Bigg Boss Kannada 11 ಕ್ಕೆ ನಟಿ ಶ್ವೇತಾ ಎಂಟ್ರಿ ? ಲಕ್ಷ್ಮೀ ನಿವಾಸದಲ್ಲಿ ಲಕ್ಷ್ಮೀ ಮಿಸ್ ಆಗಿರೋದು ಇದಕ್ಕೇನಾ

Written by Soma Shekar

Published on:

---Join Our Channel---

Bigg Boss Kannada 11 : ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ಭಾವನಾಗೆ (Bhavana) ತಾಳಿ ಕಟ್ಟಿರೋದು ಸಿದ್ಧು (Siddu) ಅನ್ನೋ ವಿಚಾರ ಯಾವಾಗ ಗೊತ್ತಾಗುತ್ತೆ ಅಂತ ಪ್ರೇಕ್ಷಕರು ಕಾಯ್ತಾ ಇದ್ದಾರೆ. ಆದರೆ ಇದೇ ವೇಳೆ ಮನೆಯಲ್ಲಿ ಎಷ್ಟೇ ಸಮಸ್ಯೆಗಳು ಆಗ್ತಿದ್ರು, ಮಗಳ ಕಣ್ಣೀರು ಒರೆಸೋಕೆ ತಾಯಿಯೇ ಮನೆಯಲ್ಲಿ ಇಲ್ವಲ್ಲ ಅನ್ನೋದು ಪ್ರೇಕ್ಷಕರ ಪ್ರಶ್ನೆಯಾಗಿದೆ. ‌ಲಕ್ಷ್ಮೀ ಪಾತ್ರ ಕಾಣೆಯಾಗಿ ಸಾಕಷ್ಟು ದಿನಗಳೇ ಆಗಿದೆ. ಇದು ಪ್ರೇಕ್ಷಕರಿಗೆ ಬೇಸರವನ್ನು ಸಹಾ ತಂದಿದೆ.

ಲಕ್ಷ್ಮೀ ಪಾತ್ರ ವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಇರೋ ನಟಿ ಶ್ವೇತಾ (Actress Shwetha) ಅವರು ಇತ್ತೀಚಿಗೆ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದನ್ನು ನೋಡಿ ಪ್ರೇಕ್ಷಕರಲ್ಲಿ ಈಗಾಗಲೇ ಹೊಸ ಹೊಸ ಅನುಮಾನಗಳು ಮೂಡಿದೆ. ಶ್ವೇತಾ ಅವರು ತಮ್ಮ ಪಾತ್ರದಿಂದ ಹೊರ ನಡೆದ್ರಾ? ಅವರು ಸೀರಿಯಲ್ ನಲ್ಲಿ ಇನ್ಮುಂದೆ ನಟಿಸಲ್ವಾ? ಎಂಬೆಲ್ಲಾ ಪ್ರಶ್ನೆಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.

ಇದೇ ವೇಳೆ ಮತ್ತೊಂದು ಕಡೆ ಈಗ ಹೊಸ ಸುದ್ದಿಯೊಂದು ಎಲ್ಲರ ಗಮನ ಸೆಳೆದಿದೆ. ಇದು ಸಹಾ ನೆಟ್ಟಿಗರ ಅನುಮಾನವೇ ಆಗಿದೆ. ಹೌದು, ಶ್ವೇತಾ ಅವರು ಬಿಗ್ ಬಾಸ್ (Bigg Boss Kannada 11) ಮನೆಗೆ ಸ್ಪರ್ಧಿಯಾಗಿ ಎಂಟ್ರಿ ನೀಡ್ತಿದ್ದಾರೆ ಅದಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳಲು ಅವರು ಲಕ್ಷ್ಮೀ ನಿವಾಸ ಸೀರಿಯಲ್ ನಿಂದ ಬ್ರೇಕ್ ತಗೊಂಡಿದ್ದಾರೆ ಎನ್ನುವ ಅನುಮಾನ ಅನೇಕರಿಗೆ ಮೂಡಿದೆ.‌

ಬಹಳ ದಿನಗಳಿಂದ ನಟಿ ಸೀರಿಯಲ್ ನಲ್ಲಿ ಕಾಣ್ತಿಲ್ಲ. ಇದೇ ವೇಳೆ ಬಿಗ್ ಬಾಸ್ ನ ಹೊಸ ಸೀಸನ್ ಶುರುವಾಗ್ತಿದೆ. ಇದನ್ನ ನೋಡಿದ ನೆಟ್ಟಿಗರು ತಾವೇ ನಿರ್ಧಾರಕ್ಕೆ ಬಂದಂತೆ ಶ್ವೇತ ಅವರು ಬಿಗ್ ಬಾಸ್ ಗೆ ಹೋಗ್ತಿದ್ದಾರೆ ಅಂತ ಗೆಸ್ ಮಾಡ್ತಾ ಇದ್ದಾರೆ. ಇಂತಹ ಪ್ರಶ್ನೆ ಮತ್ತು ಅನುಮಾನಗಳಿಗೆ ತೆರೆ ಬೀಳೋದು ಯಾವಾಗ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment