Kriti Sanon: ತನಗಿಂತ 10 ವರ್ಷ ಚಿಕ್ಕವನ ಜೊತೆ ಸ್ಟಾರ್ ನಟಿಯ ಲವ್; ನಟಿ ಡೇಟ್ ಮಾಡ್ತಿರೋ ಯುವ ಉದ್ಯಮಿ ಇವರೇ

Written by Soma Shekar

Published on:

---Join Our Channel---

Kriti Sanon: ಬಾಲಿವುಡ್ ಬೆಡಗಿ ಕೃತಿ ಸೆನೋನ್ (Kriti Sanon) ಪ್ರಸ್ತುತ ಕಬೀರ್ ಬಾಹಿಯಾಗೆ ಹತ್ತಿರವಾಗಿದ್ದಾರೆ. ಕೆಲವೇ ದಿನಗಳ ಹಿಂದೆ ನಟಿಯು ಗ್ರೀಸ್ ನಲ್ಲಿ ಜನ್ಮ ದಿನ ಸೆಲೆಬ್ರೇಟ್ ಮಾಡಿದಾಗಲೂ ಕಬೀರ್ ನಟಿಯ ಜೊತೆಗಿದ್ದರು ಎನ್ನುವುದು ವಿಶೇಷ. ಅದಕ್ಕೂ ಮುನ್ನ ಇಬ್ಬರೂ ದುಬೈನಲ್ಲಿ ಜೊತೆಯಾಗಿ ಕಂಡ ಫೋಟೋ ಸಹಾ ಭರ್ಜರಿಯಾಗಿ ವೈರಲ್ ಆಗುವ ಮೂಲಕ ಸುದ್ದಿಯಾಗಿತ್ತು. ಇವರ ನಡುವೆ ಏನೋ ನಡೀತಿದೆ ಅನ್ನೋ ಟಾಕ್ ಬಿ ಟೌನ್ ನಲ್ಲಿ ಶುರು ಅಗಿದೆ.

ಆದಿಪುರುಷ್ ಸಿನಿಮಾ ಸಮಯದಲ್ಲಿ ಕೃತಿ ಹೆಸರು ನಟ ಪ್ರಭಾಸ್ ಜೊತೆಗೆ ತಳಕು ಹಾಕಿಕೊಂಡಿತ್ತು. ಆದರೆ ಈ ಬಗ್ಗೆ ನಟಿಯಾಗಲೀ, ಪ್ರಭಾಸ್ ಆಗಲೀ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ಉದ್ಯಮಿಯ ಜೊತೆಗೆ ನಟಿಯು ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಮಾತುಗಳಂತೂ ಜೋರಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಉದ್ಯಮಿ ಕಬೀರ್ ಬಹಿಯಾ (Kabir Bahia) ಮತ್ತು ಕೃತಿ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗಿದೆ. ಕಬೀರ್ ಬ್ರಿಟನ್ ಮೂಲದ ಉದ್ಯಮಿಯಾಗಿದ್ದಾರೆ. ಲಂಡನ್ ನ ಶ್ರೀಮಂತ ಕುಟುಂಬಗಳಲ್ಲಿ ಕಬೀರ್ ಅವರ ಕುಟುಂಬ ಸಹಾ ಸೇರಿದೆ. ಇವರು ಸಾವಿರಾರು ಕೋಟಿ ರೂಪಾಯಿಗಳ ಒಡೆಯ ಎನ್ನುವುದು ಸಹಾ ಸತ್ಯ.

ಎಲ್ಲದಕ್ಕಿಂದ ಆಸಕ್ತಿಕರ ವಿಚಾರ ಏನಂದ್ರೆ ಕಬೀರ್ ಗೆ ಈಗ 24 ವರ್ಷ ವಯಸ್ಸು, ಅದೇ ವೇಳೆ ಕೃತಿ 34 ರ ಹರೆಯಕ್ಕೆ ಕಾಲಿಟ್ಟಿದ್ದಾರೆ. ಕೃತಿ ಮತ್ತು ಕಬೀರ್ ನಡುವೆ ಹತ್ತು ವರ್ಷಗಳ ವಯಸ್ಸಿನ ಅಂತರವಿದೆ. ತಮಗಿಂತ ಕಿರಿಯ ವಯಸ್ಸಿನ ಉದ್ಯಮಿಯೊಂದಿಗೆ ಕೃತಿ ಲವ್ ನಲ್ಲಿ ಬಿದ್ರಾ? ಅನ್ನೋದು ಈಗ ಎಲ್ಲರ ಪ್ರಶ್ನೆಯಾಗಿದೆ.

South Actress: ನಟಿಯ ವಯಸ್ಸು 43, ನಾಲ್ಕನೇ ಮದುವೆಗೆ ಸಜ್ಜು, ವಿಷಯ ಕೇಳಿ ಸಂಭ್ರಮಿಸಿದ ಫ್ಯಾನ್ಸ್

Leave a Comment