Actor Dhanush: ಧನುಷ್ ಹೊಸ ಸಿನಿಮಾಗಳಿಗೆ ಭಾರೀ ಸಂಕಷ್ಟ; ನಿರ್ಮಾಪಕರ ಆಕ್ರೋಶಕ್ಕೆ ಸ್ಟಾರ್ ನಟ ಸುಸ್ತು

Written by Soma Shekar

Published on:

---Join Our Channel---

Actor Dhanush: ತಮಿಳು ಸಿನಿಮಾ ರಂಗದ ನಟ, ನಟಿಯರಿಗೆ ದೊಡ್ಡ ಶಾಕ್ ನೀಡುವಂತಹ ನಿರ್ಣಯಗಳು ಹೊರ ಬಂದಿವೆ. ಹೌದು, ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ (Producers Council) ಸಂಚಲನ ಮೂಡಿಸುವಂತಹ ಒಂದಷ್ಟು ನಿರ್ಣಯಗಳನ್ನು ಮಾಡಿರುವ ವಿಚಾರ ಈಗ ಚರ್ಚೆಯ ವಿಷಯವಾಗಿದೆ. ಈ ನಿರ್ಣಯಗಳಲ್ಲಿ ನಟ, ನಟಿಯರು ತಮ್ಮ ಬಾಕಿ ಉಳಿದಿರುವ ಚಿತ್ರಗಳನ್ನು ಮುಗಿಸಿದ ನಂತರವಷ್ಟೇ ಹೊಸ ಚಿತ್ರಗಳ ಶೂಟಿಂಗ್ ಆರಂಭಿಸಬೇಕೆಂದು ಸೂಚನೆ ನೀಡಲಾಗಿದೆ.

ಮಂಡಳಿಯು ನಿರ್ಮಾಪಕರಿಂದ ಬಾಕಿ ಉಳಿದಿರುವ ಸಿನಿಮಾಗಳು ಮತ್ತು ನಟರಿಗೆ ನೀಡಲಾಗಿರುವ ಅಡ್ವಾನ್ಸ್ ಕುರಿತಾಗಿ ಮಾಹಿತಿಯನ್ನು ಪಡೆದುಕೊಂಡಿದೆ. ಇನ್ಮುಂದೆ ನಟ ನಟಿಯರು ಬಾಕಿ ಇರುವ ಸಿನಿಮಾವನ್ನು ಮುಗಿಸಿದ ನಂತರವಷ್ಟೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳಬೇಕೆಂದು ಸೂಚನೆಯನ್ನು ನೀಡಲಾಗಿದೆ. ಹಾಗೇ ನಟ ನಟಿಯರು ಬಾಕಿ ಉಳಿದ ಸಿನಿಮಾ ಮುಗಿಸದೇ ಹೊಸ ಸಿನಿಮಾ ಅಡ್ವಾನ್ಸ್ ಪಡೆಯುವ ಹಾಗಿಲ್ಲ ಎಂದು ತಿಳಿಸಿದೆ.

ತಮಿಳಿನ ಸ್ಟಾರ್ ನಟ ಧನುಷ್ (Actor Dhanush) ಮೇಲೆ ಸಹಾ ನಿರ್ಮಾಪಕರ ಮಂಡಳಿ ಅಸಮಾಧಾನವನ್ನು ಹೊರ ಹಾಕಿದೆ. ಈ ನಟ ಅಡ್ವಾನ್ಸ್ ಪಡೆದು ಸಿನಿಮಾಗಳನ್ನ ಪೂರ್ತಿ ಮಾಡಿಲ್ಲವೆಂದು ನಿರ್ಮಾಪಕರು ದೂರನ್ನು ನೀಡಿದ್ದು, ಇನ್ಮುಂದೆ ಧನುಷ್ ಅವರ ಸಿನಿಮಾಗಳ ಮಂಡಳಿಯ ಗಮನಕ್ಕೆ ತಂದು ಒಪ್ಪಿಗೆ ಸಿಕ್ಕ ಮೇಲೆ ಚಿತ್ರೀಕರಣ ನಡೆಸಬೇಕೆಂದು ತಿಳಿಸಲಾಗಿದೆ.

ನಟ ಧನುಷ್ ಹಲವು ನಿರ್ಮಾಪಕರ ಬಳಿ ಮುಂಗಡ ಪಡೆದಿದ್ದು, ಸಿನಿಮಾಗಳನ್ನು ಪೂರ್ತಿ ಮಾಡಿಲ್ಲ ಎನ್ನಲಾಗಿದೆ. ಅವರ ಹೊಸ ಸಿನಿಮಾಗಳ ಶೂಟಿಂಗ್ ಪ್ರಾರಂಭ ಮಾಡೋಕೂ ಮೊದಲು ನಿರ್ಮಾಪಕರ ಮಂಡಳಿಯನ್ನು ಸಂಪರ್ಕಿಸಬೇಕೆಂದು ಸೂಚನೆ ನೀಡಲಾಗಿದೆ. ಸಿನಿಮಾ ಥಿಯೇಟರ್ ಗೆ ಬಂದ ಎಂಟು ವಾರಗಳ ನಂತರ ಓಟಿಟಿಗೆ ನೀಡಲು ನಿರ್ಧರಿಸಲಾಗಿದೆ.

Puttakkana Makkalu: ಯುವ ನಟಿಯರಿಗೆ ಸುವರ್ಣಾವಕಾಶ ಕೊಟ್ಟ ಪುಟ್ಟಕ್ಕನ ಮಕ್ಕಳು ಸೀರಿಯಲ್ ತಂಡ

Leave a Comment