ ಹಿಂದೆ ಬಿದ್ದಿರಲಿಲ್ಲ. ಇಂತಹ ದೊಡ್ಡ ಸೂಪರ್ ಹಿಟ್ ಸಿನಿಮಾದಲ್ಲಿ ಪ್ರಭಾಸ್ ನಾಯಕನ ಪಾತ್ರಕ್ಕೆ ಮೊದಲ ಆಯ್ಕೆ ಆಗಿರಲಿಲ್ಲ ಎನ್ನುವುದು ಸಹಾ ಸತ್ಯ.

ಹೌದು, ನಿರ್ದೇಶಕ ಶೋಭನ್ (Shobhan) ಅವರು ವರ್ಷಂ ಸಿನಿಮಾಕ್ಕಾಗಿ ಸೂಪರ್ ಸ್ಟಾರ್ ಮಹೇಶ್ ಬಾಬು ಅವರನ್ನ ನಾಯಕನನ್ನಾಗಿ ಮಾಡಲು ಅವರಿಗೆ ಕಥೆಯನ್ನು ಹೇಳಿದ್ದರು. ಆದರೆ ಮಹೇಶ್ ಬಾಬು (Mahesh Babu) ಅವರಿಗೆ ಕಥೆ ಅಷ್ಟಾಗಿ ಹಿಡಿಸದ ಕಾರಣ ಅವರು ಈ ಸಿನಿಮಾದ ಆಫರ್ ಅನ್ನು ರಿಜೆಕ್ಟ್ ಮಾಡಿದ ಮೇಲೆ ಪ್ರಭಾಸ್ ಈ ಸಿನಿಮಾ ನಾಯಕನಾದರು.

ಶೋಭನ್ ಅದೇ ಕಥೆಯನ್ನು ಪ್ರಭಾಸ್ ಗೆ ಹೇಳಿದಾಗ ಪ್ರಭಾಸ್ ಇಷ್ಟಪಟ್ಟು ಒಪ್ಪಿಕೊಂಡರಂತೆ.. ಅನಂತರ ಸಿನಿಮಾ ಸಿದ್ಧವಾಗಿ ಬಿಡುಗಡೆ ಆದ ಮೇಲೆ ಬ್ಲಾಕ್ ಬಸ್ಟರ್ ಆಗಿದ್ದು, ಪ್ರಭಾಸ್ ಅವರ ವೃತ್ತಿ ಜೀವನದಲ್ಲಿ ವರ್ಷಂ ಸಿನಿಮಾ ಮೈಲಿಗಲ್ಲಾಗಿದ್ದು ಈಗ ಇತಿಹಾಸ ಎಂದೇ ಹೇಳಬಹುದು.

Leave a Comment