Bigg Boss : ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 11 ರ ಮನೆಗೆ ಈ ಬಾರಿ ಪ್ರವೇಶ ಪಡೆದಿದ್ದು ಒಟ್ಟು 17 ಮಂದಿ ಸ್ಪರ್ಧಿಗಳು. ಅದರಲ್ಲಿ ಮೊದಲ ವಾರ ಒಬ್ಬರು ಅಂದರೆ ಯಮುನಾ (Yamuna) ಅವರು ಎಲಿಮಿನೇಷನ್ ಆಗಿ ಹೊರಗೆ ಬಂದರು. ಎರಡನೇ ವಾರದಲ್ಲಿ ದಸರಾ ಹಿನ್ನೆಲೆಯಲ್ಲಿ ಅದು ನೋ ಎಲಿಮಿನೇಷನ್ ವೀಕ್ ಆಗಿದ್ರಿಂದ ಎಲ್ಲರೂ ಸೇಫ್ ಆಗಿದ್ದರು.
ನಂತರ ಮೂರನೇ ವಾರದಲ್ಲಿ ಇಬ್ಬರು ಮನೆಯಿಂದ ಹೊರಗೆ ಬಂದರು. ಈ ಎಲಿಮಿನೇಷನ್ ಮನೆಯಲ್ಲಿ ನಿಯಮ ಉಲ್ಲಂಘನೆ ಮಾಡಿದ ಕಾರಣ ಬಿಗ್ ಬಾಸ್ ನೀಡಿದಂತಹ ಶಿಕ್ಷೆಯಾಗಿತ್ತು. ನಂತರ ಹನುಮಂತ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ.
ಇವೆಲ್ಲವುಗಳ ನಡುವೆ ಮನೆಯಿಂದ ಹೊರ ಬಂದಿರುವ ಲಾಯರ್ ಜಗದೀಶ್ (Lawyer Jagadish) ಅವರು ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಎಂಟ್ರಿಯನ್ನು ನೀಡಿದ್ದಾರೆ ಎನ್ನುವ ಸುದ್ದಿಯೊಂದು ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಅವರು ಇದ್ದಾಗ ಅವರು ಮನೆಯ ಸ್ಪರ್ಧಿಗಳಿಗೆ ವಿಲನ್ ಆಗಿ ಕಂಡಿದ್ದರು. ಆದರೆ ಹೊರಗೆ ವೀಕ್ಷಕರಿಗೆ ಮಾತ್ರ ಅವರು ಹೀರೋ ತರ ಕಂಡಿದ್ರು. ಜಗದೀಶ್ ಅವರು ಹೊರಗೆ ಬಂದ ಮೇಲೆ ಅವರನ್ನು ಮತ್ತೆ ಬಿಗ್ ಬಾಸ್ ಗೆ ಕಳಿಸಿ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ಕಾಮೆಂಟ್ ಮಾಡಿದ್ದರು.
SeethaRama ಸೀರಿಯಲ್ ನಲ್ಲಿ ಶಾಕಿಂಗ್ ಟ್ವಿಸ್ಟ್, ಸಿಹಿ ಕಥೆ ಮುಗೀತಾ? ಪ್ರೊಮೊ ನೋಡಿ ವೀಕ್ಷಕರ ಬೇಸರ