Lawyer Jagadish: ಮಹಿಳೆಯರನ್ನು ನಿಂದನೆ ಮಾಡಿದ್ದಾರೆ ಎನ್ನುವ ಕಾರಣದಿಂದಾಗಿ ಲಾಯರ್ ಜಗದೀಶ್ (Lawyer Jagadish) ಅವರನ್ನು ಬಿಗ್ ಬಾಸ್ ಕನ್ನಡದ 11ನೇ (Bigg Boss Kannada Season 11) ಆವೃತ್ತಿಯಿಂದ ಹೊರಗೆ ಕಳಿಸಲಾಗಿದೆ. ಹೀಗೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಲಾಯರ್ ಜಹದೀಶ್ ಅವರು ನಟ ಸುದೀಪ್ ಹಾಗೂ ಇತರ ಸ್ಪರ್ಧಿಗಳ ಕ್ಷಮೆಯನ್ನು ಕೋರಿದ್ದಾರೆ ಎಂದು ಸುದ್ದಿಯಾಗಿದೆ.
ಜಗದೀಶ್ ಅವರು ಕೆಲವು ಮಾಧ್ಯಮಗಳಿಗೆ ಸಂದೇಶ ರವಾನಿಸಿದ್ದು, ‘ನೂರಾರು ಕ್ಯಾಮೆರಾ, ಸಾವಿರಾರು ಬಿಗ್ ಬಾಸ್ ಸಿಬ್ಬಂದಿ, ಆ ನಿರ್ದೇಶಕ, ಆ ಮಾಂತ್ರಿಕ ತಂತ್ರಜ್ಞರು, ಅವರ 24/7 ಡೆಡಿಕೇಷನ್ ಹಾಗೂ 20 ಕೋಟಿಗೂ ಹೆಚ್ಚಿನ ಬಿಗ್ ಬಾಸ್ ಅಭಿಮಾನಿ ದೇವರುಗಳ ಆಶೀರ್ವಾದ ಈ ಹೊಸ ಕರ್ನಾಟಕ ಕ್ರಶ್ ಲಾಯರ್ ಜಗದೀಶ್ ಆಗಿದ್ದಾನೆ ಎಂದಿದ್ದಾರೆ.
ನಿಮ್ಮ ಪ್ರತಿಯೊಂದು ಚಪ್ಪಾಳೆ, ಸಂದೇಶ, ನಿಮ್ಮ ಆಶೀರ್ವಾದ ನನ್ನ ಈ ಬಿಗ್ ಬಾಸ್ ಪಯಣ ಯಶಸ್ಸು, ಅದು ನೀವು ಇಟ್ಟ ಈ ನಂಬಿಕೆ. ಮತ್ತೊಮ್ಮೆ ಕೋಟಿ ಕೋಟಿ ನಮನ. ಸಾರ್ಥಕ ಆಯಿತು, ನನ್ನ ಈ ಹುಟ್ಟು, ಈ ಪ್ರೀತಿ, ನನ್ನ ಗೆಲುವಿಗೆ ನೀವು ಕೊಟ್ಟ ಆ ಒಡನಾಟ, ನನ್ನ ಬಳಿ ಪದಗಳು ಕಡಿಮೆ, ವಿಶ್ಲೇಷಣೆ ಮಾಡಲು ಎಂದು ಅವರು ಹೇಳಿದ್ದಾರೆ.
ಹಾಗೆ ಮುಂದುವರೆಸಿ, ಸುದೀಪ್ ಸರ್ ನನ್ನನ್ನು ಕ್ಷಮಿಸಿ. ನನ್ನ ಕ್ಷಮಾಪಣೆ ಸ್ವೀಕರಿಸಿ. ನಿಮ್ಮ ಮೇಲೆ ನನಗೆ ಪ್ರೀತಿ, ಗೌರವ ಇದೆ. ನಿಮ್ಮ ಸಲಹೆಯಿಂದ ನಾನು ತುಂಬಾ ಕಲಿತೆ. ನೀವು ನನಗೆ ಶಿಕ್ಷಕರ ಸಮಾನ. ನಾನು ಸುದೀಪ್ ಅವರಿಗೆ, ಬಿಗ್ ಬಾಸ್ ತಂಡಕ್ಕೆ ಆಭಾರಿಯಾಗಿರುವೆ. ಬೆಳಿಗ್ಗೆ ಎದ್ದೇಳಲು ಹಾಕುವ ಹಾಡನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ.
ಐಶ್ವರ್ಯಾ ಅವರು ನನ್ನನ್ನು ಕುಣಿಯವಂತೆ ಮಾಡಿದರು. ಅವರಿಗೆ ಧನ್ಯವಾದಗಳು. ರಂಜಿತ್, ಮಾನಸ ಹಾಗೂ ಅಲ್ಲಿರುವ ಎಲ್ಲರೂ ಸಣ್ಣ ವಯಸ್ಸಿನಲ್ಲೇ ಅಧ್ಭುತ ಕಲಾವಿದರೆಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ನಾನು ಎಲ್ಲರಲ್ಲಿ ಒಬ್ಬನಾಗಲು ಪ್ರಯತ್ನಪಟ್ಟೆ. ನಗಲು ಪ್ರಯತ್ನ ಪಟ್ಟೆ. ಈ ನಿಟ್ಟಿನಲ್ಲಿ ನನ್ನಿಂದ ಕೆಲವು ತಪ್ಪುಗಳು ಆಗಿವೆ. ಯಾವುದೂ ವೈಯಕ್ತಿಕವಲ್ಲ. ಅದು ಮನೋರಂಜನೆಯ ಒಂದು ಭಾಗವಾಗಿತ್ತಷ್ಟೇ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಪಶ್ಚಾತ್ತಾಪ ಖಂಡಿತ ಇಲ್ಲ ಅರ್ಜುನ್ ಕಪೂರ್ ಜೊತೆ ಬ್ರೇಕಪ್ ನಂತರ ಟೀಕೆ ಮಾಡಿದವ್ರಿಗೆ Malaika Arora ಖಡಕ್ ತಿರುಗೇಟು