Jayam Ravi : ಸೆಲೆಬ್ರಿಟಿಗಳ ಜೀವನದಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿಚ್ಚೇದನ ಅನ್ನೋದು ಸಾಮಾನ್ಯ ಆಗ್ತಿದೆ. ಬಹಳ ವರ್ಷಗಳಿಂದ ಜೊತೆಯಾಗಿದ್ದ ಜೋಡಿಗಳು ಸಹಾ ವಿಚ್ಚೇದನ ಪಡೆಯೋದು ಶಾಕಿಂಗ್ ಎನಿಸಿದೆ. ಈಗ ತಮಿಳಿನ ಜನಪ್ರಿಯ ನಟ ಜಯಂ ರವಿ (Jayam Ravi) ಮತ್ತು ಆರತಿ (Arati) ನಡುವಿನ ದಾಂಪತ್ಯ ಜೀವನ ಕೊನೆಯಾಗಿದೆ. ಜಯಂ ರವಿ ಮತ್ತು ಆರತಿ ಅವರದ್ದು ಹದಿನೈದು ವರ್ಷಗಳ ದಾಂಪತ್ಯ ಜೀವನವಾಗಿತ್ತು.
ಈ ಜೋಡಿಗೆ ಇಬ್ಬರು ಮಕ್ಕಳಿದ್ದು, ಈಗ ಇಷ್ಟು ವರ್ಷಗಳ ನಂತರ ಇವರು ಬೇರೆಯಾಗುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಸಹಾ ಶಾಕ್ ಆಗಿದ್ದಾರೆ. ನಟ ಈ ವಿಚಾರವಾಗಿ, ಇದು ಆತುರವಾಗಿ ತೆಗೆದುಕೊಂಡ ನಿರ್ಧಾರವಲ್ಲ. ಸಾಕಷ್ಟು ಯೋಚನೆ ಮಾಡಿ ಎಲ್ಲರ ಒಳಿತಿಗಾಗಿ ತೆಗೆದುಕೊಂಡ ನಿರ್ಧಾರ ಎಂದು ಹೇಳಿದ್ದಾರೆ.
ಇಂತಹ ಕಷ್ಟದ ಸಂದರ್ಭದಲ್ಲಿ ನನ್ನ ಮತ್ತು ನನ್ನ ಕುಟುಂಬದವರ ಖಾಸಗಿತನವನ್ನು ಗೌರವಿಸಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ ಹಾಗೂ ಈ ವಿಷಯವಾಗಿ ಯಾವುದೇ ರೀತಿಯ ಗಾಸಿಪ್, ವದಂತಿ, ಊಹಾಪೋಹ, ಆರೋಪ ಮಾಡಬೇಡಿ. ಇದು ಖಾಸಗಿಯಾಗಿಯೇ ಇರಲಿ’ ಎಂದು ನಟ ಮನವಿ ಮಾಡಿದ್ದಾರೆ.
ನನ್ನ ಮೊದಲ ಆದ್ಯತೆ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುವುದು, ನಾನು ಸದಾ ನಿಮ್ಮ ಜಯಂ ರವಿ (Jayam Ravi Divorce) ಆಗಿಯೇ ಇರುತ್ತೇನೆ. ನಿಮ್ಮ ಬೆಂಬಲವೇ ನನಗೆ ಸರ್ವಸ್ವ, ಇಷ್ಟು ವರ್ಷಗಳಲ್ಲಿ ನೀವು ಕೊಟ್ಟಿರುವ ಪ್ರೀತಿಗೆ ನಾನು ಚಿರ ಋಣಿ ಎಂಬುದಾಗಿ ನಟ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Kodishree : 5 ಕಡೆಗಳಿಂದ ಕಾದಿದೆ ಆಪತ್ತು, ಮಳೆ ಇನ್ನೂ ಮುಗಿದಿಲ್ಲ; ಕೋಡಿಶ್ರೀಗಳು ನುಡಿದ ಸ್ಪೋಟಕ ಭವಿಷ್ಯ