ತಮ್ಮ ಮಗಳಿಗೆ ಮದುವೆ, ಬೇರೆ ಅವ್ರ ಮಕ್ಕಳಿಗೆ ಸನ್ಯಾಸ್ಯತ್ವಕ್ಕೆ ಪ್ರೋತ್ಸಾಹ ಯಾಕೆ? ಸದ್ಗುರುಗಳನ್ನ ಪ್ರಶ್ನಿಸಿದ Madras High Court

Written by Soma Shekar

Published on:

---Join Our Channel---

Madras : ಆಧ್ಯಾತ್ಮಿಕ ಗುರುಗಳಾಗಿ ಹೆಸರನ್ನು ಮಾಡಿರುವ ಸದ್ಗುರು ಜಗ್ಗಿ ವಾಸುದೇವ್ (Sadguru Jaggi Vasudev) ಅವರ ಸ್ವಂತ ಮಗಳು ಮದುವೆ ಆಗಿದ್ದಾರೆ. ಆದರೆ ಅವರ ಆಶ್ರಮದಲ್ಲಿ ಇರುವ ಮಹಿಳೆಯರಿಗೆ ಮಾತ್ರ ತಲೆ ಬೋಳಿಸಿಕೊಂಡು, ಪ್ರಾಪಂಚಿಕ ವಿಷಯಗಳಿಂದ ದೂರವಾಗಿದ್ದು ಸನ್ಯಾಸಿಗಳ ರೀತಿ ಬದುಕಿ ಅಂತ ಏಕೆ ಪ್ರೇರಣೆ ನೀಡ್ತಾರೆ ಎಂದು ಮದ್ರಾಸ್ (Madras) ಹೈಕೋರ್ಟ್‌ (High Court) ಪ್ರಶ್ನೆಯನ್ನು ಮಾಡಿದೆ.

ಕೊಯಮತ್ತೂರಿನಲ್ಲಿರುವ ತಮಿಳುನಾಡು ಕೃಷಿ ವಿಶ್ವ ವಿದ್ಯಾಲಯದ ನಿವೃತ್ತ ಪ್ರೊಫೆಸರ್ ಎಸ್. ಕಾಮರಾಜು ಅವರು ಹೈಕೋರ್ಟ್‌ ಮೊರೆ ಹೋಗಿದ್ದರು, ತಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಸದ್ಗುರು ಜಗ್ಗಿ ವಾಸುದೇವ್ ಬ್ರೈನ್ ವಾಶ್ ಮಾಡಿ ಆಶ್ರಮದಲ್ಲಿ ಇರುವಂತೆ ಮಾಡಿದ್ದು, ತಮ್ಮಿಬ್ಬರು ಹೆಣ್ಣು ಮಕ್ಕಳನ್ನು ನ್ಯಾಯಾಲಯದ ಎದುರು ಹಾಜರು ಪಡಿಸುವಂತೆ ಅವರು ಅರ್ಜಿ ಸಲ್ಲಿಸಿದ್ದರು.

ಆದರೆ ಕೋರ್ಟ್ ಗೆ ಹಾಜರಾದ ಪ್ರೊಫೆಸರ್ ಅವರ ಮಕ್ಕಳು ತಾವು ಸ್ವಇಚ್ಛೆಯಿಂದ ಆಶ್ರಮದಲ್ಲಿ ಇರುವುದಾಗಿ ಹೇಳಿದ್ದಾರೆ. ಈ ವೇಳೆ ನ್ಯಾಯಮೂರ್ತಿ ಶಿವಜ್ಞಾನಂ ಅವರು ಜಗ್ಗಿ ವಾಸುದೇವ್ ಅವರು ನ್ಯಾಯಾಲಯದಲ್ಲಿ ಇಲ್ಲವಾದರೂ ಅವರ ಕೌಟುಂಬಿಕ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು ಪ್ರಶ್ನೆ ಮಾಡಿದ್ದಾರೆ.

ತಮ್ಮ ಮಗಳಿಗೇ ಮದುವೆ ಮಾಡಿ, ಉತ್ತಮ ಬದುಕು ಕಟ್ಟಿ ಕೊಟ್ಟಿರುವ ವ್ಯಕ್ತಿ, ತಮ್ಮ ಆಶ್ರಮದಲ್ಲಿ ಇರುವ ಬೇರೆಯವರ ಮಕ್ಕಳಿಗೆ ಮಾತ್ರ ತಲೆ ಬೋಳಿಸಿಕೊಳ್ಳಲು ಹಾಗೂ ಪ್ರಾಪಂಚಿಕ ವಿಷಯಗಳಿಂದ ದೂರಾಗಿ ಸನ್ಯಾಸಿಗಳಂತೆ ಬದುಕುವುದಕ್ಕೆ ಏಕೆ ಪ್ರೇರಣೆ ನೀಡುತ್ತಿದ್ದಾರೆ ಎಂಬುದಾಗಿ ಪ್ರಶ್ನಿಸಿದ್ದಾರೆ.

ಸ್ವರ್ಗದ ಅಪ್ಸರೆ ನನ್ನ ಬಿಟ್ಟು ಆ ಮುದುಕನ್ನ ಮದುವೆ ಆದ್ಲು, Ram Gopal Varma ಆಡಿದ ಮಾತು ವೈರಲ್

Leave a Comment